
ಕಲಬುರಗಿ. ಮೇ.8: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭಾರತ ಸೇವಾದಳದ ಸಂಸ್ಥಾಪಕರಾದ ಪದ್ಮಭೂಷಣ ಡಾ.ನಾ.ಸು ಹಡೀ9ಕರ್ ಅವರ ಸೇವೆ ಅನನ್ಯ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಭಾರತ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಶಶಿಲ್ ನಮೋಶಿ ಹೇಳಿದರು.
ಅವರು ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಭಾರತ ಸೇವಾದಳ ತಾಲೂಕ ಸಮಿತಿ ವತಿಯಿಂದ ಸೇವಾದಳದ ಕಚೇರಿಯಲ್ಲಿ ಏರ್ಪಡಿಸಿದ ಡಾ. ನಾರಾಯಣರಾವ ಸುಬ್ಬರಾವ ಹಡೀ9ಕರ್ ಅವರ 137ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಸುರೇಶ ಬಡಿಗೇರ ಅವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯುವಕರನ್ನು ಒಂದೆಡೆ ಸೇರಿಸಿ ರಾಷ್ಟ್ರಪ್ರೇಮ ಮತ್ತು ಹೋರಾಟದ ಹೆಜ್ಜೆಗಳನ್ನು ಡಾ. ನಾ.ಸು ಹಡೀ9ಕರ್ ಅವರು ಸರ್ವರಿಗೂ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಭಾರತ ಸೇವಾ ದಳದ ಜಿಲ್ಲಾ ಸದಸ್ಯ ಮಂಜುನಾಥ ನಾಲ್ವಾರಕರ್ ಮಾತನಾಡಿದರು. ಸೇವಾದಳದ ಜಿಲ್ಲಾ ಸಂಘಟಕ ಚಂದ್ರಶೇಖರ ಜಮಾದಾರ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ಶಿವಶರಣಪ್ಪ ಜಮಾದಾರ, ಭಾರತ ಸೇವಾದಳ ತಾಲೂಕ ಸಮಿತಿಯ ಅಧ್ಯಕ್ಷ ಜಯಪ್ರಕಾಶ ಕಟ್ಟಿಮನಿ , ತಾಲೂಕ ಸಮಿತಿಯ ಕಾಯ9ದಶಿ9 ಗುರುಲಿಂಗಯ್ಯ ವಿಶ್ವನಾಥಮಠ, ಸದಸ್ಯರಾದ ನಾಗರಾಜ ನಂದೂರ, ಸಂಪನ್ಮೂಲ ಶಿಕ್ಷಕರಾದ ಲಕ್ಷೀಪುತ್ರ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.






















