
ಕೋಲಾರ,ಫೆ,೨- ೧೨ನೇ ಶತಮಾನದಲ್ಲಿನ ಮಡಿವಾಳ ಮಾಚಯ್ಯನವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಂಡು ಜೀವನ ರೂಪಿಸಿ ಕೊಂಡಲ್ಲಿ ಬದುಕು ಸಾರ್ಥಕವಾಗಲಿದೆ ಎಂದು ಜಿಲ್ಲಾ ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್ ಅಭಿಪ್ರಾಯ ಪಟ್ಟರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮಡಿವಾಳ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಯ್ಯ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಸಮಾಜದಲ್ಲಿ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಮಾನವ ಧರ್ಮದ ಮಾನವಿಯತೆ, ಸಮಾನತೆಯನ್ನು ಪಾಲಿಸುವಂತಾಗ ಬೇಕು ಅದರೆ ಇಂದು ಸಮುದಾಯಗಳಲ್ಲಿ ಒಗ್ಗಟ್ಟು ,ಸಾಮರಸ್ಯ ಎಂಬುವುದು ಮರೆಯಾಗುತ್ತಿರುವುದು ವಿಷಾಧಾನೀಯ ಸಂಗತಿಯಾಗಿದೆ ಕಳವಳ ವ್ಯಕ್ತಪಡಿಸಿದರು.
ಮಡಿವಾಳ ಮಾಚಯ್ಯನವರು ದುರ್ಬಲರ ಶೋಷಣೆ, ಜಾತೀಯತೆ ಮೇಲು ಕೀಳು ತಾರತಮ್ಯ ಆಸ್ಪಶ್ಯತೆ, ಮೂಢ ನಂಬಿಕೆಗಳ ಸೃಷ್ಠಿ ,ಶಿಕ್ಷಣದಲ್ಲಿ ಅವಕಾಶ ವಂಚನೆ ಸೇರಿದೆಂತೆ ಅನೇಕ ಸಮಾಜಿಕ ಅಸಮಾನತೆಯಿಂದ ಜನತೆಯಿಂದ ಶೋಷಣೆಗೆ ತುತ್ತಾಗಿದ್ದರು. ವೃತಿ ನಿರತ ಶ್ರಮಜೀವಿಗಳು ಬಡವರು ದೀನ ದಲಿತರು ನಿರಾಶೆ ಹತಾಶೆಗೊಂಡು ಅಸಹನೀಯ ಬದುಕಿಗೆ ಒಳಗಾಗಿದ್ದರು. ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ಬಸವ ಮಾಜಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನು ಕೈಗೊಂಡರು ಎಂದರು.
ಶರಣರ ಅಗ್ರ ಗಣ್ಯ ಬಳಗದಲ್ಲಿ ಮಡಿವಾಳ ಮಾಚೀದೇವ ಅತ್ಯಂತ ಪ್ರಮುಖ ಸ್ಥಾನವನ್ನು ಅಲಂಕರಿಸಿದ್ದರು ಈ ಮಾಹಾನ್ ದರ್ಶನಿಕರ ವಚನ ಸಾಹಿತ್ಯ, ದಾಸ ಸಾಹಿತ್ಯ ತತ್ವ ಪದಗಳ ಕುರಿತು ಅರಿವು ಮೂಡಿಸ ಬೇಕಾಗಿದೆ ಇಂದಿನ ಸಂವಿಧಾನದ ಆಶಯಗಳನ್ನು ಅಂದಿನ ಕಾಲದ ಅನುಭವ ಮಂಟಪದಲ್ಲಿ ಕಂಡು ಬಂದಿತು. ಇವುಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕೆಂದು ಕರೆ ನೀಡಿದರು.
ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷದ ವೆಂಕಟ ಚಲಪತಿ ಮಾತನಾಡಿ ವೀರ ಮಡಿವಾಳ ಮಾಚಯ್ಯನವರ ಆದರ್ಶಗಳನ್ನು ಪ್ರತಿಯೊರ್ವರು ಪಾಲಿಸ ಬೇಕು. ಮಾಚಯ್ಯವನರ ನೇರ ನಿಷ್ಟೂರ ನುಡಿಗಳು. ಪ್ರಮಾಣಿಕತೆಗಳ ಮೂಲಕ ೧೨ನೇ ಶತಮಾನದ ಬಸವಣ್ಣನವರ ಅನುಯಾಯಿಗಳಾಗಿದ್ದರು ಎಂದರು.
