Home ಮುಖಪುಟ ಸುದ್ದಿ ದುಬೈ ಏರ್‌ಫೋರ್ಟ್ ಬಳಿ ಡ್ರೋನ್ ದಾಳಿ: ವಿಮಾನ ಹಾರಾಟ ಸ್ಥಗಿತ

ದುಬೈ ಏರ್‌ಫೋರ್ಟ್ ಬಳಿ ಡ್ರೋನ್ ದಾಳಿ: ವಿಮಾನ ಹಾರಾಟ ಸ್ಥಗಿತ

ನವದೆಹಲಿ/ದುಬೈ,ಮಾ.೧೬- ಪಶ್ವಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ಮತ್ತಷ್ಟು ಉಲ್ಬಣವಾಗುತ್ತಿದೆಇಂದಿಗೆ ೧೭ನೇ ದಿನಕ್ಕೆ ಕಾಲಿಟ್ಟಿದ್ದು ಹೊಸದಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇಂಧನ ಟ್ಯಾಂಕ್‌ಮೇಲೆ ಡ್ರೋನ್ ದಾಳಿ ನಡೆಸಲಾಗಿದ್ದು, ಭಾರಿ ಬೆಂಕಿ ಕಾಣಿಸಿಕೊಂಡಿದೆ, ಈ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.


ಮುಂಜಾನೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ಮಧ್ಯೆ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ವಿಮಾನ ಹಾರಾಟ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ಪ್ರಯಾಣಿಕರಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.


ದಾಳಿಯಿಂದ ಕಾಣಿಸಿಕೊಂಡ ಬೆಂಕಿ ನಂದಿಸಲು ನಾಗರಿಕ ರಕ್ಷಣಾ ತಂಡಗಳನ್ನು ತಕ್ಷಣವೇ ನಿಯೋಜಿಸಲಾಗಿದೆ ಮತ್ತು ದುಬೈನ ನಗರ ಕೇಂದ್ರಕ್ಕೆ ಸಮೀಪದಲ್ಲಿರುವ ವಿಶ್ವದ ಅತ್ಯಂತ ಜನನಿಬಿಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದಾದ ಘಟನೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.


ದುಬೈ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಸ್ಪೋಟದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ದೂರದಿಂದ ಬೃಹತ್ ಜ್ವಾಲೆಗಳು ಗೋಚರಿಸುವುದನ್ನು ತೋರಿಸಿದೆ, ಬೆಂಕಿಯ ಪ್ರಮಾಣ ಹೆಚ್ಚಾಗಿದೆ, ಇದರಿಂದ ವಿಮಾನ ನಿಲ್ದಾಣಕ್ಕೆ ಒಳ ಬರುವ ಮತ್ತು ಹೊರ ಹೋಗುವ ಎಲ್ಲಾ ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ.


“ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಡ್ರೋನ್ ದಾಳಿ ನಡೆದ ಘಟನೆಯೊಂದು ಇಂಧನ ಟ್ಯಾಂಕ್‌ಗಳಲ್ಲಿ ಒಂದರ ಮೇಲೆ ಪರಿಣಾಮ ಬೀರಿದೆ. ದುಬೈ ನಾಗರಿಕ ರಕ್ಷಣಾ ತಂಡಗಳು ಪ್ರಸ್ತುತ ಬೆಂಕಿ ನಿಯಂತ್ರಿಸಲು ಹರಸಾಹಸ ಪಡುತ್ತಿವೆ. ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ” ಎಂದು ಉನ್ನತ ಮೂಲಗಳು ತಿಳಿಸಿವೆ.

