
ಕೋಲಾರ ಮಾ.೧೬- ಲಕ್ಷಾಂತರ ರೈತ ಕೂಲಿ ಕಾರ್ಮಿಕರ ಹಾಗೂ ಯುವಕರ ಬೀದಿ ಪಾಲು ಮಾಡುತ್ತಿರುವ ಐ.ಪಿ.ಎಲ್. ಬೆಟ್ಟಿಂಗ್ ದಂಧೆಗೆ ಹಾಗೂ ಮಾದಕ ವಸ್ತುಗಳಿಗೆ ಕಡಿವಾಣ ಹಾಕಲು ವಿಶೇಷ ಪೊಲೀಸ್ ತಂಡ ರಚನೆ ಮಾಡಿ ದಂಧೆಕೋರರ ವಿರುದ್ದ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸುವಂತೆ ರೈತ ಸಂಘದಿಂದ ಪೋಲೀಸ ವರಿಷ್ಠಾದಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರವರು ಕ್ರೀಡೆ ಎಂಬುದು ಇಂದು ಜೂಜಾಟವಾಗಿ ಮಾರ್ಪಟ್ಟು ದುಡಿಮೆ ಇಲ್ಲದೆ, ಅತಿ ಬೇಗ ಶ್ರೀಮಂತರಾಗುವ ಅಡ್ಡದಾರಿಯಾಗಿ ಕ್ರಿಕೆಟ್ ಐ.ಪಿ.ಎಲ್. ಕ್ರೀಡೆ ಮಾರ್ಪಟ್ಟಿರುವುದು ದುರಾದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ಬರ ಹಾಗೂ ಬೆಳೆ ನಷ್ಟದಿಂದ ರೈತರು ತತ್ತರಿಸಿ ಕೂಲಿ ಕಾರ್ಮಿಕರಿಗೆ ದುಡಿಯಲು ಕೆಲಸ ವಿಲ್ಲದೆ, ಯುವಕರು ವಿದ್ಯಾಭ್ಯಾಸ ಮಾಡಿ, ಉದ್ಯೋಗ ವಿಲ್ಲದೆ, ಪರಿತಪ್ಪಿಸುತ್ತಿರುವ ಪರಿಸ್ಥಿತಿಯಲ್ಲಿ ಕ್ರಿಕೇಟ್ ಬೆಟ್ಟಿಂಗ್ ಎಂಬ ಭೂತಕ್ಕೆ ದಾಸರಾಗಿ ರೈತರು ತೋಟಗಳನ್ನೇ ಅಡ ಇಟ್ಟರೆ, ಕೂಲಿ ಕಾರ್ಮಿಕರು, ಜಾನುವಾರುಗಳನ್ನು ಯುವ ಪೀಳಿಗೆ ತಮ್ಮ ಭವಿಷ್ಯವನ್ನೇ ಕ್ರಿಕೆಟ್ ಬೆಟ್ಟಿಗ್‌ಗೆ ದಾಸರಾಗಿ ಆಟವಾಡಿ ಗೆಲ್ಲಲಾಗದೆ ಸಲ ತೀರಸಲಾಗದೆ. ಸಮಾಜದಲ್ಲಿ ಬದುಕಲು ಮುಖವಿಲ್ಲದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು, ಕ್ರಿಕೆಟ್ ಬೆಟ್ಟಿಂಗ್ ಎಂಬ ದಂದೆಗೆ ಕಡಿವಾಣ ಹಾಕಬೇಕಾದ ಸರ್ಕಾರವೆ ದಂದೆ ಕೋರರಿಗೆ ಅನುಮತಿ ನೀಡಿರುವುದು ದುರದೃಷ್ಟಕರ ಎಂದು ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯ ಮುಖಂಡ ಕಾಮನೂರು ಚಲಪತಿ ಮಾತನಾಡಿ ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‌ಪಿನ್ ಯಾರು? ಯಾರ ಕೈ ಕೆಳಗೆ ದಂದೆ ನಡೆಯತ್ತಿದೆ. ಪ್ರತಿ ಐ.