
ಕೋಲಾರ,ಮಾ,೧೬- ಬೆಂಗಳೂರಿನ ಜೈನ್ ಯೂನಿವರ್ಸಿಟಿ ಪುರುಷರ ವಿಭಾಗದಲ್ಲಿ ಮತ್ತು ಮಹಿಳೆಯರ ವಿಭಾಗದ ತಂಡವು ನಗರದಲ್ಲಿ ನಡೆಯುತ್ತಿರುವ ಆಲ್ ಇಂಡಿಯ ಇಂಟರ್ ಕಾಲೇಜಿಯೇಟ್ ಯೂನಿವರ್ಸಿಟಿ ಇನ್ವಿಟೇಷನಲ್ ಬ್ಯಾಸ್ಕೆಟ್ ಬಾಲ್ ಟೂರ್ನಿಮೆಂಟ್ನಲ್ಲಿ ಎರಡು ತಂಡಗಳು ಪ್ರಥಮ ಸ್ಥಾನ ಗಳಿಸಿ ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕಪ್-೨೦೨೬ ರ ಚಾಂಪಿಯನ್ ಶಿಪ್ ಪಡೆದು ಕೊಂಡಿತು.
ನಗರದ ಯುವ ಜನ ಮತ್ತು ಕ್ರೀಡಾ ಇಲಾಖೆಯ ಮಿನಿ ಕ್ರೀಡಾಂಗಣದಲ್ಲಿನ ಸುಸಜ್ಜಿತವಾದ ಸಿಂಥೆಟಿಕ್ ಕೋರ್ಟ್ನಲ್ಲಿ ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ಆಶ್ರಯದಲ್ಲಿಂದು ನಡೆದ ಅಂತಿಮ ಪಂದ್ಯದಲ್ಲಿ ಜೈನ್ ಯೂನಿವರ್ಸಿಟಿಯ ಪುರುಷ ತಂಡದವರು ೭೯ ಪಾಯಿಂಟ್ ಡೆದರೆ, ಇದರ ವಿರುದ್ದ ಸ್ವರ್ಧಿಸಿದ್ದ ಕ್ರೈಸ್ತ್ ಯೂನಿವರ್ಸಿಟಿ ತಂಡದವರು ೬೩ ಪಾಯಿಂಟ್ಗಳನ್ನು ಪಡೆದರು. ಜೈನ್ ಯೂನಿವರ್ಸಿಟಿಯ ತಂಡವು ೧೬ ಪಾಯಿಂಟ್ಗಳ ಅಂತರದಲ್ಲಿ ವಿಜೇತರಾಗಿ ಪ್ರಥಮ ಸ್ಥಾನಕ್ಕೆ ಭಜನರಾದರು.
ಮಹಿಳಾ ತಂಡದಲ್ಲಿ ತಮಿಳು ನಾಡಿನ ಎಂ.ಓ.ಪಿ.ವೈಷ್ಣವ ಕಾಲೇಜಿನ ತಂಡವು ೫೫ ಪಾಯಿಂಟ್ ಗಳಿಸಿದರೆ ಜೈನ್ ತಂಡವು ೬೮ ಪಾಯಿಂಟ್ಗಳನ್ನು ಪಡೆಯಿತು. ಜೈನ್ ಯೂನಿವರ್ಸಿಟಿ ತಂಡವು ಎಂ.ಓ.ಪಿ ಯೂನಿವರ್ಸಿಟಿ ತಂಡವು ಪಡೆದ ಪಾಯಿಂಟ್ಗಳಿಂದ ಹೆಚ್ಚುವರಿಯಾಗಿ ೧೩ ಪಾಯಿಂಟ್ಗಳನ್ನು ಪಡೆದು ಮಹಿಳಾ ವಿಭಾಗದಲ್ಲಿ ಜೈನ್ ತಂಡವು ಪ್ರಥಮ ಸ್ಥಾನದ ಚಾಂಪಿಯನ್ ಶಿಪ್ ಪಡೆದಿರುವುದು ವಿಶೇಷವಾಗಿದೆ.
