
ಕಲಬುರಗಿ: ಈ ದಪ್ಪವಾದ ಬಟ್ಟೆಚೀಲದ ಬಗ್ಗೆ ಇಂದಿನ ಪೀಳಿಗೆಯವರಿಗೆ ಅಷ್ಟಾಗಿ ಪರಿಚಯವಿಲ್ಲ. ಇದನ್ನೇ ಚಾಗಲ್‍ನೀರಿನ ಚೀಲ” ಎಂದು ಕರೆಯುವರು. ಎಂಬತ್ತು ತೊಂಬತ್ತರ ದಶಕದಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದ ಇತ್ತು. ಇದರಲ್ಲಿ ನೀರು ತುಂಬಿ ಗಾಳಿಯಿರುವೆಡೆಗೆ ನೇತು ಹಾಕಿದರೆ ಕ್ಷಣಾರ್ಧದಲ್ಲಿ ತಣ್ಣಗಾಗುತಿತ್ತು.
ಎಲ್ಲಿಯಾದರೂ ತೆಗೆದುಕೊಂಡು ಹೋಗುವದು ಸುಲಭವಾಗಿತ್ತು. ಇದು ಒಂದು ರೀತಿ ಬಡವರ ಪ್ರಿಜ್ ಅಥವಾ ಮೊಬೈಲ್ ಫ್ರಿಜ್ ಆಗಿತ್ತು.ಮಾರುಕಟ್ಟೆಯಲ್ಲಿ ಬಾಟಲಿ ನೀರಿರಲಿಲ್ಲ. ನೀರಿನ ವ್ಯವಹಾರವಿರಲಿಲ್ಲ. ಬೇಸಿಗೆಯಲ್ಲಿ ಪ್ರವಾಸ ಹೋಗುವಾಗ ರೈಲಿನ ಹೊರಗೆ ಕಿಟಕಿಗೆ, ಜೀಪಿನ ಹೊರಗಡೆ, ಎತ್ತಿನ ಬಂಡಿಗೆ ಕಟ್ಟಿಕೊಂಡು ಹೋಗುತಿದ್ದ ದೃಶ್ಯ ಸಾಮಾನ್ಯವಾಗಿತ್ತು.ದಪ್ಪ ಬಟ್ಟೆಯ( ಕ್ಯಾನ್ವಸ್ ) ಚೀಲವಾಗಿರುವುದರಿಂದ ಹೊರಗಿನ ಗಾಳಿ ಆ ಚೀಲದ ರಂಧ್ರದ ಮುಖಾಂತರ ಒಳ ಹೋಗಿ ನೀರು ತಣ್ಣಗಾಗುತಿತ್ತು.
ಗುರುರಾಜ. ಪಟ್ಟಣಶೆಟ್ಟಿ



























