
ಕಲಬುರಗಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಎಂ.ಎಸ್.ಎಂ.ಇ ಘಟಕಗಳಿಗೆ ಸಂಬಂಧಪಟ್ಟಂತೆ ಹೊಸ ಕೈಗಾರಿಕಾ ನೀತಿಯನ್ನು ರೂಪಿಸುತ್ತಿದ್ದು, ಈ ಸಂಬಂಧ ನಗರದ ಸೂಪರ್ ಮಾರ್ಕೆಟ್ ಪ್ರದೇಶದ ಕೆ.ಕೆ.ಸಿ.ಸಿ.ಐ ಯಲ್ಲಿರುವ ಎಸ್.ಆರ್. ರಘೋಜಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಕಲಬುರಗಿ ವಿಭಾಗ ಮಟ್ಟದ ಪಾಲುದಾರರ ಸಮಾಲೋಚನ ಕಾರ್ಯಗಾರಕ್ಕೆ ಸಚಿವ ಶರಣಬಸಪ್ಪ ದಶರ್ನಾಪುರ ಚಾಲನೆ ನೀಡಿದರು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕೈಗಾರಿಕೆ ಮತ್ತು ವಾಣಿಜ್ಯ ವಿರ್ದೇಶಕ ಮಾಣಿಕ ವ್ಹಿ.ರಘೋಜಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ ಅಜೀಮ ಸೇರಿದಂತೆ ಹಲವರಿದ್ದರು.




















