Home ಜಿಲ್ಲೆ ಕಲಬುರಗಿ ನಿರಗುಡಿಯಲ್ಲಿ ಸಿಡಿಲಿನ ಆರ್ಭಟ ಓರ್ವ ರೈತ ಮಹಿಳೆ ಸಾವು ಇಬ್ಬರು ಪಾರು

ನಿರಗುಡಿಯಲ್ಲಿ ಸಿಡಿಲಿನ ಆರ್ಭಟ ಓರ್ವ ರೈತ ಮಹಿಳೆ ಸಾವು ಇಬ್ಬರು ಪಾರು

ಆಳಂದ: ಮಾ.27:ತಾಲೂಕಿನ ನಿರಗುಡಿ ಗ್ರಾಮದಲ್ಲಿ ಗುರುವಾರ ಸಂಜೆ ವೇಳೆ ಗುಡುಗು ಸಹಿತ ಮಳೆ ಸಿಡಿಲಿನ ಆರ್ಭಟದಲ್ಲಿ ಓರ್ವ ರೈತ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ಗ್ರಾಮದ ಸುನಂದ ಗಂಡ ಭೀಮಾಶಂಕರ ಜಮಗೆ (42) ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಮೋಡ ಕವಿದ ವಾತಾವರಣದಿಂದಾಗಿ ಮಳೆ ಬರುತ್ತಿದೆ ಎಂದು ಕುಟುಂಬಸ್ಥರೊಂದಿಗೆ ದ್ವಿಚಕ್ರ ವಾಹನಕ್ಕೆ ಹೋಗಿ ಹೊಲದಲ್ಲಿನ ಕಟಾವು ಮಾಡಿ ಒಟ್ಟಿದ ಗೋಧಿ ಬಣಮೆಗೆ ತಾಡಪತ್ರಿ ಮುಚ್ಚಿದ ಮೇಲೆ ಗಾಳಿಗೆ ತಾಡಪತ್ರಿ ಹಾರದಿರಲಿ ಎಂದು ಕಲ್ಲು ಕುಡುಕಿ ಇಟ್ಟು ಇನ್ನೇನು ಮನೆಗೆ ಹಿಂದಿರಗಬೇಕೆನ್ನುವಷ್ಟೇರಲ್ಲ À ಅಪ್ಪಳಿಸಿದ ಸಿಡಿಲಿಗೆ ಮೃತಪಟ್ಟಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ.
ಗೋಧಿ ಕಟಾವು ಮಾಡಿ ಒಟ್ಟಿದ ಬಣಮೆಗೆ ಮಳೆ ಬರುವ ನಿರೀಕ್ಷೆಕಂಡು ತಾಡಪತ್ರಿ ಹೊಚ್ಚಿ ಕಲ್ಲಿಡಲು ತರಲು ಹೋಗಿದ್ದ ವೇಳೆ ಸಿಡಿಲು ಅಪ್ಪಳಿಸಿ ಮೃತಪಟ್ಟಿದ್ದಾಳೆ, ಹತ್ತಿರದಲ್ಲೇ ಇದ್ದ ಗಂಡ ಭೀಮಾಶಂಕ ಹಾಗೂ ಪುತ್ರ ಸಿದ್ಧರಾಮ ಭೀಮಾಶಂಕರ ಜಮಗೆ ಪಾರಾಗಿದ್ದಾರೆ.