Home ಜಿಲ್ಲೆ ಸಂಭ್ರಮದ ರಂಜಾನ್ ಆಚರಣೆ

ಸಂಭ್ರಮದ ರಂಜಾನ್ ಆಚರಣೆ

ಲಕ್ಷ್ಮೇಶ್ವರ,ಮಾ22: ಪಟ್ಟಣ ಸೇರಿದಂತೆ ತಾಲೂಕಿನ ತುಂಬೆಲ್ಲ ಮುಸ್ಲಿಂ ಸಮಾಜ ಬಾಂಧವರು ರಂಜಾನ್ ಹಬ್ಬದ ಕೊನೆಯ ದಿನವಾದ ನಿನ್ನೆ ಈದ್ ಉಲ್ ಫಿತರ್ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.


ಕಳೆದು ಒಂದು ತಿಂಗಳದಿಂದ ಉಪವಾಸ ವೃತ ಆಚರಣೆಯಲ್ಲಿ ತೊಡಗಿದ್ದ ಸಮಾಜ ಬಾಂಧವರು ನಿನ್ನೆ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಮತ್ತು ಪರಸ್ಪರ ಅಭಿನಂದಿಸುವ ಮೂಲಕ ರಂಜಾನ್ ಹಬ್ಬವನ್ನು ಸಂಪನ್ನಗೊಳಿಸಿದರು.


ಪಟ್ಟಣದ ಮುಕ್ತಿಮಂದಿರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಹೊಸ ಬಟ್ಟೆ ಧರಿಸಿ ಸಾವಿರಾರು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮಾಡಿದರು ಬಳಿಕ ಒಬ್ಬರನ್ನು ಒಬ್ಬರು ಅಭಿನಂದಿಸಿ ಹಬ್ಬದ ಶುಭಾಶಯಗಳು ಕೋರಿದರು.


ಈ ಸಂದರ್ಭದಲ್ಲಿ ಧರ್ಮ ಗುರು ಮಹಮ್ಮದ್ ಹಾಫೀಜ್ ಶಕೀಲ್ ಅವರು ಎಲ್ಲರೂ ಪರಸ್ಪರ ಸ್ನೇಹ ಶಾಂತಿ ಸೌಹಾರ್ದತೆಯಿಂದ ಬಾಳಿ ಬದುಕಬೇಕು ಜಗತ್ತಿನಲ್ಲಡೆ ಶಾಂತಿಯ ಸಮೃದ್ಧಿ ನೆಲೆಸಿ ನೆಮ್ಮದಿಯ ಬದುಕು ಅಲ್ಲಾಹು ದಯಪಾಲಿಸಲಿ ಎಂದು ಹೇಳಿದರು.


ಪ್ರಾರ್ಥನೆಯಲ್ಲಿ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಎಂಎಂ ಗದಗ ದಾದಾಪೀರ್ ಮುಚ್ಚಾಲೆ ಸಾಹೇಬ್ ಜಾನ್ ಹವಾಲ್ದಾರ ಫಿರ್ದೊಷ ಆಡೂರ ಜಾಕಿರ್ ಹುಸೇನ್ ಹವಾಲ್ದಾರ ಯುನಿ ಸ್ ಚೌರಿ ಕರೀಂ ಸುರಣಿಗಿ ಇಸ್ಮಾಯಿಲ್ ಆಡೂರ್ ಎನ್ ಎಂ ಗದಗ ಸೇರಿದಂತೆ ಸಾವಿರಾರು ಮುಸ್ಲಿಂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.