ಬಂದರು ಸ್ಥಳಾಂತರಕ್ಕೆ ಸೂಚನೆ


ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿರುವ ಮೂರು ಪ್ರಮುಖ ಬಂದರುಗಳನ್ನು ಸ್ಥಳಾಂತರಿಸುವಂತೆ ಇರಾನ್ ಕರೆ ನೀಡಿದ ಒಂದು ದಿನದ ನಂತರ ಈ ದಾಳಿ ನಡೆದಿದೆ.
ಇರಾನ್ ನೆರೆಯ ರಾಷ್ಟ್ರದ ಅಮೆರಿಕ ಅಲ್ಲದ ಆಸ್ತಿಗಳಿಗೆ ಬೆದರಿಕೆ ಹಾಕಿರುವುದು ಇದೇ ಮೊದಲು. ಇರಾನ್‌ನ ತೈಲ ರಫ್ತುಗಳನ್ನು ನಿರ್ವಹಿಸುವ ಮುಖ್ಯ ಟರ್ಮಿನಲ್ ಇರುವ ಖಾರ್ಗ್ ದ್ವೀಪದ ಮೇಲೆ ಇತ್ತೀಚಿನ ದಾಳಿಗಳನ್ನು ನಡೆಸಲು ಯುಎಇಯಲ್ಲಿರುವ ಬಂದರುಗಳು, ಹಡಗುಕಟ್ಟೆಗಳು ಮತ್ತು ಅಡಗುತಾಣಗಳನ್ನು ಅಮೆರಿಕ ಬಳಸುತ್ತಿದೆ ಎಂದು ಇರಾನ್ ಆರೋಪಿಸಿದೆ.


ಫೆಬ್ರವರಿ ೨೮ ರಂದು ಇರಾನ್‌ನ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರನ್ನು ಕೊಂದು ಅದರ ಕಾರ್ಯತಂತ್ರದ ಮತ್ತು ಆಡಳಿತಾತ್ಮಕ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯನ್ನುಂಟುಮಾಡಿದ ನಂತರ ಇರಾನ್ ಮಧ್ಯಪ್ರಾಚ್ಯದಾದ್ಯಂತ ಅಮೆರಿಕ ನೆಲೆಗಳು ಮತ್ತು ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.


ಗಲ್ಫ್ ಅರಬ್ ರಾಷ್ಟ್ರಗಳು ಅಮೆರಿಕದ ರಾಜತಾಂತ್ರಿಕ ಕಾರ್ಯಾಚರಣೆಗಳು, ಮಿಲಿಟರಿ ನೆಲೆಗಳು ಮತ್ತು ತೈಲ ಸೌಲಭ್ಯಗಳು, ಬಂದರುಗಳು, ವಿಮಾನ ನಿಲ್ದಾಣಗಳು, ಹೋಟೆಲ್‌ಗಳು ಮತ್ತು ವಸತಿ ಮತ್ತು ವಾಣಿಜ್ಯ ಕಟ್ಟಡಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಸ್ಥಳಗಳನ್ನು ಗುರಿಯಾಗಿಸಿಕೊಂಡು ೨,೦೦೦ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸಿವೆ.

ಮಾತುಕತೆಗೆ ಇರಾನ್ ಸಿದ್ಧವಿಲ್ಲ: ಟ್ರಂಪ್


ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಕೊನೆಗೊಳಿಸಲು ಅಮೇರಿಕಾ ಮಾತುಕತೆಗೆ ಸಿದ್ಧವಿದ್ದರೂ, ಇರಾನ್ ತಯಾರಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.


ಏರೋಸ್ಪೆರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಪಶ್ಚಿಮ ಏಷ್ಯಾದಾದ್ಯಂತ ಹಬ್ಬಿದ ಯುದ್ಧ ನಿಲ್ಲಿಸಲು ಹಾಗೂ ಜಾಗತಿಕ ಮಾರುಕಟ್ಟೆ ತಲ್ಲಣಗಳ ನಿಯಂತ್ರಣಕ್ಕೆ ರಾಜತಾಂತ್ರಿಕ ಮಾತುಕತೆ ಪ್ರಗತಿಯಲ್ಲಿದೆಯೇ ಎನ್ನುವ ಪ್ರಶ್ನೆಗೆ, ಅವರು ಉತ್ತರಿಸಲಿಲ್ಲ. ಯಾವ ತೆರನಾದ ಮಾತುಕತೆ ನಡೆಯುತ್ತಿದೆ ಎನ್ನುವುದನ್ನೂ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.


ಮಾತುಕತೆಗೆ ಇರಾನ್ ತಯಾರಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ, ಆದರೆ ಅವರು ತೀರಾ ಹತ್ತಿರದಲ್ಲಿದ್ದಾರೆ’ ಅಮೆರಿಕದೊಂದಿಗೆ ಯಾವುದೇ ಮಾತುಕತೆ ಇಲ್ಲ ಎಂದು ಈ ಹಿಂದೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ನಿ ಈ ಹಿಂದೆ ಹೇಳಿದ್ದರು.