ಪಿ.ಎಲ್. ನಲ್ಲೂ ಕೋಟಿ ಕೋಟಿ ಬೆಟ್ಟಿಂಗ್ ನಡೆಯುತ್ತಿದ್ದು, ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಮಸ್ಯೆಯನ್ನು ಗಂಬೀರವಾಗಿ ಏಕೆ. ಸರ್ಕಾರ ಹಾಗೂ ಗೃಹ ಮಂತ್ರಿಗಳು ಪರಿಗಣಿಸುತ್ತಿಲ್ಲ. ಗಲ್ಲಿಗೆಂದು ನಕಲಿ ಆಪ್‌ಗಳ ಮುಖಾಂತರ ಅಕ್ರಮಗಳನ್ನು ಸಕ್ರಮ ಮಾಡಲು ಎಷ್ಟು ಸಾವಿರ ಕೋಟಿ ಸರ್ಕಾರಿ ದೇಣಿಗೆ ಪಡೆದು ಬಡವರ ಬದುಕನ್ನು ಬೆಟ್ಟಿಂಗ್‌ನಲ್ಲಿ ಹರಾಜು ಹಾಕುತ್ತಿದ್ದಾರೆಂದು ಲಂಚ ಸರ್ಕಾರದ ವಿರುದ್ದ ಕಿಡಿಕಾರಿದರು.
ಜಿಲ್ಲೆಯಲ್ಲಿ ಗುಪ್ತ ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ ಪ್ರತಿ ಹೋಟೆಲ್, ರೆರ್ಸಾಟ್, ಬಾರ್ & ರೆಸ್ಟೋರೆಂಟ್ ಡಾಬಾ, ಗ್ರಾಮೀಣ ಪ್ರದೇಶದ ತೋಟಗಳಲ್ಲಿ ಈ ದಂಧೆ ನಿರಂತರವಾಗಿ ನಡೆಯುತ್ತಿದ್ದರೂ, ಪೊಲೀಸ್ ಇಲಾಖೆಗೆ ಮಾಹಿತಿ ಇಲ್ಲವೆ. ಲಕ್ಷ ಲಕ್ಷ ಲಕ್ಷ ಬೆಟ್ಟಿಂಗ್ ಕಟ್ಟಿ ಪ್ರಾಣ ಕಳೆದುಕೊಳ್ಳುವ ಮೊದಲೇ ಮೊಳಕೆಯಲ್ಲಿಯೇ ದಂಧೆಯನ್ನು ಚಿವುಟಿ ಬಡವರ ಬದುಕನ್ನು ರಕ್ಷಣೆ ಮಾಡಬಹುದಲ್ಲವೆ ಎಂದು ಸಲಹೆ ನೀಡಿದರು.
ಒಂದು ವಾರದಲ್ಲಿ ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕಿ ದಂದೆಕೋರರ ವಿರುದ್ದ ಕೇಸು ದಾಖಲಿಸಿ ಬಡ ರೈತ ಕೂಲಿಕಾರ್ಮಿಕರ ಯುವ ಪೀಳಿಗೆ ಭವಿಷ್ಯವನ್ನು ರಕ್ಷಣೆ ಮಾಡಬೇಕೇಂದು ಮನವಿ ನೀಡಿ ಒತ್ತಾಯಿಸಿದ್ದರು
ಮನವಿ ಸ್ವೀಕರಿಸಿದ ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರು ಐ.ಪಿ.ಎಲ್. ಹಾಗು ಮಾದಕ ದ್ರವ್ಯ ಮಾರಾಟ ದಂದೆಗೆ ಕಡಿವಾಣ ಹಾಕುವ ಭರವಸೆ ನೀಡಿದರು
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ ಕಾಮನೂರು ಮಂಜುನಾಥ ಗೀರೀಶ ತಿಮ್ಮಣ್ಣ ಜನಾರ್ದನ ವಿಶ್ವ ಕುಮಾರ ಮುಂತಾದವರು ಇದ್ದರು.






























