Home ಜಿಲ್ಲೆ ಕಲಬುರಗಿ ಭಾರತೀಯ ಸಂಸ್ಕøತಿ ಅಳಿವು ಉಳಿವು ವಿದ್ಯಾರ್ಥಿಗಳ ಕೈಯಲ್ಲಿ : ಸಿದ್ದಮ್ಮ ಗೊಬ್ಬುರ

ಭಾರತೀಯ ಸಂಸ್ಕøತಿ ಅಳಿವು ಉಳಿವು ವಿದ್ಯಾರ್ಥಿಗಳ ಕೈಯಲ್ಲಿ : ಸಿದ್ದಮ್ಮ ಗೊಬ್ಬುರ

ಕಲಬುರಗಿ:ಮೇ.7:ಒಂದು ನಾಡಿನ ಸಂಸ್ಕೃತಿಯ ವಾರಸುದಾರರೆಂದರೆ ಆ ನಾಡಿನ ಯುವಜನತೆ. ವಿದ್ಯಾರ್ಥಿಗಳು ಮನಸು ಮಾಡಿದರೆ ಮಾತ್ರ ಭಾರತೀಯ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಸಿದ್ದಮ್ಮ ಗೊಬ್ಬುರ ಅವರು ಹೇಳಿದರು.

ಕಲಬುರಗಿ ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ರಂದು ಹಮ್ಮಿಕೊಂಡಿದ್ದ ‘ಎಥನಿಕ್’ ದಿನದ ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನೂತನ ವಿದ್ಯಾಲಯ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ದಮ್ಮ ಗೊಬ್ಬುರ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಆಚಾರ-ವಿಚಾರಗಳು, ವೇಷಭೂಷಣಗಳು, ಊಟೋಪಚಾರ ಎಲ್ಲವೂ ಅನುಪಮವಾಗಿದ್ದು ವಿದೇಶಿಯರು ಇತ್ತ ಕಡೆ ವಾಲುತಿದ್ದರೆ, ನಾವು ಆಧುನಿಕತೆಯ ಭರಾಟೆಯಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತ ನಮ್ಮ ಸಂಸ್ಕೃತಿಯನ್ನು ಮರೆಯುತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ನೂತನ ವಿದ್ಯಾಲಯ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಗಣಕಯಂತ್ರ ವಿಜ್ಞಾನದ ಮುಖ್ಯಸ್ಥೆ ಮಂಜುಳಾ ಪಾಟೀಲ್ ಅವರು ಹಲವು ಜನಪದ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ರಂಜಿಸಿದರು.
ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಗೆ ಬಗೆಯ ಉಡುಗೆ ತೊಡುಗೆಯನ್ನು ತೊಟ್ಟು, ಭಾರತೀಯ ಸಂಸ್ಕೃತಿಯ ಸಂಕೇತದಂತೆ ಕಂಗೊಳಿಸುತ್ತಿದ್ದರು. ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಭರತನಾಟ್ಯದಂತಹ ಹಲವು ವೈವಿಧ್ಯಮಯ ದೃಶ್ಯಕ್ಕೆ ಮಹಾವಿದ್ಯಾಲಯವು ಸಾಕ್ಷಿಯಾಯಿತು. ವೇದಿಕೆಯ ಮೇಲೆ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಯಾನಂದ ಎಂ. ಶಾಸ್ತ್ರಿ ಹಾಗೂ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ನಿರ್ದೇಶಕ ಪೆÇ್ರ. ಗೋವಿಂದ ಪೂಜಾರ್ ಉಪಸ್ಥಿತರಿದ್ದರು.

ಈ ‘ಪಾರಂಪರಿಕ ವೇಷಭೂಷಣ ದಿನ’ಕ್ಕೆ ತಮ್ಮದೂ ಕೊಡುಗೆಯಿರಲಿಯೆಂದು ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರೂ ಸಹ ಆಕರ್ಷಕ ಉಡುಪುಗಳನ್ನು ಧರಿಸಿ ಪಾಲ್ಗೊಂಡಿದ್ದರು.