
ಕಮಲನಗರ: ಮಾ.16:ತಾಲೂಕಿನ ಸೋನಾಳ ಗ್ರಾಮದ ಅಂಗನವಾಡಿ ಕೇಂದ್ರ 3ರಲ್ಲಿ ಶುಕ್ರವಾರ ಶಾಲಾ ಪೂರ್ವ ಶಿಕ್ಷಣದಲ್ಲಿ ಮಕ್ಕಳಿಗೆ ಚಿಟ್ಟಿ ಚಿತ್ರ ಬಿಡಿಸುವಿಕೆ ಮತ್ತು ಅನ್ನಪ್ರಾಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಭಾಗ್ಯವತಿ ಬಿರಾದಾರ ಮಾತನಾಡಿ, ಮಗು ಜನಿಸಿದ 6ತಿಂಗಳಿನಿಂದ ವರ್ಷದೊಳಗೆ ಮಗುವಿಗೆ ಗಂಜಿ ರೂಪದಲ್ಲಿ ಆಹಾರ ನೀಡಲಾಗುತ್ತದೆ. ಮಗುವಿನ ಆರೋಗ್ಯ ಮತ್ತು ಆಹಾರದ ಮಹತ್ವ ತಿಳಿಹೇಳಿದರು.
ತಾಯಿಂದಿರಾದ ಭಾಗ್ಯಶ್ರೀ ಲಕ್ಷುಣ, ಜಗದೇವಿ ಸುಧಾಕರ, ಪ್ರಜಾವಾಣಿ, ರಂಜಿತಾ ಕಾಳಿದಾಸ, ಛಾಯಾ ರಮೇಶ, ಆಶಾ ಕಾರ್ಯಕರ್ತೆ ದ್ರಾಕ್ಷಾಯಣಿ , ಕಾರ್ಯಕರ್ತೆ ಭಾಗ್ಯಶ್ರೀ ಬಿರಾದಾರ, ಮಕ್ಕಳಾದ ಶ್ರಾವಣಿ ಪ್ರಶಾಂತ, ಲಾವಣ್ಯ ಪವನ, ಶ್ರದ್ದಾ ಸಂಭಾಜಿ, ಶ್ರಾವಣಿ ಅಂಕುಶ, ಪ್ರಜ್ವಲ ಆಕಾಶ, ಅನುಷ್ಕಾ ಸಂಭಾಜಿ, ಚನ್ನಬಸವ ಶರಣು, ಶ್ರೀನೇಕ ಕಾಳಿದಾಸ ಇದ್ದರು.



