ತಮಿಳುನಾಡಿನ ಎಸ್,ಆರ್,ಎಂ. ಯೂನಿವರ್ಸಿಟಿಯ ಮಹಿಳಾ ಕಾಲೇಜಿನ ತಂಡವು ೫೮ ಪಾಯಿಂಟ್ ಗಳಿಸಿದರೆ ಕೇರಳದ ಪ್ರಾವೆಡೆನ್ಸ್ ಯೂನಿವರ್ಸಿಟಿಯ ತಂಡವು ೪೭ ಪಾಯಿಂಟ್ ಪಡೆದಿದೆ. ಎಸ್.ಆರ್.ಎಂ ತಂಡವು ಪ್ರಾವೆಡೆನ್ಸ್ ತಂಡಕ್ಕಿಂತ ಹೆಚ್ಚುವರಿಯಾಗಿ ೧೧ ಪಾಯಿಂಟ್ಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಎಸ್.ಆರ್.ಎಂ. ತಂಡದ ಜೀವಿಕ ೨೨ ಮತ್ತು ಸೋನಾ ಅವರು ೨೦ ಪಾಯಿಂಟ್ ಪಡೆದು ಅದ್ಬುತವಾದ ಪ್ರದರ್ಶನ ನೀಡಿದರು. ಪ್ರಾವೆಡೆನ್ಸ್ ತಂಡದಲ್ಲಿ ವರ್ಷ ೧೬,ಹೀರಾ ೧೨ ಪಾಯಿಂಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು.
ಓಟ್ಟಾರೆಯಾಗಿ ಅಂತಿಮವಾಗಿ ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ ಬೆಂಗಳೂರಿನ ಜೈನ್ ಯೂನಿವರ್ಸಿಟಿ ಕಾಲೇಜ್, ದ್ವಿತೀಯ ಬಹುಮಾನ ಬೆಂಗಳೂರಿನ ಕ್ರೈಸ್ತ್ ಯೂನಿವರ್ಸಿಟಿ ಕಾಲೇಜ್ ಹಾಗೂ ತೃತೀಯ ಬಹುಮಾನ ತಮಿಳು ನಾಡಿನ ಪಿ.ಎಸ್.ಜಿ. ಕಾಲೇಜಿನ ತಂಡವು ಪಡೆಯಿತು.
ಚಿನ್ನದ ನಾಡು -೨೦೨೬ ಕಪ್ ಜೂತೆಗೆ ಪ್ರಥಮ ಬಹುಮಾನ ೧ ಲಕ್ಷ ರೂ, ದ್ವಿತೀಯ ಬಹುಮಾನ ೭೫ ಸಾವಿರ ರೂ ಹಾಗೂ ತೃತೀಯ ಬಹುಮಾನ ೫೦ ಸಾವಿರ ರೂ ನಗದು ಬಹುಮಾನ ಪಡೆಯಿತು
ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ ಬೆಂಗಳೂರಿನ ಜೈನ್ ಕಾಲೇಜು, ದ್ವಿತೀಯ ಬಹುಮಾನ ತಮಿಳು ನಾಡಿನ ಎಸ್.ಆರ್.ಎಂ. ಹಾಗೂ ತೃತೀಯ ಬಹುಮಾನ ಎಂ.ಓ.ಪಿ ವೈಷ್ಣವ ಕಾಲೇಜಿನ ತಂಡವು ಪಡೆದಿದೆ.
ವಿಶೇಷವಾಗಿ ಜೈನ್ ತಂಡದಲ್ಲಿ ಮಣಿ ೨೧, ಅರ್ಜುನ್ ೨೦ ಪಾಯಿಂಟ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಕ್ರೈಸ್ತ್ ತಂಡದಲ್ಲಿ ಅಜೀನ್ ೧೯ ಪಾಯಿಂಟ್ ,ಪೀಟರ್ ೧೭ ಪಾಯಿಂಟ್ ಗಳಿಸಿದರು ಜೈನ್ ಮಹಿಳಾ ತಂಡದಲ್ಲಿ ನವಮಿ ೧೬ ಮತ್ತು ಖುಷಿ ೧೫ ಪಾಯಿಂಟ್ ಪಡೆಯುವ ಮೂಲಕ ಉತ್ತಮ ಪ್ರದರ್ಶನಕ್ಕೆ ಪಾತ್ರರಾದರು.
ತಮಿಳು ನಾಡಿನ ಹಿಂದುಸ್ತಾನ ಯೂನಿವರ್ಸಿಟಿಯ ಕಾಲೇಜಿನ ತಂಡವು ೪ನೇ ಸ್ಥಾನ ಪಡೆಯಿತು.
ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ಗೌರವಾಧ್ಯಕ್ಷರು ಹಾಗೂ ರಾಜ್ಯ ಮುಖ್ಯ ಮಂತ್ರಿ ಮಾದ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಮಾತನಾಡಿ ಕಳೆದ ೪ ದಿನಗಳಿಂದ ನಡೆಯುತ್ತಿರುವ ಈ ಟೂರ್ನಿಮೆಂಟ್ ನಲ್ಲಿ ವಿವಿಧ ರಾಜ್ಯಗಳ ಯೂನಿವರ್ಸಿಟಿಯ ೧೦ ತಂಡಗಳು ಭಾಗವಹಿಸಿದ್ದವು ಪುರುಷರ ೬ ತಂಡ ಮತ್ತು ಮಹಿಳೆಯರ ೪ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿರುವುದಕ್ಕೆ ಅಭಿನಂದಿಸಿದ್ದಾರೆ.
ಕೋಲಾರವು ಪ್ರಾರಂಭದಿಂದಲೂ ಬ್ಯಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಮುಂಚೂಣಿಯಲ್ಲಿದ್ದು ಅನೇಕ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ವರ್ಧೆಗಳಲ್ಲಿ ಭಾಗವಹಿಸಿದ್ದಾರೆ ಅನೇಕ ಮಂದಿ ಈ ಕ್ರೀಡೆಯ ಮೀಸಲಾತಿಯಲ್ಲಿ ಸರ್ಕಾರಿ ಉದ್ಯೋಗದಲ್ಲಿ ಉನ್ನತ ಸ್ಥಾನ ಮಾನ ಪಡೆದಿದ್ದಾರೆ ಎಂದರು.
ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ನಲ್ಲಿ ಕೋಲಾರದ ಕ್ರೀಡಾ ಪ್ರತಿಭೆಗಳು ಸಂಘಟಿತರಾಗಿದ್ದು ಇನ್ನು ಪ್ರಾರಂಭ ಹಂತದಲ್ಲಿಯೇ ಅಖಿಲ ಭಾರತ ಮಟ್ಟದ ಸ್ವರ್ಧೆಯನ್ನು ಆಯೋಜಿಸಿರುವುದು ಶ್ಲಾಘನಿಯ ಸಂಗತಿಯಾಗಿದೆ. ಎಲ್ಲರ ಸಹಕಾರದಿಂದ ಟೂರ್ನಿಮೆಂಟ್ ಯಶಸ್ವಿಗೊಳಿಸಿರುವುದಕ್ಕೆ ಅಭಿನಂದನೀಯ ಸಂಗತಿಯಾಗಿದೆ ಇನ್ನು ಹೆಚ್ಚು ಹೆಚ್ಚು ಪಂದ್ಯಾವಳಿಗಳನ್ನು ಆಯೋಜಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ಕೋಲಾರ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಹಾರೈಕೆಯ ನುಡಿಗಳಾಡಿದರು.
ಇದೇ ಸಂದರ್ಭದಲ್ಲಿ ವಿಜೇತರಾದ ತಂಡಗಳಿಗೆ ಕೆ.ವಿ. ಪ್ರಭಾಕರ್ ಮತ್ತು ವಸತಿ ಸಚಿವ ಜಮೀರ್ ಆಹಮದ್ ಅವರ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ಬಹುಮಾನಗಳನ್ನು ವಿತರಿಸಿದರು. ವೇದಿಕೆಯಲ್ಲಿ ಬಾಲಭವನದ ಬಿ.ಆರ್.ನಾಯ್ಡು, ಕುಂಬಾರ ಅಭಿವೃದ್ದಿ ನಿಗಮದ ಶ್ರೀನಿವಾಸ್, ನಟರಾಜ್, ರಘು. ವಕೀಲರಾದ ಕಲ್ಲಂಡೂರು ಲೋಕೇಶಗೌಡ, ಮುಂತಾದವರು ಇದ್ದರು.
ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ಅಧ್ಯಕ್ಷ ಮಧು ಮತ್ತು ಕ್ಲಬ್ನ ಸದಸ್ಯರುಗಳು ಟೂರ್ನಿಮೆಂಟ್ ಉಸ್ತುವರಿ ವಹಿಸಿದ್ದರರು. ಐ.ಟಿ.ಐ. ಶಿವಕುಮಾರ್ ಅವರು ಟೂರ್ನಿಮೆಂಟ್ ಪಂದ್ಯಾವಳಿಗಳ ಕಾಮೆಂಟ್ರಿಯನ್ನು
ವರ್ಣರಂಚಿತವಾಗಿ ನೀಡಿದರು.






























