
ಜೇವರಗಿ,ಮೇ 7: ತಾಲೂಕಿನ ಹಾಲಗಡ್ಲ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಒಳಗಾದ ದಲಿತ ಕುಟುಂಬಕ್ಕೆ
ಕುಡಿಯುವ ನೀರು ಒದಗಿಸಬೇಕು. ಜಾತಿ ನಿಂದನೆ ಪ್ರಕರಣ ದಾಖಲೆಯಾಗಿ ಸುಮಾರು ತಿಂಗಳು ಕಳೆದರೂ ಕುಡಿಯುವ ನೀರಿಗಾಗಿ ಬೋರ್ವೆಲ್ ಹಾಕದ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿಸದಸ್ಯ ಚಂದ್ರಶೇಖರ್ ಹರನಾಳ ಮತ್ತು ದಲಿತ ಮುಖಂಡ ಭಾರತೀಯ ದಲಿತ ಪ್ಯಾಂಥರ್ ವಿಭಾಗೀಯ ಅಧ್ಯಕ್ಷ ಭೀಮರಾಯ ನಗನೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಆಶ್ವಾಸನೆ ಕೊಟ್ಟ ತಾಲೂಕ ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಯಾವುದೇ ಕೆಲಸ ಮಾಡಿಲ್ಲ ಎಂದು ನೊಂದ ದೌರ್ಜನ್ಯಕ್ಕೆ ಒಳಗಾದ ಹಾಲಗಡ್ಲ ಗ್ರಾಮದ ದಲಿತ ಯುವಕ ಮಾಳಪ್ಪಪೂಜಾರಿ ತಿಳಿಸಿದ್ದಾರೆ
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ದೌರ್ಜನಕ್ಕೆ ಒಳಗಾದ ದಲಿತ ಕುಟುಂಬಕ್ಕೆ ಸಹಾಯಧನ ಪರಿಹಾರ ನೀಡಬೇಕು ಮತ್ತು ಬೋರ್ವೆಲ್ ಮತ್ತು ಹಿಟ್ಟಿನ ಗಿರಣಿ ಹಾಗೂ ರೇಷನ್ ದುಕಾನ್ ಮತ್ತು ಉದ್ಯೋಗ ನೀಡಬೇಕೆಂದು ತಿಳಿಸಿದ್ದಾರೆ ಒಂದು ವೇಳೆ ನಿರ್ಲಕ್ಷ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ತಿಳಿಸಿದ್ದಾರೆ





















