Home ಜಿಲ್ಲೆ ಕಲಬುರಗಿ ಛಾಯಾಚಿತ್ರಗಳು ತಲೆಮಾರುಗಳ ಕಥೆ ಹೇಳುತ್ತವೆ: ವೆಂಕಣ್ಣ ದೊಣ್ಣೆ ಗೌಡರು

ಛಾಯಾಚಿತ್ರಗಳು ತಲೆಮಾರುಗಳ ಕಥೆ ಹೇಳುತ್ತವೆ: ವೆಂಕಣ್ಣ ದೊಣ್ಣೆ ಗೌಡರು

ಕಲಬುರಗಿ,ಮಾ.15-ಛಾಯಾಚಿತ್ರ ಕಲೆ ಯಂತ್ರ ಮುಖೇನ ಸೃಷ್ಟಿಯಾಗುತ್ತದೆ, ನಿಜ ಆದರೆ ಅದರ ಹಿಂದೆ ಸೃಜನಶೀಲ ಕಲಾವಿದನ ಮನಸ್ಸು ಇದ್ದರೆ ಅದು ಒಂದು ಸುಂದರ ಕಲಾಕೃತಿಯಾಗುತ್ತದೆ’ ಎಂದು ಜಿಲ್ಲಾ ಫೆÇೀಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ತೋಟದ ಹೇಳಿದರು.
ನಗರದ ಮಾನಕರ ಲೇಔಟ್ ನಲ್ಲಿರುವ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗದ ಹವ್ಯಾಸಿ ಛಾಯಾಗ್ರಾಹಕ ಉದಯಕುಮಾರ ಬಗಲಿ ಅವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನವನ್ನು ವಿಕ್ಷೀಸಿ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ವೆಂಕಣ್ಣ ದೊಣ್ಣೆಗೌಡ ಅವರು ‘ಛಾಯಾಚಿತ್ರಗಳು ಕಾಲದ ದಾಖಲೆಗಳಾಗಿ ಮಹತ್ವದ ಪಾತ್ರ ವಹಿಸುತ್ತವೆ, ನಿಸರ್ಗದಲ್ಲಿ ಎಲ್ಲವೂ ನಿರಂತರ ಬದಲಾವಣೆಯ ಪ್ರಕ್ರಿಯೆಗೆ ಒಳಗತ್ತಲೇ ಇರುತ್ತದೆ, ಆದರೆ ತಲೆಮಾರುಗಳು ಉರುಳಿದರೂ, ಕಾಲದ ಅಂತರದಲ್ಲಿ, ಸನ್ನಿವೇಶ ಸಂದರ್ಭಗಳಲ್ಲಿ ಬದಲಾದ ಸ್ಥಿತಿಗಳನ್ನು ಛಾಯಾಚಿತ್ರಗಳು ತೋರಿಸುತ್ತವೆ’ ಎಂದರು. ಮುಂದುವರಿದು ‘ಸಾವಿರಾರು ಶಬ್ದಗಳಲ್ಲಿ ವರ್ಣಿಸಬಹುದಾದುದನ್ನು ಒಂದು ಛಾಯಾಚಿತ್ರ ನೋಟ ಒಂದರಲ್ಲೇ ಎಲ್ಲವನ್ನೂ ಅರಿವಿಗೆ ತಂದುಕೊಡುತ್ತದೆ’ ಎಂದು ಬಣ್ಣಿಸಿದರು.
‘ಛಾಯಾಚಿತ್ರಕಲೆಯಲ್ಲಿ ಸನ್ನಿವೇಶದ ಆಯ್ಕೆ, ನೆರಳು ಬೆಳಕಿನ ಹೊಯ್ ದಾಟ ಬಹಳ ಮುಖ್ಯವಾಗಿರುತ್ತದೆ’ ಎಂದು ಇನ್ನೋರ್ವ ಅತಿಥಿಯಾಗಿದ್ದ ಕಲಾವಿದ ಗುರುಲಿಂಗ ಅರಳಿಯವರು ಹೇಳಿದರು.
ಬಿಸಿಲು ಆರ್ಟ್ ಗ್ಯಾಲರಿಯ ಕ್ಯೂರೇಟರ್ ಮತ್ತು ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ವಿ ಬಿ ಬಿರಾದಾರ ಅವರು ಮಾತನಾಡಿ ‘ಛಾಯಾಚಿತ್ರ ಕಲೆ ಸೌಂದರ್ಯವನ್ನು ಸೃಷ್ಟಿಸುವ ಕಲೆಯಾಗಿದ್ದು, ಸೌಂದರ್ಯ ಎನ್ನುವುದು ನೋಟಕನ ಭಾವನೆಯನ್ನು ಅವಲಂಬಿಸಿರುತ್ತದೆ, ಸೃಜನಶೀಲರು ಕುರೂಪದಲ್ಲೂ ಸೌಂದರ್ಯವನ್ನು ಕಾಣುತ್ತಾರೆ, ಛಾಯಾಚಿತ್ರಣವೂ ಒಂದು ಸೃಜನಶೀಲ ಕಲೆಯಾಗಿದ್ದು, ಛಾಯಾಚಿತ್ರಕಾರರು ಸೌಂದರ್ಯ ಮೀಮಾಂಸಕರಿದ್ದಂತೆ’ ಎಂದು ಹೇಳಿದರು.
ಕಲಾವಿದ ಮಲ್ಲಿಕಾರ್ಜುನ ಕೊರಳ್ಳಿಯವರು ಕಾರ್ಯಕ್ರಮವನ್ನು ನಿರೂಪಿಸಿದರು, ಇನ್ನೋರ್ವ ಕಲಾವಿದ ರಾಜು ಕಾಳೆ ವಂದಿಸಿದರು.
ಕಲಾವಿದರಾದ ಸೂರ್ಯಕಾಂತ ನಂದೂರ, ದೌಲತರಾಯ ದೇಸಾಯಿ, ಜಿತೇಂದ್ರ ಕೊಥಲೀಕರ, ನಾರಾಯಣ ಜೋಶಿ, ಮೌನೇಶ್ ಬಡಿಗೇರ, ಗಿರೀಶ ಕುಲಕರ್ಣಿ. ಡಾ ಶಿವಾನಂದ ಬಂಟನೂರ,ಜಗದೀಶ್ ಕಾಂಬಳೆ, ವಿಜಯಕುಮಾರ, ಕುಪೇಂದ್ರ ಮೊದಲಾದ ಕಲಾವಿದರು ಉಪಸ್ಥಿತರಿದ್ದರು. ಪ್ರದರ್ಶನ ಮಾ 18 ಮಧ್ಯಾಹ್ನ 4 ಗಂಟೆ ರಿಂದ ರಾತ್ರಿ 8 ಗಂಟೆವರೆಗೆ ಸಾರ್ವಜನಿಕರು,ಕಲಾಆಸಕ್ತರು ಕಲಾವಿದರು ವಿಕ್ಷೀಸಬಹುದು.