ಮಡಿವಾಳ ತಳ ಸಮುದಾಯವರಾಗಿದ್ದು ಜಿಲ್ಲೆಯಲ್ಲಿ ೩೦ ಸಾವಿರ ಮಂದಿ ಇರುವ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಈ ಕಾರ್ಯಕ್ರಮವನ್ನು ನಿರ್ಲಕ್ಷಿಸಿರುವುದು ಬೇಸರದ ಸಂಗತಿಯಾಗಿದೆ. ನಾವು ಆಹ್ವಾನಿಸಿದರೂ ಸಹ ನಿರ್ಲಕ್ಷಿಸಿದವರು ಚುನಾವಣೆ ಸಂದರ್ಭಗಳಲ್ಲಿ ಮಾತ್ರ ನಮ್ಮ ಮನೆಯ ಬಾಗಿಲಿಗೆ ಬರುತ್ತಾರೆ ಜನಪ್ರತಿನಿಧಿಗಳಗೆ ನಮ್ಮ ಸಮುದಾಯದ ಶಕ್ತಿ ಪ್ರದರ್ಶನ ಮಾಡುವುದು ಅಗತ್ಯವಿದೆ. ಮಡಿವಾಳ ಸಮುದಾಯದವರು ಒಂದೇ ವೇದಿಕೆಯಲ್ಲಿ ಸಂಘಟಿತರಾಗಬೇಕೆಂದು ಕರೆ ನೀಡಿದರು.
ಇತರೆ ರಾಜ್ಯಗಳಲ್ಲಿ ಮಡಿವಾಳ ಸಮುದಾಯದವರು ಸಚಿವರುಗಳಾಗಿ ಶಾಸಕರಾಗಿದ್ದಾರೆ ಅದರೆ ಈ ಭಾಗದಲ್ಲಿ ಸಮುದಾಯದವರ ಸಂಖ್ಯೆ ಕಡಿಮೆ ಇರುವುದರಿಂದ ರಾಜಕೀಯ ವಲಯದಲ್ಲಿ ತಿರಸ್ಕಾರಕ್ಕೆ ತುತ್ತಾಗುತ್ತಿದ್ದೇವೆ ಎಂಬುವುದಕ್ಕೆ ಇಂದಿನ ಕಾರ್ಯಕ್ರಮವೇ ಉತ್ತಮ ನಿದರ್ಶನವಾಗಿದೆ ಎಂದು ಬೇಸರ ವ್ಯಕ್ತ ಪಡೆಸಿದರು,
ನನಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿಯುತ ಸ್ಥಾನವನ್ನು ನೀಡಿದ್ದಾರೆ. ಸಮುದಾಯದ ಮಕ್ಕಳ ಶಿಕ್ಷಣಾಭಿವೃದ್ದಿಗೆ ವಿದ್ಯಾರ್ಥಿ ನಿಲಯದ ಅಗತ್ಯವಿದ್ದು ಶೀಘ್ರದಲ್ಲೆ ಜಾಗ ಮಂಜೂರಾತಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಮುಂದಾಗ ಬೇಕಾಗಿದೆ ಎಂದರು.
ವರಲಕ್ಷ್ಮೀ ಅವರು ನೀಡಿದ ಉಪನ್ಯಾಸದಲ್ಲಿ ೧೨ನೇ ಶತಮಾನದ ನಡುಗನ್ನಡದಲ್ಲಿ ಮಾಚಯ್ಯನವರು ಸುಮಾರು ೨೫೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಮಾಚಯ್ಯನವರು ಕಾಯಕದ ಯೋಗಿಯೆಂದೆ ಪ್ರಚಲಿತರಾಗಿದ್ದರು. ಕಾಯಕವೇ ಕೈಲಾಸ ಎಂಬುವುದನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದು ಕಾಯಕವನ್ನು ದೈವಕ್ಕೆ ಸಮರ್ಪಣೆ ಮಾಡಿದ ವೀರಯೋಧರಾಗಿದ್ದರು. ಜಾತಿ ಆಸ್ಪಶ್ಯತೆ ವಿರುದ್ದು ಸಮಾನತೆ ಮಾನವ ಧರ್ಮಕ್ಕೆ ಒತ್ತು ನೀಡಿದರು.
