
ಕಲಬುರಗಿ,ಮಾ.16-“ಮುಂಗನಸು” ಕವನ ಸಂಕಲನವು ವರ್ತಮಾನದ ಹಲವು ತಲ್ಲಣಗಳನ್ನು ಪ್ರತಿಬಿಂಬಿಸುತ್ತದೆ. ಈ ಕೃತಿಯ ಹಲವು ಕವನಗಳು ಇಂದಿನ ಕಲುಷಿತ ಪರಿಸರದ ಕುರಿತು ಕಳಕಳಿ, ಸಾಮರಸ್ಯ, ಹಸಿವು, ಪ್ರೀತಿ ತಂದೆ ತಾಯಿ ಮತ್ತು ಗುರುವಿನ ಆಶೀರ್ವಾದಗಳ ಕುರಿತು ಲೇಖಕರು ಕವಿತೆಗಳ ಮುಖಾಂತರ ತಮ್ಮ ಭಾವನೆಗಳು ಹಂಚಿಕೊಂಡಿದ್ದಾರೆ ಎಂದು ಹೇಳಿದರು ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಚಿದಾನಂದ ಚಿಕ್ಕಮಠ ಹೇಳಿದರು.
ಕಲಬುರ್ಗಿ ಸಾಂಸ್ಕøತಿಕ ಪ್ರತಿಷ್ಠಾನ ನಗರದ ಕಲಾಮಂಡಳದಲ್ಲಿ ಆಯೋಜಿಸಿದ್ದ ಹಿರಿಯ ಸಾಹಿತಿ ರೇವಣಸಿದ್ಧಪ್ಪ ದುಕಾನ ಅವರು ರಚಿಸಿದ “ಮುಂಗನಸು” ಎಂಬ ಕವನ ಸಂಕಲನವನ್ನು ಪರಿಚಯಿಸಿದರು.
ರಾಜ್ಯದ ಅಖಿಲ್ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ಅವರು ಕೃತಿ ಜನಾರ್ಪಣೆಗೊಳಿಸಿದರು.
ಡಾ.ವಿಜಯಕುಮಾರ ಪರುತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಡಿವಾಳಪ್ಪ ಹಣಮಗೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಬಸವರಾಜ ಗೌನಳ್ಳಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಸಾಹಿತಿ ಮತ್ತು ಸಂಘಟಕರಾದ .ಬಿ.ಎಚ್.ನಿರಗುಡಿ ಅವರು ಪ್ರಾಸ್ತಾವಿಕ ಮಾತನಾಡಿದರು, ಗುರುಪ್ರಸಾದ ದುಕಾನ ಅವರು ಎಲ್ಲರನ್ನು ಸಭೆಗೆ ಸ್ವಾಗತಿಸಿದರು, ಕೊನೆಯಲ್ಲಿ ರೇವಣಸಿದ್ಧಯ್ಯಾ ನರನಾಳ ಅವರು ವಂದಿಸಿದರು. ಡಾ.ಶ್ವೇತಾ ಗುರುಪ್ರಸಾದ ದುಕಾನ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಹಿರಿಯ ಸಾಹಿತಿಗಳಾದ ಡಾ.ಹಣಮಂತರಾವ ದೊಡ್ಡಮನಿ, ಡಾ.ಗವಿಸಿದ್ಧಪ್ಪ ಪಾಟೀಲ್, ಡಾ.ಟಿ.ಗುರುಬಸ್ಸಪ್ಪ, ಡಾ.ಕಾಶಿನಾಥ ಬಿರಾದಾರ, ಡಾ.ಎಸ್.ಎಸ್.ಗುಬ್ಬಿ , ಎಚ್.ಎಸ್ ಕೌಂಟೆ, ವಿಜಯಕುಮಾರ್ ಹಂಚಿನಾಳ, ಶ್ರೀಶೈಲ ಬೋನಾಳ, ಬಸವರಾಜ ಗಾಣೂರೆ, ರವಿಂದ್ರರೆಡ್ಡಿ, ಶ್ರೀಶೈಲ ಮದಾನೆ, ಡಾ.ನಾಗಪ್ಪ ಗೋಗಿ, ಸಿದ್ದರಾಮಯ್ಯ ಮಠ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



























