
ಕೋಲಾರ,ಮಾ,೩೦- ರಾಜ್ಯ ಸರ್ಕಾರದ ಮುಖ್ಯ ಮಂತ್ರಿ ಸೇವಾ ಪದಕಕ್ಕೆ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರಂ ಸಬ್ ಇನ್ಸ್ ಪೆಕ್ಟರ್ ಕಿರಣ್ ಕುಮಾರ್ ಮತ್ತು ಬಂಗಾರ ಪೇಟೆಯ ರೈಲ್ವೆ ಪೊಲೀಸ್ ಮುಖ್ಯ ಪೇದೆ ಆಶೋಕ್ ಕುಮಾರ್ ಆಯ್ಕೆಯಾಗಿ ಕೋಲಾರ ಜಿಲ್ಲೆಯ ಕೀರ್ತಿ ಪಾತಕಿ ಹಾರಿಸಿದ್ದಾರೆ.
ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ವಿ.ಕಿರಣ್ ಕುಮಾರ್ ಉತ್ತಮ ಜನಸ್ಣೆಹಿ ಕಾರ್ಯಕ್ಕೆ ೨೦೨೫ರ ಮುಖ್ಯ ಮಂತ್ರಿ ಪ್ರಶಸ್ತಿಗೆ ಭಜನರಾಗಿದ್ದಾರೆ. ಮೂಲತಹಃ ಮುಳಬಾಗಿಲು ಮುತ್ಯಾಲಪೇಟೆಯ ವೆಂಕಟರವಣಪ್ಪ ಹಾಗೂ ಮುನಿರತ್ನಮ್ಮ ದಂಪತಿಗಳ ಪುತ್ರರಾಗಿರುವ ಕಿರಣ್ ಕುಮಾರ್ ಕಳೆದ ೨೦೦೭ನೇ ಸಾಲಿನಲ್ಲಿ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯಲ್ಲಿ ಬೆಂಗಳೂರು ನಗರದಲ್ಲಿ ಆಯ್ಕೆಯಾಗಿ ಸೇವೆಯನ್ನು ಆರಂಭಿಸಿದರು. ೨೦೨೦ನೇ ಸಾಲಿನಲ್ಲಿ ಕೇಂದ್ರ ವಲಯದಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗೆ ನೇಮಕಾತಿಯಲ್ಲಿ ಆಯ್ಕೆಯಾಗಿ ಬಂಗಾರಪೇಟೆ, ಆನಗೊಂಡಹಳ್ಳಿ ತಿರುಮಲಶೆಟ್ಟಿಹಳ್ಳಿ ರಾಣೆಗಳಲ್ಲಿ ಪಿ.ಎಸ್.ಐ. ಅಗಿ ಕರ್ತವ್ಯ ನಿರ್ವಹಿಸಿದ್ದು ಪ್ರಸ್ತು ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ೨೦೨೩ನೇ ಸಾಲಿನಿಂದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ೩ ಡಕಾಯಿತಿ, ೯ ಸುಲಿಗೆ ಹಾಗೂ ೬೬ ಕಳವು ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಿ ಮಾಲು ಸಮೇತ ವಶ ಪಡೆಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಜನಸ್ನೇಹಿ ಆಡಳಿತ ನೀಡುತ್ತಿರುವ ಇವರು ಸಾರ್ವಜನಿಕರ ಪ್ರಶಂಸೆಗೆ ಭಜನರಾಗಿದ್ದಾರೆ.
ರೈಲ್ವೆ ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮತ್ತು ಪ್ರಮಾಣಿಕತೆಗೆ ಹೆಸರಾಗಿರುವ ಹೆಡ್ ಕಾನ್ಸ್‌ಟೇಬಲ್ ಬಿ.ವಿ.ಆಶೋಕ್ ಕುಮಾರ್ ಅವರು ಮುಖ್ಯ ಮಂತ್ರಿಗಳ ಪದಕದ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ಆಶೋಕ್ ಕುಮಾರ್ ಅವರು ಕಳೆದ ೨೦೦೫ರಲ್ಲಿ ರೈಲ್ವೆ ಪೊಲೀಸ್ ಇಲಾಖೆಗೆ ನೇಮಕವಾಗಿ ಬಳ್ಳಾರಿಯಲ್ಲಿ ಸೇವೆ ಪ್ರಾರಂಭಿಸಿದರು. ಕಳೆದ ೨೦೧೯ರಿಂದ ಬಂಗಾರಪೇಟೆಯಲ್ಲಿ ಸೇವೆ ಮುಂದುವರೆಸಿದ್ದು ಇಲಾಖೆಯಲ್ಲಿ ಪ್ರಮುಖ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಇವರು ನೇತ್ರತ್ವ ವಹಿಸಿದ್ದ ಅನೇಕ ಸಮಸ್ಯೆಗಳನ್ನು ಇತ್ಯಾರ್ಥ ಪಡೆಸಿದ ಕಾರಣ ಸರ್ಕಾರವು ೨೦೨೫-೨೬ನೇ ಸಾಲಿನ ಮುಖ್ಯ ಮಂತ್ರಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಈ ಹಿಂದೆ ಪೊಲೀಸ್ ಮಹಾನಿರ್ದೇಶಕರಿಂದ ಡಿಕಿ ಡಿಸ್ಕ್ ಪದಕಕ್ಕೆ ಭಜನರಾಗಿದ್ದರು. ರೈಲ್ವೆ ಇಲಾಖೆಯಲ್ಲಿ ಸುರಕ್ಷತೆ, ಅಪರಾಧ ಪತ್ತೆ, ತನಿಖೆ ಸೇರಿದಂತೆ ಸಾರ್ವಜನಿಕರೊಂದಿಗೆ ಸರಳತೆ, ಸೌಜನ್ಯತೆಗಳು ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದು ದಕ್ಷ ಆಧಿಕಾರಿಯ ಗೌರವಕ್ಕೆ ಮುಖ್ಯ ಮಂತ್ರಿ ಪದಕ ಲಭ್ಯವಾಗಿದೆ.
ಇವರಿಬ್ಬರು ಏಪ್ರಿಲ್ ೨ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳ ಪ್ರಶಸ್ತಿಗೆ ಭಜನರಾಗಲಿದ್ದಾರೆ.






















