Home ಜಿಲ್ಲೆ ಕಲಬುರಗಿ ಜಾಫ್ರಾಬಾದ್‍ನಲ್ಲಿ ವಿವಿಧ ಕಾಮಗಾರಿಗೆ ಅಲ್ಲಮಪ್ರಭು ಪಾಟೀಲ್ ಅಡಿಗಲ್ಲು

ಜಾಫ್ರಾಬಾದ್‍ನಲ್ಲಿ ವಿವಿಧ ಕಾಮಗಾರಿಗೆ ಅಲ್ಲಮಪ್ರಭು ಪಾಟೀಲ್ ಅಡಿಗಲ್ಲು

ಕಲಬುರಗಿ,ಮೇ 7: ಭೀಮಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಫ್ರಾಬಾದ್ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭ ನೆರವೇರಿತು. ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ, ಸುಮಾರು 20 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿ ಹಾಗೂ ಸುಮಾರು 1.20 ಕೋಟಿ ರೂ. ವೆಚ್ಚದಲ್ಲಿ ಕೊಳವೆಬಾವಿ ಕಾಮಗಾರಿಗಳಿಗೆ ಶಾಸಕರು ಅಡಿಗಲ್ಲು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಹಜರತ್ ರುಕ್ಮುದ್ದೀನ್ ತೋಲಾ ದರ್ಗಾದ ಅನ್ವರ್ ಹುಸೇನ್ ಸಾಹೇಬ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಂತೋಷ್ ಪಾಟೀಲ್ ದಣ್ಣೂರ್, ಲಿಂಗರಾಜ ಕಣ್ಣಿ, ನಾಗರಾಜ ಜಿ. ಭಂಗೂರ, ವೀರಣ್ಣ ಬಂಗುರ್, ಲಡ್ಲೆ ಸಾಬ್ ಹರಸೂರ್, ಜಾಕಿರ್ ಹುಸೇನ್ ಹರಸೂರ್, ನಿಸಾರ್ ಅಹಮದ್, ಅಸ್ಲಾಂ ಸಿಂದಗಿ, ತೋಲಾ ಭಾಷಾ ಮುಜಾವರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಬಹುಕೋಟಿ ವೆಚ್ಚದ ಈ ಅಭಿವೃದ್ಧಿ ಕಾಮಗಾರಿಗಳು ಜಾಫ್ರಾಬಾದ್ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲಿವೆ. ಹಳ್ಳಿಗಳು ಮೂಲ ಸೌಕರ್ಯಗಳಿಂದ ಬಲಗೊಂಡಷ್ಟು ಅನುಕೂಲವಾಗಲಿದೆ. ಹಲ್ಳಿಗರಿಗೆ ರಸ್ತೆ, ನೀರು, ನಿಲ್ದಾಣ ಸೇರಿದಂತೆ ಹಲವು ಸವಲತ್ತು ನೀಡಲು ಆದ್ಯತೆ ನೀಡೋದಾಗಿ ಶಾಸಕರಾದ ಅಲ್ಲಂಪ್ರಭು ಪಾಟೀಲರು ಈ ಸಂದರ್ಭದಲ್ಲಿ ಸಾವ್ರಜನಿಕರನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.