Home ಜಿಲ್ಲೆ ಕಲಬುರಗಿ ಹೆಣ್ಣು ಮಕ್ಕಳು ಆರೋಗ್ಯವಾಗಿದ್ದರೆ ಕುಟುಂಬ ಆರೋಗ್ಯ

ಹೆಣ್ಣು ಮಕ್ಕಳು ಆರೋಗ್ಯವಾಗಿದ್ದರೆ ಕುಟುಂಬ ಆರೋಗ್ಯ

ಕರಜಗಿ :ಮಾ.15:ಹೆಣ್ಣು ಮಕ್ಕಳು ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿದ್ದಂತೆ. ಆದರಿಂದ ಪ್ರತಿಯೊಬ್ಬ 14 ವರ್ಷದ ಹೆಣ್ಣು ಮಕ್ಕಳು ಕಡ್ಡಾಯವಾಗಿ ಎಚ್.ಪಿ ವಿ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಮಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಸಂಜೀವಿನಿ ಜಾಧವ ಹೇಳಿದರು

ಅವರು ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಎಚ್ ಪಿ.ವಿ ಲಸಿಕೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೆಣ್ಣು ಮಕ್ಕಳ ಆರೋಗ್ಯ ನಾಡಿನ ಸುಭದ್ರ ಭವಿಷ್ಯಕ್ಕೆ ಅಡಿಪಾಯವಾಗಿದೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸರ್ಕಾರ ಉಚಿತವಾಗಿ ಎಚ್.ಪಿ.ವಿ ಲಸಿಕೆ ನೀಡುತ್ತಿದ್ದು ಯಾವುದೇ ಭಯವಿಲ್ಲದೆ ಲಸಿಕೆಯನ್ನು”
ಪಡೆಯಬೇಕು.ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಸರಕಾರ ಈಗ ನೀಡುತ್ತಿರುವ ಲಸಿಕೆ ತುಂಬಾ ಅಮೂಲ್ಯವಾದದ್ದು.14 ವರ್ಷ ಮೇಲ್ಪಟ್ಟು 15 ವರ್ಷದ ಒಳಗಿನ ಎಲ್ಲಾ ಬಾಲಕಿಯರಿಗೆ ಇದನ್ನು ನೀಡಲಾಗುತ್ತಿದೆ. ತಾಲೂಕ ಸಾರ್ವಜನಿಕ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆ ನೀಡಲಾಗುತ್ತಿದ್ದು ಆಯಾ ಗ್ರಾಮಗಳ ವ್ಯಾಪ್ತಿಯ ಜನರು ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ಪಡೆಯಬೇಕು
ಎಂದು ಹೇಳಿದರು
ಆರೋಗ್ಯ ನಿರೀಕ್ಷಣಾಧಿಕಾರಿ ವಿಠ್ಠಲ ಬಡಿಗೇರ ಮಾತನಾಡಿ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕೋಶದ ಕ್ಯಾನ್ಸರ್ ಅಪಾಯಕಾರಿಯಾಗಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮುಂಜಾಗ್ರತೆಗಾಗಿ ಲಸಿಕೆಯನ್ನು ಹೊರ ತಂದಿದ್ದು ಎಲ್ಲಾ 14 ವರ್ಷ ಮೇಲ್ಪಟ್ಟ ಬಾಲಕಿಯರು ಇದನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ವಿಠ್ಠಲ ಬಡಿಗೇರ, ಆರೋಗ್ಯ ಸುರಕ್ಷಾಧಿಕಾರಿ ಸುಕನ್ಯಾ ಕರ್ಜಗಿ ಶೋಭಾ ಹಿರೇಮಠ ಶುಶ್ರೂಷಕ ಅಧಿಕಾರಿ ಹಣಮಂತ ಅಲ್ಲಾಪೂರ ವೀಣಾ ಅಲ್ಲಾಪೂರ ,ಸುಮಂಗಲಾ ಕಾಂಬಳೆ ,ಕೇಶವ ಸಿಂಧೆ ಆಶಾ ಕಾರ್ಯಕರ್ತೆಯರಾದ ಶಬಾನಾ ಕೊರಬು ಲಕ್ಷ್ಮಿ ತೊಗರಳ್ಳಿ ಗೌರಾಬಾಯಿ ಮೋಸಲಗಿ ಸುಜಾತಾ ಪತ್ತಾರ ಭೌರಮ್ಮ ಲೋಹಾರ ಕವಿತಾ ಹಡಪದ ಇತರರಿದ್ದರು