Home ಕ್ರೈಂ ಸುದ್ದಿಗಳು ಜಮಖಂಡಿ ತಾಲೂಕಿನ ಸಿದ್ದಾಪುರದಲ್ಲಿ ಕಾರಿಗೆ ಬೆಂಕಿ; ಎಂಜಿನ್ ಸಂಪೂರ್ಣ ಸುಟ್ಟು ಭಸ್ಮಚಾಲಕ ಪ್ರಾಣಾಪಾಯದಿಂದ ಪಾರು

ಜಮಖಂಡಿ ತಾಲೂಕಿನ ಸಿದ್ದಾಪುರದಲ್ಲಿ ಕಾರಿಗೆ ಬೆಂಕಿ; ಎಂಜಿನ್ ಸಂಪೂರ್ಣ ಸುಟ್ಟು ಭಸ್ಮಚಾಲಕ ಪ್ರಾಣಾಪಾಯದಿಂದ ಪಾರು

ಜಮಖಂಡಿ: ಏ.8:ತಾಲೂಕಿನ ಸಿದ್ದಾಪುರ ಗ್ರಾಮದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ರಾತ್ರಿ ಸುಮಾರು 12:40ರ ಸುಮಾರಿಗೆ ರೆನಾಲ್ಟ್ ಟೈಗರ್ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಕಾರಿನ ಎಂಜಿನ್ ಭಾಗದಲ್ಲಿ ಆರಂಭವಾದ ಬೆಂಕಿ ಕೆಲವೇ ಕ್ಷಣಗಳಲ್ಲಿ ವ್ಯಾಪಿಸಿ, ಎಂಜಿನ್ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ತಿಳಿದುಬಂದಿದೆ.
ಘಟನೆ ಸಂಭವಿಸುತ್ತಿದ್ದಂತೆ ಕಾರಿನಲ್ಲಿದ್ದ ಚಾಲಕ ತಕ್ಷಣ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ. ಚಾಲಕನನ್ನು ಅಶೋಕ ಸದಾಶಿವ ಬರಗಿ ಎಂದು ಗುರುತಿಸಲಾಗಿದೆ.
ಬೆಂಕಿ ಕಾಣುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ನಂತರ ಅಗ್ನಿಶಾಮಕ ಸಿಬ್ಬಂದಿಗಳಾದ ಎನ್.ಪಿ. ಹುಗಾರ, ಎಮ್.ಬಿ. ಹಳೆಗೌಡರ, ಕೆ.ಬಿ. ಮುಲ್ಲಾ, ಬಿ.ಎಸ್. ರೋಳ್ಳಿ, ಎ.ಆರ್. ದೊಡಮನಿ, ಎಸ್.ಎಸ್. ವಾಜಂತ್ರಿ, ಎಸ್.ಎಸ್. ಕುಂಬಾರ ಹಾಗೂ ಎಸ್.ಎಮ್. ಹಿರೇಮಠ ಅವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲದಿದ್ದರೂ ಕಾರಿಗೆ ಭಾರೀ ಹಾನಿಯಾಗಿದೆ. ಬೆಂಕಿ ಕಾಣಿಸಿಕೊಂಡ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.