
ಶಿವಮೊಗ್ಗ,ಮಾ.೧೬- ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ‘ಇ ಖಾತಾ’ ಮಾಡಿಸುವುದು ಕಡ್ಡಾಯವಾಗಿದೆ. ನಾಗರೀಕರ ಅನುಕೂಲಕ್ಕಾಗಿ ಪಾಲಿಕೆ ಆಡಳಿತವು ವಿವಿಧ ಬಡಾವಣೆಗಳಲ್ಲಿ ಇ-ಖಾತಾ ಮೇಳ ಆಯೋಜಿಸುತ್ತಿದೆ. ಪ್ರಸ್ತುತ ಮಾರ್ಚ್ ತಿಂಗಳಲ್ಲಿ ನಗರದ ವಿವಿಧ ವಾರ್ಡ್ ಗಳಲ್ಲಿ ಮೇಳ ಆಯೋಜಿಸಲಾಗಿದೆ ಎಂದು ಆಯುಕ್ತ ಮಾಯಣ್ಣಗೌಡರವರು ತಿಳಿಸಿದ್ದಾರೆ.
ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಇ ಖಾತಾ ಮೇಳ ನಡೆಯಲಿದೆ. ಆಧಾರ್ ಕಾರ್ಡ್ ನೊಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಸೂಕ್ತ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು. ಸದರಿ ಅಭಿಯಾನದ ಸದುಪಯೋಗವನ್ನು ನಾಗರಿಕರು ಪಡೆದುಕೊಳ್ಳಬೇಕು ಎಂದು ಆಯುಕ್ತರು ಮನವಿ ಮಾಡಿದ್ದಾರೆ.
ಎಲ್ಲೆಲ್ಲೆ ಯಾವಾಗ ಮಾರ್ಚ್ ೧೬ ರಂದು ವಾರ್ಡ್ ೪ ರ ವೆಂಕಟೇಶ್ವರ ನಗರದ ೨ ನೇ ತಿರುವಿನ ಸರ್ವಸಿದ್ದಿ ವಿನಾಯಕ ಸ್ವಾಮಿ ದರ್ಶನ ಸಮುದಾಯ ಭವನ, ಮಾರ್ಚ್ ೧೮ ರಂದು ವಾರ್ಡ್ ೩೧ ರ ಶರಾವತಿ ನಗರದ ಮಹಾನಗರ ಪಾಲಿಕೆ ಗ್ರಂಥಾಲಯ, ಮಾರ್ಚ್ ೨೪ ರಂದು ವಾರ್ಡ್ ೦೧ ರ ಅಶ್ವಥ್ ನಗರದ ಮುಚ್ಚಿಗರ ಸಮುದಾಯ ಭವನ,
ಮಾರ್ಚ್ ೨೫ ರಂದು ವಾರ್ಡ್ ೨೮ ರ ಪಂಚವಟಿ ಕಾಲೋನಿಯ ಗೌಡ ಸಾರಸ್ವತ ಕಲ್ಯಾಣ ಮಂದಿರ, ಮಾರ್ಚ್ ೨೬ ರಂದು ಆಲ್ಕೋಳ ಸರ್ಕಲ್ ಸಮೀಪದ ಅಗಮುಡಿ ಸಮುದಾಯ ಭವನ, ಮಾರ್ಚ್ ೨೭ ರಂದು ವಾರ್ಡ್ ೧೮ ರ ಅಪ್ಪಾಜಿರಾವ್ ಕಾಂಪೌಂಡ್ ನ ಅಯ್ಯಪ್ಪಸ್ವಾಮಿ ಕಾಂಪೌಂಡ್ ಎದುರಿನ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದೆ.
ದಾಖಲೆಗಳೇನು ಬೇಕು: ಸ್ಥಿರಾಸ್ತಿಯ ಮಾಲೀಕತ್ವ ಸಾಬೀತುಪಡಿಸುವ ಕಾನೂನುಬದ್ದ ದಾಖಲಾತಿಗಳು. ಮಾಲೀಕರ ಭಾವಚಿತ್ರ. ಗುರುತಿನ ಚೀಟಿ (ವೋಟರ್ ಐಡಿ, ಪ್ಯಾನ್, ರೇಷನ್ ಕಾರ್ಡ್ ಇತ್ಯಾದಿ), ಕಟ್ಟಡ / ನಿವೇಶನದ ಭಾವಚಿತ್ರ, ಕಟ್ಟಡ ಪರವಾನಗಿ ಪ್ರತಿ (ಇದ್ದಲ್ಲಿ), ಇ.ಸಿ. ೨೦೦೪ ರ ಹಿಂದಿನ ನೊಂದಣಿ ದಾಖಲೆಯಾಗಿದ್ದಲ್ಲಿ ನೊಂದಣಿಯಾದ ದಿನಾಂಕದಿಂದ ೩೧-೦೩-೨೦೨೪ ಮತ್ತು ಇ.ಸಿ. ೧-೦೪-೨೦೦೪ ರಿಂದ ಪ್ರಸ್ತುತ ಸಾಲಿನವರೆಗೆ.






























