ಕಲಬುರಗಿ: ಕರ್ನಾಟಕ ರಾಜ್ಯ ಮಾದಿಗ ಸಮಾಜ ಕಲಬುರಗಿ ಮತ್ತು ವಿವಿಧ ಸಂಘಟನೆಗಳ ನೆತೃತ್ವದಲ್ಲಿ ಇಂದು ರಾಜ್ಯ ಸರ್ಕಾರದ ಮಾದಿಗರ ವಿರೋಧಿ ಧೋರಣೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಕೈಗೊಂಡು ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತದ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಚಂದ್ರಕಾಂತ ನಾಟೀಕರ್, ರುಕ್ಕಪ್ಪ ಟಿ.ಕಾಂಬಳೆ, ರಾಜು ಭಂಡಾರಿ, ಶಿವಶರಣಪ್ಪ ನಿಗಂದಳ್ಳಿ, ಸುರೇಶ ವಾಡೇಕರ್, ಮಲ್ಲಿಕಾರ್ಜುನ ಚೆಟ್ಟನಳ್ಳಿ, ಸಿದ್ದಲಿಂಗ ಮಾಚನೂರು, ರೀಯಲ್ ಶಾಂತು ತಾರಫೈಲ್, ಮಹಾದೇವಪ್ಪ ಕಾವಳೆ ಸೇರಿದಂತೆ ಹಲವರು ಇದ್ದರು.