Home ಜಿಲ್ಲೆ ಒಳಮೀಸಲಾತಿ ರದ್ಧತಿಗೆ ಮನವಿ

ಒಳಮೀಸಲಾತಿ ರದ್ಧತಿಗೆ ಮನವಿ


ಲಕ್ಷೆ÷್ಮÃಶ್ವರ ,ಮಾ.೨೪: ಎಸ್. ಸಿ. ಒಳ ಮೀಸಲಾತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ತಾಲೂಕಾ ತಾಂಡಾದ ಯುವಕರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತುಕ್ಕಪ್ಪ ಪೂಜಾರ ಸಂತೋಷ್ ರಾಥೋಡ್ ಪರಮೇಶ ಲಮಾಣಿ ಅವರು ಒಳ ಮೀಸಲಾತಿಯಿಂದ ಸಣ್ಣ ಸಣ್ಣ ಸಮಾಜದ ಸಮುದಾಯ ಗಳಿಗೆ ಅನ್ಯಾಯವಾಗಲಿದೆ ಸರ್ಕಾರ ಈ ಕೂಡಲೇ ಒಳ ಮೀಸಲಾತಿಯನ್ನು ರದ್ದು ಮಾಡಿ ನ್ಯಾಯ ಒದಗಿಸಬೇಕು ಎಂದು ಹೇಳಿದರು.


ಲಂಬಾಣಿ ಬಂಜಾರ ಸಮುದಾಯದ ಜನರು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ಜನಾಂಗ ಇದುವರೆಗೂ ತಮ್ಮ ಬದುಕು ಕಟ್ಟಿಕೊಳ್ಳಲು ಮಂಗಳೂರು ಗೋವಾ ಉಡುಪಿ ಕೇರಳ ಮುಂಬೈ ಮುಂತಾದ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಬಡ ಮತ್ತು ಹಿಂದುಳಿದ ಈ ಜನಾಂಗದ ಜೊತೆಗೆ ಭಜಂತ್ರಿ ಕೊರಮ ಕೊಂಚ ಬೋವಿ ಸೇರಿದಂತೆ ಹಲವು ಸಣ್ಣ ಸಣ್ಣ ಸಮಾಜಗಳಿಗೆ ಒಳ ಮೀಸಲಾತಿಯಿಂದ ಅನ್ಯಾಯವಾಗಲಿದೆ ಎಂದರು.


ಮನವಿ ಪತ್ರವನ್ನು ಸ್ವೀಕರಿಸಿದ ಗ್ರೇಡ್ _೨ ತಹಸಿಲ್ದಾರ್ ಮಂಜುನಾಥ ಅಮಾಸಿಯವರು ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಕಳುಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಗಿರೀಶ ಲಮಾಣಿ ಕಿರಣ ಲಮಾಣಿ ಗಣೇಶ ಲಮಾಣಿ ಕೃಷ್ಣ ಲಮಾಣಿ ಉಮೇಶ್ ಲಮಾಣಿ ತುಳಜಾಪ್ಪ ಲಮಾಣಿ ಸಂತೋಷ ಲಮಾಣಿ ಚೆನ್ನಪ್ಪ ಲಮಾಣಿ ವೆಂಕಪ್ಪ ಲಮಾಣಿ ಸೇರಿದಂತೆ ಅನೇಕ ಯುವಕರಿದ್ದರು.