Home ಜಿಲ್ಲೆ ಬಿಸಿಲಿನ ಬೇಗೆ: ಹೂ, ಸೊಪ್ಪು ಮಾರಾಟಗಾರರ ಪರದಾಟ

ಬಿಸಿಲಿನ ಬೇಗೆ: ಹೂ, ಸೊಪ್ಪು ಮಾರಾಟಗಾರರ ಪರದಾಟ


ಲಕ್ಷೆ÷್ಮÃಶ್ವರ,ಮಾ.೨೫: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಹೂವು ಮತ್ತು ಸೊಪ್ಪಿನ ಪಲ್ಯಗಳ ಮೇಲೆ ಪರಿಣಾಮ ಬೀರುತ್ತಿದ್ದು ಮಾರಾಟಗಾರರೂ ಪರದಾಡುವಂತಾಗಿದೆ.
ಮಧ್ಯಾಹ್ನ ೧೨ ಗಂಟೆಯ ನಂತರ ವಿಪರೀತವಾದ ಬಿಸಿಲಿನಿಂದಾಗಿ ಮಾರಾಟ ಮಾಡುವ ಹೂವುಗಳು ಮಾಲೆಗಳು ಬಾಡುತ್ತಿವೆ ಇದರಿಂದಾಗಿ ಗ್ರಾಹಕರು ಮಾಲೆ ಮತ್ತು ಹೂಗಳನ್ನು ಕೊಳ್ಳಲು ಹಿಂಜರಿಯುತ್ತಿದ್ದಾರೆ.

ಮೊದಲೇ ಬೇಸಿಗೆಕಾಲ ಆಗಿರುವುದರಿಂದ ಮಲ್ಲಿಗೆ ಕನಕಾಂಬರಿ ಸೂಜಿಮಲ್ಲಿಗೆ ಕೆಂಡಸAಪಿಗೆ ಸೇರಿದಂತೆ ಅನೇಕ ಹೂವು ಗಳು ದುಬಾರಿಯಾಗಿದ್ದು ರೈತರಿಂದ ಖರೀದಿಸಿ ಮಾಲೆ ಮಾಡಿ ಮಾರಾಟ ಮಾಡುವುದರಿಂದ ಅಲ್ಪಸ್ವಲ್ಪ ಲಾಭವನ್ನು ಪಡೆಯುತ್ತಿದ್ದ ಹೂ ಮಾರಾಟಗಾರರು ಈ ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದು ಪದೇ ಪದೇ ಅವುಗಳ ತಾಜಾತನ ಉಳಿಸಲು ನೀರು ಸಿಂಪಡಣೆ ಮಾಡುವುದರಿಂದ ಹೂವುಗಳು ಹಾನಿ ಗೀಡಗುತ್ತವೆ ಎಂಬ ಗೋಳಾಟ ಮಾರಾಟಗಾರರದ್ದಾಗಿದೆ.


ಅದೇ ರೀತಿ ಮಾರುಕಟ್ಟೆಯಲ್ಲಿ ಸೊಪ್ಪಿನ ಪಲ್ಯಗಳಾದ ಕಿರಕಶಾಲಿ ಕರಿಬೇವು , ಕೊತ್ತಂಬರಿ , ಹರವಿ ರಾಜಗಿರಿ ಮೆಂತೆ ಮೂಲಂಗಿ ಮುಂತಾದ ಸೊಪ್ಪಿನ ಪಲ್ಯಗಳು ಮಧ್ಯಾಹ್ನವಾಗುತ್ತಿದ್ದಂತೆಯೇ ಬಾಡುತ್ತಿರುವುದರಿಂದ ಇವುಗಳನ್ನು ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವ್ಯಾಪಾರಸ್ಥರಿಗೂ ಬಿಸಿಲು ಹೊಟ್ಟೆಗೆ ಬರಿ ಹಾಕಿದೆ.


ಹೂವು ಮತ್ತು ಸೊಪ್ಪಿನ ಪಲ್ಯ ಮಾರಾಟ ಮಾಡುವವರ ಸ್ಥಿತಿ ಈ ಎರಡು ತಿಂಗಳು ಕಣ್ಣೀರಿನ ಕಥೆಯಾಗಿದೆ ಎಂಬುದು ವ್ಯಾಪಾರಸ್ಥರ ಆಳಲಾಗಿದೆ.