Home ಜಿಲ್ಲೆ ಕಲಬುರಗಿ ಗೊಬ್ಬುರವಾಡಿ: ರಾಚೋಟೇಶ್ವರರ 326ನೇ ಜಾತ್ರಾ ಮಹೋತ್ಸವ 31 ರಂದು

ಗೊಬ್ಬುರವಾಡಿ: ರಾಚೋಟೇಶ್ವರರ 326ನೇ ಜಾತ್ರಾ ಮಹೋತ್ಸವ 31 ರಂದು

ಕಮಲಾಪೂರ,ಮಾ.26-ತಾಲೂಕಿನ ಗೊಬ್ಬುರವಾಡಿ ಗ್ರಾಮದ ರಾಚೋಟೇಶ್ವರರ 326ನೇ ಜಾತ್ರಾ ಮಹೋತ್ಸವ ಮಾ.31 ರಂದು ಜರುಗಲಿದೆ.
ರಾಚೋಟೇಶ್ವರ ದೇವಾಲಯವು ಸುಮಾರು 326ನೇ ವರ್ಷಗಳ ಹಳೆಯ ದೇವಸ್ಥಾನವಾಗಿದ್ದು, ಐತಿಹಾಸಿಕ ಹಾಗೂ ಯಾತ್ರಾ ಸ್ಥಳವಾಗಿದೆ. ಅವತಾರಿ ಪುರುಷ ರಾಚೋಟೇಶ್ವರರು ಪರಮಾತ್ಮ ಅವತಾರವಿದ್ದು, ಶಿಷ್ಠರ ರಕ್ಷಕ ದುಷ್ಟರ ಸಂಹಾರಕನಾಗಿ ಜಗತ್ತನ್ನು ರಕ್ಷಿಸಿದ ಮಹಾ ಶಿವನಾದ ಪರಮಾತ್ಮ ಮಹಾ ಅವತಾರವೇ ರಾಚೋಟಿ ವೀರಭದ್ರನಾಗಿ ಪ್ರಸಿದ್ಧ ಪಡೆದ. ಮಹಾಮಹಿಮೆ ರುದ್ರ ಅವತಾರಿ , ರಾಚೋಟೇಶ್ವರ ಜಾತ್ರಾ ಮಹೋತ್ಸವ, ಪ್ರತಿವರ್ಷದಂತೆ ಈ ವರ್ಷವೂ ಕೂಡ ಅತಿ ವಿಜೃಂಭಣೆಯಿಂದ ಜರುಗುತ್ತಲಿದೆ. ಕಾರಣ ಸಕಲ ತದ್ಭಕ್ತರು ಆಗಮಿಸಿ ದೇವರ ಆಶೀರ್ವಾದ ಪಡೆದುಕೊಳ್ಳಬೇಕು. ಈ ಜಾತ್ರಾ ಮಹೋತ್ಸವದಲ್ಲಿ, ಮಂಗಳವಾರ ಬೆಳಿಗ್ಗೆ 11 ಗಂಟೆಗೆ ರುದ್ರಾಭಿಷೇಕ ಅನ್ನ ಪೂಜೆ ತುಂಬಾ ಮೇಳ ಭಕ್ತ ಸಮವರಿಂದ ಕಳಸ ಮೆರವಣಿಗೆ ರಥಕ್ಕೆ ಪ್ರಸಾರವನ್ನು ರಥಕ್ಕೆ ಹೊಸ ಅಡುಗೆಮನೆ ಹಾಗೂ ನಿಲಯದ ಉದ್ಘಾಟನೆ ಕಾರ್ಯಕ್ರಮ. ಮಧ್ಯಾಹ್ನ 3 ಗಂಟೆಗೆ ಪ್ರಸಾದ ವಿತರಣೆ ಭಕ್ತ ಸಮೂಹಕ್ಕೆ ಸನ್ಮಾನ ಸಮಾರಂಭ ಕಾರ್ಯಕ್ರಮ. ಸಾಯಂಕಾಲ 6:30 ಗಂಟೆಗೆ ಭಕ್ತ ಸಮೂಹದಿಂದ ಜ್ಯೋತಿ ಬೆಳಗಿಸುವದು. ರಾತ್ರಿ ಪಲ್ಲಕ್ಕಿ ಮೆರವಣಿಗೆ ಹಾಗೂ ಅಗ್ಗಿ ಸಮಾರಂಭ ಹಾಗೂ ರಥೋತ್ಸವದ ಸಮಾರಂಭದ ಜೊತೆಗೆ ವಿಶೇಷ ಡೊಳ್ಳಿನ ಕಾರ್ಯಕ್ರಮ ಹಾಗೂ ಮದ್ದು ಸುಡುವುದು ಪುರವಂತರ ಸೇವೆ, ಶಸ್ತ್ರಸೇವೆ ಸುತ್ತಮುತ್ತಲಿನ ಹಳ್ಳಿಯ ಭಕ್ತರಿಂದ ಹಾಗೂ ನುರಿತ ಕಲಾವಿದರು. ಸೂರ್ಯನಾರಾಯಣ ಭಜನ ಮಂಡಳಿ, ಚಿಟಗುಪ್ಪ ಇವರಿಂದ ಸಂಗೀತ ಕಾರ್ಯಕ್ರಮ, ಅಕ್ಕಮಹಾದೇವಿ ಮಹಿಳಾ ಮಂಡಲ ಬೆಳಕೇರ ಹಾಗೂ ಹಳ್ಳಿ ಖೇಡ(ಕೆ.) ಇವರಿಂದ ಭಜನೆ ಕಾರ್ಯಕ್ರಮ ನಡೆಯುತ್ತದೆ ಕಾರಣ ಸಕಲ ಸದ್ಭಕ್ತಾದಿಗಳು ಈ ಜಾತ್ರೆಯಲ್ಲಿ ಪಾಲ್ಗೊಂಡು ರಾಚೋಟೇಶ್ವರ ದೇವರ ದರ್ಶನ ಪಡೆದು ಪುನೀತರಾಗಬೇಕೆಂದು ಪಂಚಕಮಿಟಿಯ ಮಲ್ಲಿಕಾರ್ಜುನಯ್ಯ ಸ್ವಾಮಿ ಅವರು ತಿಳಿಸಿದ್ದಾರೆ.