ಅರಸತನ ಮೇಲಲ್ಲ-ಅಗಸತನ ಕೀಳಲ್ಲ ಎಂಬ ತತ್ವವನ್ನು ಸಾರಿದರು. ದುಡಿಯುವ ಶ್ರಮಜೀವಿಗಳಿಗೆ ಹೆಚ್ಚಿನ ಮಾನ್ಯತೆ ಗೌರವಗಳನ್ನು ನೀಡುತ್ತಿದ್ದರು. ಮಡಿವಾಳ ಮಾಚಯ್ಯವರ ವಚನಗಳು ಅಧ್ಯಾತ್ಮಿಕತೆಯಲ್ಲಿ ಪ್ರಮುಖ ಅಂಶಗಳಾಗಿವೆ ಎಂದರು.
ಶಿವಶರಣರ ವಸ್ತ್ರಗಳನ್ನು ಮಾತ್ರ ಶುಭ್ರ ಮಾಡುತ್ತಿದ್ದ ಮಾಚಯ್ಯನವರು ಬಿಜ್ಜಳನ ಪತ್ನಿಯ ವಸ್ತ್ರಗಳನ್ನು ಶುಭ್ರ ಮಾಡಿ ಕೊಡಲು ರಾಜನ ಅಜ್ಞೆಯನ್ನು ತಿರಸ್ಕರಿಸಿದಂತ ನಿಷ್ಟೋರವಾದಿ, ದೈರ್ಯವಂತ,ರಾಜನ ಅದೇಶ ತಿರಸ್ಕರಿಸಿದ ಮಾಚಯ್ಯನವರನ್ನು ತುಳಿಸಿಲು ಆನೆ ತಂದಾಗ ಆನೆಯನ್ನೆ ತನ್ನ ವೀರ ಖಡ್ಗದಿಂದ ತುಂಡರಿಸಿ ವೀರ ಸೇನಾನಿಯಾಗಿದೆ. ಮಾಚಯ್ಯನವರು ವೀರಗಂಟೆಯನ್ನು ಬಾರಿಸುವ ಮೂಲಕ ಮಡಿವಂತಿಕೆಯನ್ನು ಕಾಪಾಡಿ ಕೊಂಡು ಬರುತ್ತಿದ್ದು ಅವರನ್ನು ವೀರಭ್ರಧ್ರನ ಅಪವಾತರವೆಂದೇ ಕರೆಯುವುದು ಪ್ರಚಲಿತದಲ್ಲಿದೆ. ಬಸವಣ್ಣನವರ ಅನುಯಾಯಿಗಳಾದ ಮಾಚಯ್ಯ ನಿಜವಾದ ಜಂಗಮನೆಂದು ಅಕ್ಕಮಹಾದೇವಿ ನುಡಿದಿರುವುದನ್ನು ಸ್ಮರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಅಂಜನಪ್ಪ ಸೇರಿದಂತೆ ಇತರರು ಮಾತನಾಡಿದರು.
ಮುಖಂಡರಾದ ವಕ್ಕಲೇರಿ ತಮ್ಮಣ್ಣ, ಕುರಗಲ್ ವೆಂಕಟೇಶ್, ಶ್ರೀನಿವಾಸ್, ರಾಮಮೂರ್ತಿ ನರಸಿಂಹಯ್ಯ, ಶ್ರೀರಾಮಪ್ಪ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಗರದಲ್ಲಿ ಮಡಿವಾಳ ಮಾಚಯ್ಯನವರ ಭಾವ ಚಿತ್ರದ ಪಲ್ಲಕ್ಕಿಯ ಮೆರವಣಿಗೆ ನಡೆಯಿತು. ರಾಮನಗರ ಕಲಾವಿಧರ ತಂಡದಿಂದ ವೀರಗಾಸೆ ಹಾಗೂ ಡೊಳ್ಳು ಕುಣಿತ ಪ್ರದರ್ಶನ ನೀಡಿದರು.































