Home ಜಿಲ್ಲೆ ಸಂಸ್ಥಾಪನಾ ದಿನಾಚರಣೆ

ಸಂಸ್ಥಾಪನಾ ದಿನಾಚರಣೆ

ಲಕ್ಷ್ಮೇಶ್ವರ,ಏ7 : ಭಾರತೀಯ ಜನತಾ ಪಕ್ಷದ 47ನೇ ಸಂಸ್ಥಾಪನಾ ದಿನಾಚರಣೆಯನ್ನು ಲಕ್ಷ್ಮೇಶ್ವರದ ಬಸ್ತಿಬಣ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು., ಪಕ್ಷದ ಹಿರಿಯರು ಹಾಗೂ ಮುಖಂಡರು ಭಾಗವಹಿಸಿ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರಾದ ಚಂಬಣ್ಣ ಬಾಳಿಕಾಯಿ ಮಾತನಾಡಿ, ಬಿಜೆಪಿ 46 ವರ್ಷಗಳ ಪಯಣವನ್ನು ಸ್ಮರಿಸಿದರು. ಬಸ್ತಿಕೆರಿಯಿಂದ ಅಗಡಿ ಮೈಲಾರಪ್ಪ ಹಾಗೂ ಉಳಿವಿ ಪ್ರಕಾಶ ಅವರಿಂದ ಆರಂಭವಾದ ಸಂಘಟನೆ ಇಂದು ಬಲಿಷ್ಠವಾಗಿ ಬೆಳೆದಿದೆ ಎಂದು ಹೇಳಿದರು.

ಪಕ್ಷದ ಹಿರಿಯ ಮುಂಖಡರಾದ ಗೀರಿಶ ಅಗಡಿ ಮಾತನಾಡಿ, ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲ ಕಾರ್ಯಕರ್ತರು ಒಗ್ಗೂಡಿ ಒಂದಾಗಿ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ಬಹುಮತದಿಂದ ವಿಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರು ಹಾಗೂ ವಕೀಲರಾದ ರವಿಕಾಂತ ಅಂಗಡಿ ಮಾತನಾಡಿ, ಬಿಜೆಪಿ ನಿರ್ಮಾಣಕ್ಕೆ ಅನೇಕ ಕಾರ್ಯಕರ್ತರು ತ್ಯಾಗ ಮಾಡಿದ್ದಾರೆ. ಅವರ ಪರಿಶ್ರಮದಿಂದಲೇ ಪಕ್ಷ ಬೆಳವಣಿಗೆ ಕಂಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರಲು ಹಾಗೂ ಕೇಂದ್ರದಲ್ಲಿ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಸರ್ಕಾರವನ್ನು ಇನ್ನಷ್ಟು ಬಲಿಷ್ಠಗೊಳಿಸಲು ನಾವು ಶ್ರಮಿಸಬೇಕು ಎಂದು ಹೇಳಿದರು.
ಮುಂಬರುವ ಪುರಸಭೆ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಹಳೆಯ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಒಮ್ಮತದಿಂದ ಬಿಜೆಪಿ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರುವಂತೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಮುಖಂಡರಾದ ಮಂಜುನಾಥ ಮಾಗಡಿ ವೀರಯ್ಯ ಕಳ್ಳಿಮಠ ನಾಗರಾಜ ಚಿಂಚಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಚಂಬಣ್ಣ ಬಾಳಿಕಾಯಿ, ಗೀರಿಶ ಅಗಡಿ, ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಅಶೋಕ ನೀರಾಲೋಟಿ, ಗುರಪ್ಪ ಮುಳಗುಂದ, ರಾಘವೇಂದ್ರ ಪೂಜಾರ, ನಾಗರಾಜ ಚಿಂಚಲಿ, ವೀರಯ್ಯ ಕಳ್ಳಿಮಠ, ಪ್ರಕಾಶ ಮೇವುಂಡಿ, ಶಿವಣ್ಣ ಬನ್ನಿಮಟ್ಟಿ, ವಿನಯ ಪಾಟೀಲ, ಪಾರಮ್ಮ ಧರಣಿ, ನಿರ್ಮಲಾ ಧರಣಿ, ರಾಜು ಬೆಲ್ಲದ, ಪವನ್ ಬಂಕಾಪೂರ, ಚಂದ್ರು ಮಾಗಡಿ, ಮಲ್ಲಿಕಾರ್ಜುನ ನೀರಾಲೋಟಿ, ರವಿ ನೀರಾಲೋಟಿ, ಮಹಾಂತೇಶ ಹರಪನಹಳ್ಳಿ, ವಾಲೀಶಟ್ಟರ್, ಚಂದ್ರು ಧರಣಿ, ಶಂಕ್ರಣ್ಣ ಬ್ಯಾಡಗಿ, ಮಂಜುನಾಥ ಮಂಟಗಣಿ, ಗಂಗಾಧರ ಗಡೇಣ್ಣವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.