
ತೆರದಾಳ :ಮಾ.11: ತೆರದಾಳ ಪಟ್ಟಣದಲ್ಲಿ ಶುಲ್ಲಕ ಕಾರಣಕ್ಕೆ ಇಬ್ಬರು ಸ್ನೇಹಿತರ ಮಧ್ಯೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ನಡೆದಿದೆ. ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಸಮೀಪ ಈ ಘಟನೆ ನಡೆದಿದ್ದು, ಮೃತ ಯುವಕನನ್ನು 19 ವರ್ಷದ ರಾಹುಲ್ ಸಪ್ತಸಾಗರ್ ಎಂದು ಗುರುತಿಸಲಾಗಿದೆ.
ಆರೋಪಿಯಾಗಿ ಶ್ರೇಯಸ್ ಎಂಬ ಯುವಕನನ್ನು ಗುರುತಿಸಲಾಗಿದೆ. ಮೃತ ರಾಹುಲ್ ಸಪ್ತಸಾಗರ್ ತೇರದಾಳ ಪಟ್ಟಣದ ಅರಳಿಕಟ್ಟಿ ಗಲ್ಲಿಯ ನಿವಾಸಿಯಾಗಿದ್ದು, ಡಿಪೆÇ್ಲಮಾ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದನು. ಇಬ್ಬರು ಸ್ನೇಹಿತರ ನಡುವೆ ಆಗಾಗ ಶುಲ್ಲಕ ವಿಚಾರಕ್ಕೆ ಕಿತ್ತಾಟ ಹಾಗೂ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಘಟನೆಯ ವೇಳೆ ಜಗಳ ತೀವ್ರಗೊಂಡ ಪರಿಣಾಮ ಶ್ರೇಯಸ್ ಚಾಕು ಇರಿದು ರಾಹುಲ್‍ನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಬಾಗಲಕೋಟೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಎಸ್.ಪಿ. ಸಿದ್ಧಾರ್ಥ್ ಗೋಯಲ್ ಮಾಹಿತಿ ನೀಡಿದ್ದು, “ಈ ಘಟನೆ ಹುಡುಗಿ ವಿಚಾರಕ್ಕೆ ಸಂಬಂಧಿಸಿದ ಕೊಲೆ ಅಲ್ಲ. ಶುಲ್ಲಕ ಕಾರಣದಿಂದ ಆರಂಭವಾದ ಜಗಳವೇ ಕೊಲೆಯಲ್ಲಿ ಅಂತ್ಯವಾಗಿದೆ” ಎಂದು ತಿಳಿಸಿದ್ದಾರೆ. ಬಾಗಲಕೋಟೆ ನಗರದಲ್ಲಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


























