
ಬೆಂಗಳೂರು, ಮಾ. ೨೬- ರಾಜಾಜಿನಗರ, ಶ್ರೀರಾಮಮಂದಿರದಲ್ಲಿ ಶ್ರೀರಾಮ ಸೇವಾ ಮಂಡಳಿ ವತಿಯಿಂದ ೭೦ನೇ ಶ್ರೀರಾಮೋತ್ಸವ ಆಚರಣೆಯನ್ನು ಮಾರ್ಚ್ ೨೬ರಿಂದ ೧೧ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಲಿದೆ.
ಅಗಮ, ಪಂಡಿತರು, ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷರಾದ ಕೆ.ಎಸ್.ಶ್ರೀಧರ್ ರವರು ವಿಶೇಷ ಪೂಜೆ ಸಲ್ಲಿಸಿ ೧೧ದಿನಗಳ ಕಾಲ ಜರುಗುವ ಶ್ರೀರಾಮೋತ್ಸವಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ.ಎಸ್.ಶ್ರೀಧರ್ ರವರು ಮಾತನಾಡಿ ಶ್ರೀರಾಮಮಂದಿರ ಶ್ರೀರಾಮ ದೇವಸ್ಥಾನದಲ್ಲಿ ಇಡಿ ರಾಜ್ಯದಲ್ಲಿ ಅತಿಡೊಡ್ಡ ಶ್ರೀರಾಮಾಂಜನೇಯ ಮೂರ್ತಿ ಪ್ರತಿಷ್ಠಾಪನೆಗೊಂಡಿರುವ ಸ್ಥಳ ಪ್ರಸಿದ್ದಿ ಪಡೆದಿದೆ. ಶ್ರೀರಾಮನವಮಿ ಪ್ರಯುಕ್ತ ಬ್ರಹ್ಮರಥೋತ್ಸವ , ಸುವರ್ಣ ವಜ್ರಾಂಗಿ ಅಲಂಕಾರ ಮಾಡಲಾಗುವುದು.
ಮಾರ್ಚ್ ೨೮ರಂದು ಶೇಷವಾಹೋನೋತ್ಸವ, ೨೯ರಂದು ಶ್ರೀರಾಮತಾರಕ ಹೋಮ ಹಾಗೂ ಗರುಡವಾಹನೋತ್ಸವ, ೩೦ರಂದು ಶ್ರೀ ಸೀತಾರಾಮ ಕಲ್ಯಾಣ, ಶ್ರೀ ಸೀತಾರಾಮ ಕಲ್ಯಾಣ ಅಲಂಕಾರ ೩೧ರಂದು ಮುಕ್ತಾಲಂಕಾರ ಸೇವೆ, ಆಶ್ವವಾಹನೋತ್ಸವ, ಏಪ್ರಿಲ್ ೧ರಂದು ಚತುರ್ದಶಿ ನವನೀತ ಬೆಣ್ಣೆ ಅಲಂಕಾರ , ೨ರಂದು ಪೌರ್ಣಿಮೆ ಸತ್ಯನಾರಾಯಣ ಪೂಜೆ , ವಿಶೇಷ ವಸ್ತ್ರಲಂಕಾರ ಸೇವೆ, ೩ರಂದು ಧನಲಕ್ಷ್ಮೀ ಅಲಂಕಾರ, ೪ರಂದು ಜನವಾಹನೋತ್ಸವ, ವಿಶೇಷ ವಸ್ತ್ರಾಭರಣಾಲಂಕಾರ, ೫ರಂದು ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ, ೬ರಂದು ಹನುಮಂತೋತ್ಸವ-
ವಸಂತೋತ್ಸವ ಹಾಗೂ ಶಯನೋತ್ಸವ ಅಲಂಕಾರ .
ಶ್ರೀರಾಮನವಮಿ ಪ್ರಯುಕ್ತ ೧೧ದಿನಗಳ ಕಾಲ ರಾಮಾಯಣ ಗೊಂಬೆಯಾಟ, ಭರತನಾಟ್ಯ , ಸಂಗೀತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಇರುತ್ತದೆ ಎಂದು ಹೇಳಿದರು.
ಶ್ರೀರಾಮ ಸೇವಾ ಮಂಡಳಿಯ ಪದಾಧಿಕಾರಿಗಳಾದ ಕೆ.ಆರ್.ವಿಜಯರಾಘವನ್, ಎಸ್.ಮಹೇಶ್, ಜಯರಾಮ್, ಡಾ.ಮಂಜುನಾಥಸ್ವಾಮಿ, ವೆಂಕಟೇಶ್ ಬಾಬು, ಭರತ್, ಸುದರ್ಶನ್, ಗೀತಾ ರಮೇಶ್, ಭಕ್ತಾಧಿಗಳು ಭಾಗವಹಿಸಿದ್ದರು.



























