Home ಜಿಲ್ಲೆ ಬೀದರ್‍ನ ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅದ್ದೂರಿ ಮಹಿಳಾ ದಿನಾಚರಣೆ

ಬೀದರ್‍ನ ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅದ್ದೂರಿ ಮಹಿಳಾ ದಿನಾಚರಣೆ

ಬೀದರ್: ಮಾ.16:ಇಲ್ಲಿನ ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ವಿಭಿನ್ನವಾಗಿ ಆಚರಿಸಲಾಯಿತು. “ಬಚ್‍ಪನ್: ರಿವಿಸಿಟ್, ರಿಲೀವ್, ರಿಜಾಯ್ಸ್” ಎಂಬ ವಿಶೇಷ ಪರಿಕಲ್ಪನೆಯಡಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ಸುಮನಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸುನೀತಾ ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಾಲನೆ ನೀಡುತ್ತಾ ನಮ್ಮ ಜೀವನದಲ್ಲಿ ಹೆಣ್ಣಿಗೆ ಯಾವ ತರಹದ ಅವಮಾನ ಅಪಮಾನ ಹಾಗೂ ಸನ್ಮಾನ ಆಗುತವೇ ಎಂಬುದನ್ನು ತಾವು ಆರಂಬಿಸಿದ ಸುಮನಾ ಫೌಂಡೇಷನ್ ಪ್ರಾರಂಭದಲ್ಲಿ ಜನರ ನಿಂದನೆ, ಚಾಡಿ ಮಾತುಗಳ ನೋವು ಹಂಚಿಕೊಂಡು ಇಂದಿನ ಮಹಿಳೆಯರು ಸ್ವತಂತ್ರವಾಗಿ ಇಚ್ಛಾಶಕ್ತಿ ಮೂಲಕ ಬೇಕಾದ ಸಾಧನೆ ಮಾಡಬಹುದು ಎಂದು ಹೇಳಿದರು.
ಉತ್ತರ ಕರ್ನಾಟಕ ಪ್ರದೇಶಕ್ಕೆ ನನ್ನನ್ನು ಕರೆದು ಮಹಿಳೆಯರ ಕುರಿತು ಮಾತನಾಡಲು ಅವಕಾಶ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಿದರು.ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರಾಶಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಹಿಳೆ ಇಲ್ಲದೆ ಪುರುಷ ಜೀವನ ಪರಿಪೂರ್ಣ ಇಲ್ಲ .ಇಂದಿನ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಂಡುಕೊಂಡಿದ್ದಾರೆ. ಡಾ.ಸುನೀತಾ ಮಂಜುನಾಥರವರ ಸಾಧನೆಯ ಹಾದಿ ಕುರಿತು ಹೇಳುತ್ತಾ ಬಡವನಿಗೆ ಧೈರ್ಯವಿಲ್ಲ, ಮಧ್ಯಮದವನಿಗೆ ಪುರುಸೊತ್ತಿಲ್ಲ . ಶ್ರೀಮಂತನಿಗೆ ಅವಶ್ಯಕತೆಯಿಲ್ಲ ಎಂಬ ಮಾತನ್ನು ಸಣ್ಣ ಕಥೆಗಳ ಮೂಲಕ ಮಾರ್ಮಿಕವಾಗಿ ಹೇಳಿದರು. ಈ ಕಾರ್ಯಕ್ರಮವು ಲಿಂಗ ಸಮಾನತೆಯ ಸಂದೇಶ: ಗುಲಾಬಿಯ ಬದಲು ನೀಲಿ ಬಣ್ಣದ ಕ್ರಾಂತಿ ಈ ಬಾರಿಯ ಆಚರಣೆಯಲ್ಲಿ ಮಹಿಳೆಯರಿಗಾಗಿ ಮೀಸಲಾದ ಸಾಂಪ್ರದಾಯಿಕ ಗುಲಾಬಿ ಬಣ್ಣದ ಬದಲು, ‘ಆಕಾಶ ನೀಲಿ’ (Sಞಥಿ ಃಟue) ಬಣ್ಣವನ್ನು ಥೀಮ್ ಆಗಿ ಬಳಸುವ ಮೂಲಕ ಲಿಂಗ ಸಮಾನತೆಯ ಹೊಸ ಸಂದೇಶವನ್ನು ಸಾರಲಾಯಿತು.
