Home ಜಿಲ್ಲೆ ಕಲಬುರಗಿ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಮನವಿ

ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಮನವಿ

ಕಾಳಗಿ : ಮಾ.15:ಕಾಳಗಿ ತಾಲೂಕಿನ ವಿವಿಧ ಇಲಾಖೆಗಳ ಸ್ಥಾಪನೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮತ್ತು ಐಟಿ / ಬಿಟಿ ಮತ್ತು ಕಲಬುರಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅಬ್ದುಲ್ ರೌಫ್ ಆಫಖಾನ್ ಮಾತನಾಡಿ ತಾಲೂಕಿನ ವಿವಿಧ ಇಲಾಖೆಗಳು ಮತ್ತು ಮೂಲಭೂತ ಸೌಕರ್ಯಗಳ ಸಮಸ್ಯೆವಿದ್ದು. ಇದರಿಂದ ರೈತರಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ತಾಲೂಕಿಗೆ ಅತಿಅವಶ್ಯವಾಗಿ ಉಪ ನೊಂದಣಿ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಆರೋಗ್ಯ, ಭೂಮಾಪನಾಧಿಕಾರಿಗಳು, ಅಗ್ನಿಶಾಮಕ, ನ್ಯಾಯಲಯ ಕಛೇರಿ ಸೇರಿದಂತೆ ತಾಲೂಕಿಗೆ ಬೇಕಾಗಿರುವ ಇಲಾಖೆಗಳನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಗೌರವಧ್ಯಕ್ಷ ಬಾಬು ನಾಟೀಕಾರ, ದಯಾನಂದ ಹೊಸಮನಿ, ಕಾಳಪ್ಪ ತಳವಾರ, ಪ್ರಶಾಂತ ಕೋರೆ ಇದ್ದರು.