Home ಜಿಲ್ಲೆ ಕಲಬುರಗಿ ಕಲಾವಿದ ರೆಹಮಾನ್ ಪಟೇಲ್‍ಗೆ ಕಲಾ ತುರುವಂ ಪ್ರಶಸ್ತಿ

ಕಲಾವಿದ ರೆಹಮಾನ್ ಪಟೇಲ್‍ಗೆ ಕಲಾ ತುರುವಂ ಪ್ರಶಸ್ತಿ

ಕಲಬುರಗಿ:ಮಾ.15: ಕಲಾವಿದ ಮತ್ತು ಸಂಶೋಧಕರಾದ ರೆಹಮಾನ್ ಪಟೇಲ್ ಅವರಿಗೆ ಚೆನ್ನೈನ ಶ್ರೀ ಧರ್ಷಿಣಿ ಕಲೈಕೂದಂ ವತಿಯಿಂದ ನೀಡಲಾಗುವ ‘ಕಲಾ ತುರುವಂ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ದೃಶ್ಯಕಲಾ ಕ್ಷೇತ್ರದಲ್ಲಿ ತಮ್ಮ ಸಂಸ್ಥೆ ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಮುಖಾಂತರ ಕಳೆದ 30 ವರ್ಷಗಳಿಂದ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇದರ ಜೊತೆಗೆ, 21ನೇ ರಾಷ್ಟ್ರೀಯ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ ಭಾಗವಹಿಸಿದ ಯುವ ಹಾಗೂ ವೃತ್ತಿಪರ ಕಲಾವಿದರಿಗೂ ವಿವಿಧ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿದ ಶ್ರೀ ಧರ್ಷಿಣಿ ಕಲೈಕೂದಂ ನಿರ್ದೇಶಕರಾದ ಧರ್ಮಲಿಂಗಂ ಅವರು, ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 4ರಂದು ಚೆನ್ನೈನ ಲಲಿತ ಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.