ಈ ಬಗ್ಗೆ ಮಾತನಾಡಿದ ಮಹಿಳಾ ಘಟಕದ ಸಂಯೋಜಕಿ ಶ್ರೀಮತಿ ಸ್ವಾತಿ ಅಡ್ಡೆ ವೆಂಕಟರಾವ್, “ನೀಲಿ ಬಣ್ಣವು ವಿಶಾಲವಾದ ಆಕಾಶ ಮತ್ತು ಆಳವಾದ ಸಾಗರವನ್ನು ಪ್ರತಿನಿಧಿಸುತ್ತದೆ. ಮಹಿಳೆಯರ ಕನಸುಗಳು ಮಿತಿಯಿಲ್ಲದ ಆಕಾಶದಂತಿರಲಿ ಎಂಬ ಉದ್ದೇಶದಿಂದ ಈ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ,” ಎಂದು ತಿಳಿಸಿದರು.
ಕಾರ್ಯಕಮದ ಗೌರವಾನ್ವಿತ ಅತಿಥಿಗಳಾಗಿ ಕೆ.ಆರ್.ಇ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಬಿ. ಜಿ.ಶೆಟಕಾರ, ಕಾರ್ಯದರ್ಶಿಗಳಾದ ಸತೀಶ ಪಾಟೀಲ್, ಮತ್ತು ಜಂಟಿ ಕಾರ್ಯದರ್ಶಿಗಳಾದ ಶಿವಾನಂದ ಗಾದಗೆ, ಆಡಳಿತ ಮಂಡಳಿಯ ಸದಸ್ಯರಾದ ಶೆಟ್ಕರ್ ಚಂದ್ರಕಾಂತ್, ಬುಯ್ಯಾ ವೀರಭದ್ರಪ್ಪ, ಸಿದ್ರಾಜ್ ಪಾಟೀಲ್, ರವಿ ಹಾಲಹಳ್ಳಿ, ಡಾ. ಧೂಳಪ್ಪ ಪಾಟೀಲ್ ಹಾಗೂ ಬಿ. ಶಿವಶಂಕರ್ ಶೆಟ್ಕರ್ ಅವರು ಕಾರ್ಯಕ್ರಮಕ್ಕೆ ಬೆಂಬಲ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸೋಮನಾಥ್ ಬಿರಾದಾರ್ ಹಾಗೂ ಐ.ಕ್ಯೂ.ಎ.ಸಿ (Iಕಿಂಅ) ಸಂಯೋಜಕರಾದ ಡಾ. ಸೋಮೇಶ್ವರಿ ಮುದ್ದಾ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಈ
ಕಾರ್ಯಕ್ರಮದ ಅಂಗವಾಗಿ ದಿನಾಂಕ 6, 7 ಮಾರ್ಚ್ ರಂದು ಎರಡು ದಿನ ಮಹಿಳಾ ಘಟಕದ ಸಂಯೋಜಕಿ ಶ್ರೀಮತಿ ಸ್ವಾತಿ ಅಡ್ಡೆ ಮತ್ತು ಸಹ-ಸಂಯೋಜಕಿ ಕುಮಾರಿ ಮಧುಮತಿ ಅವರ ನೇತೃತ್ವದಲ್ಲಿ ನಡೆದ ಅಂತರ-ಕಾಲೇಜು ಮಟ್ಟದ ಲಗೋರಿ, ಖೋ-ಖೋ ನಂತಹ ಸಾಂಪ್ರದಾಯಿಕ ಕ್ರೀಡೆಗಳು, ಗಾಯನ ಮತ್ತು ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ ‘ಚಟೋರಿ ಗಲಿ’ ಎಂಬ ಆಹಾರ ಮೇಳವು ಬಾಲ್ಯದ ತಿನಿಸುಗಳ ಮೂಲಕ ಎಲ್ಲರನ್ನೂ ಹಳೆಯ ನೆನಪುಗಳಿಗೆ ಕರೆದೊಯ್ಯಿತು. ಬೀದರ್ ಜಿಲ್ಲೆಯ ವಿವಿಧ ಕಾಲೇಜುಗಳ ಮಹಿಳಾ ಪ್ರಾಚಾರ್ಯರು ಈ ಸಮಾರಂಭದಲ್ಲಿ ಭಾಗವಹಿಸಿ ಮಹಿಳಾ ನಾಯಕತ್ವದ ಶಕ್ತಿಯನ್ನು ಪ್ರತಿಬಿಂಬಿಸಿದರು.