
ಕಲಬುರಗಿ:ಮಾ,16:ಶಾಲಾ ಶಿಕ್ಷಣ ಇಲಾಖೆ ಹಾಗೂ ಅಕ್ಷರಾ ಫೌಂಡೇಶನ್ ಅವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕೀರ್ಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಕಲ್ಬುರ್ಗಿ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ ಜಮಖಂಡಿ ಉದ್ಘಾಟಿಸಿ ಮಾತನಾಡುತ್ತ ಶಿಕ್ಷಕ ವೃತ್ತಿ ಪವಿತ್ರವಾದ ಕಾಯಕ. ಮಕ್ಕಳಿಗೆ ರಾಷ್ಟ್ರ ಭಕ್ತಿ ಹಾಗೂ ಮಾನವೀಯ ಮೌಲ್ಯಗಳು ಬಿತ್ತುವ ಕಾರ್ಯ ನಿರಂತರವಾಗಿ ಸಾಗಿದಾಗ ಮಾತ್ರ ಉತ್ತಮ ದೇಶ ಕಟ್ಟಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು. ಡಿ.ವೈ.ಪಿ.ಸಿ ಪತ್ತಾರ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ
ಕಲ್ಬುರ್ಗಿ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಲ್ಲಯ್ಯ ಗುತ್ತೇದಾರ,
ಶಹಾಬಾದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವಪುತ್ರ ಕರ್ಣಿಕ್,ಅಕ್ಷರಾ ಫೌಂಡೇಶನ್ ರಾಜ್ಯ ಸಂಯೋಜಕರಾದ ವಿ. ರಂಗನಾಥ್ ಅವರು ಭಾಗವಹಿಸಿದ್ದರು.
ಇದೆ ಸಂದರ್ಭದಲ್ಲಿ ಕಲ್ಬುರ್ಗಿ ಜಿಲ್ಲೆಯ ಉತ್ತಮ ಫಲಿತಾಂಶ ಸಾಧಿಸಿದ 25 ಕ್ಲಸ್ಟರ್‍ಗಳ ಸಿಆರ್‍ಪಿ ರವರು ಹಾಗೂ 25 ಜನ ಮುಖ್ಯೋಪಾಧ್ಯಾಯರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಆಳಂದ ತಾಲೂಕಿನ ಕೆಳಗಿನ ಕ್ಲಸ್ಟರ್‍ಗಳ ಸಿಆರ್‍ಪಿ ರವರಿಗೆ ಮಾನ್ಯ ಉಪನಿರ್ದೇಶಕರ ಕಚೇರಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರಾದ
CRP ಹೊದಲೂರ ವೀರೇಶ ಬೋಳಶೆಟ್ಟಿ,CRP ವಿ.ಕೆ. ಸಲಗರ ಬಾಬುರಾವ ಹರಿದಾಸ,
CRP ಮಟಕಿ ಸಿದ್ದಾರ್ಥ ಅಟೂರ,CRP ಹಿರೋಳ್ಳಿ ನಾಗಪ್ಪ ಮದರಿ, CRP ದರ್ಗಾಶಿರೂರ ನಾಗೇಂದ್ರಪ್ಪ ಚಿಂಚೋಳಿ
ಅವರಿಗೆ ಗೌರವಿಸಲಾಯಿತು.



























