
ಕಮಲನಗರ:ಮಾ.೧೬: ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ವಾರ್ಷಿಕ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು ಎಂದು ಪಿಯು ಕಾಲೇಜು ಪ್ರಾಂಶುಪಾಲ ಶಿವಾಜಿ.ಆರ್.ಹೆಚ್ ಸಲಹೆ ನೀಡಿದರು.
ಪಟ್ಟಣದ ಶಾಂತಿವರ್ಧಕ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಹತ್ತನೆ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಗ್ಲೀಷ್ ಮತ್ತು ಗಣಿತ ವಿಷಯ ಕಠಿಣ ಅನಿಸಬಹುದು. ಆದರೆ ಅಂಥ ವಿಷಯಗಳ ಬಗ್ಗೆ ಹೆಚ್ಚಿನ ಬೋಧನೆಗೆ ಶಿಕ್ಷಕರು ಮುಂದಾಗಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಛಲ ಬಹಳ ಮುಖ್ಯವಾಗಿದ್ದು, ಭಯಬಿಟ್ಟು, ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಛಲದೊಂದಿಗೆ ಪರೀಕ್ಷೆಯನ್ನು ಎದುರಿಸಿದರೆ ಯಾವುದೇ ವಿಷಯವು ಕಠಿಣವಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರೌಢ ಶಾಲೆಯ ಮುಖ್ಯಶಿಕ್ಷಕ ರಾಮೇಶ್ವರ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯಶಿಕ್ಷಕ ಜ್ಞಾನೇಶ್ವರ ಚ್ಯಾಂಡೇಶ್ವರೆ, ಹಿರಿಯ ಶಿಕ್ಷಕ ಎಸ್.ಪಿ.ಮಟಕೆ, ಬಿ.ಎಂ.ಭೂರೆ, ಪ್ರಣಾಲಿ ದೇಶಪಾಂಡೆ, ಪುಂಡಲಿಕ ಮಾಸಿಮಾಡೆ, ಸತ್ಯಮ್ಮಾ, ಬಿ.ಆರ್.ಕದಂ, ಸಿದ್ದಮ್ಮಾ, ರೋಹಿತ ಬಿರಾದಾರ, ಅಲೋಕ ನಿಲಂಗೆ ಸೇರಿದಂತೆ ಶಾಲೆ ಮಕ್ಕಳು ಇದ್ದರು.



























