
ಚನ್ನಮ್ಮನ ಕಿತ್ತೂರು,ಮಾ.೧೫: ಕವಿತೆಗಳು ಸಮಾಜದ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮಗಳಾಗಿವೆ ಎಂದು ಕಸಾಪ ಅಧ್ಯಕ್ಟ ಡಾ. ಎಸ್.ಬಿ.ದಳವಾಯಿ ಹೇಳಿದರು.
ತಾಲೂಕಿನ ಅಂಬಡಗಟ್ಟಿ ಗ್ರಾಮದ ಶ್ರೀ ಮಡಿವಾಳೇಶ್ವರ ಮಠದಲ್ಲಿ ಸ್ವಾಮಿ ವಿವೇಕಾನಂದ ಯುವಕ ಮಂಡಳಿ ಅಭಿಮಾನಿ ಬಳಗ, ಶಿವಸಾಯಿ ಶಿಕ್ಷಣ ಹಾಗೂ ಅಭಿವೃದ್ದಿ ಸಂಸ್ಥೆ ಕಸಾಪ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಕ್ಷಕ ಬಿ.ಬಿ.ಕಾದ್ರೋಳ್ಳಿ ರಚಿಸಿದ “ಭಾವ ಸ್ಪಂದನ” ಕವನ ಸಂಕಲ ಬಿಡುಗಡೆ ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ಬಿ.ಬಿ. ಕಾದ್ರೋಳ್ಳಿಯವರು ನಿವೃತ್ತಿ ನಂತರ ಸಾಹಿತ್ಯ ರಚನೆಯಲ್ಲಿ ಕ್ರೀಯಾಶೀಲರಾಗಿ ಹಲವಾರು ಕೃತಿಗಳನ್ನು ರಚಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಂದಿನ ಯುವಪಿಳಿಗೆಗೆ ಮಾದರಿಯಾಗಿದ್ದಾರೆಂದರು.
ಮಾಜಿ ಕಸಾಪ ಖಾನಾಪೂರ ತಾಲೂಕ ಅಧ್ಯಕ್ಷ ವಿಜಯ ಬಡಿಗೇರ ಮಾತನಾಡಿ ಲೇಖಕರು ಜೀವನದ ವಿವಿಧ ಅನುಭವಗಳು, ಸಮಾಜದ ಸಮಸ್ಯೆಗಳು, ಮಾನವೀಯ ಮೌಲ್ಯಗಳನ್ನು ವ್ಯಕ್ತಪಡಿಸಿದರು.ಬಿ.ಬಿ. ಕಾದ್ರೋಳ್ಳಿ ಅವರೊಂದಿಗೆ ಒಡನಾಟ ಕೃತಿಗಳ ರಚನೆಯಲ್ಲಿ ಅವರ ಪರಿಶ್ರಮ ಕಾರ್ಯಕ್ಷಮತೆ ಕುರಿತು ಪರಿಚಯಿಸಿದರು.
ದೇಗಲೊಳ್ಳಿ-ಅಂಬಡಗಟ್ಟಿ ಶ್ರೀ ಗುರುಮಡಿವಾಳೇಸ್ವರ ಮಠದ ಪೀಠಾಧ್ಯಕ್ಷ ವೀರೇಶ್ವರ ಸ್ವಾಮಿಜೀ ಸಾನಿಧ್ಯವಹಿಸಿ ಮಾತನಾಡಿ ಕವನ ಸಂಕಲನದ ಮೂಲಕ ಯುವಪಿಳಿಗೆ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿರುವ .ಬಿ.ಬಿ.ಕಾದ್ರೋಳ್ಳಿ ಶಿಕ್ಷಕರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನೂ ಅನೇಕ ಕೃತಿಗಳು ಮೂಡಿಬರಲೆಂದು ಆಶಿಸಿದರು.
ಸಭೆಯಲ್ಲಿ ಬಸವರಾಜ ದಳವಾಯಿ, ಪ್ರಕಾಶಗೌಡ ಪಾಟೀಲ, ಉಡಪಿ ಜಿಪಂ ಉಪನಿರ್ದೇಶಕ ಶಾಮ ಕಾದ್ರೋಳ್ಳಿ, ಮಹಾದೇವ ಹಿತ್ತಲಮನಿ ಇತರರು ಮಾತನಾಡಿದರು. ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಅಥಿತಿಗಳನ್ನು ಸತ್ಕರಿಸಲಾಯಿತು.
ಬಿ.ಬಿ.ಕಾದ್ರೋಳ್ಳಿ ಮಾತನಾಡಿ ಬಡತನದಲ್ಲಿ ಬೆಳೆದು ಶಿಕ್ಷಣ ಪಡೆದು ಶಿಕ್ಷಣ ವೃತ್ತಿ ಪೂರ್ಣಗೊಳಿಸಿ ಈಗ ಕೃಷಿ ಕ್ಷೇತ್ರದ ಜೊತೆಗೆ ಬರವಣಿಗೆಯಲ್ಲಿ ತೊಡಗಿ ನಾನು ರಚಿಸಿ ಕವನ ಸಂಕಲನವನ್ನು ನಮ್ಮ ಗ್ರಾಮದಲ್ಲಿ ಪೂಜ್ಯರೀಂದ ಬಿಡುಗಡೆಗೊಂಡಿದ್ದು ಸಂತಸ ಎಂದರು. ವಿಕ್ರಮ್ ಖೋದಾನಪೂರ ಸ್ವಾಗತಿಸಿದರು, ಈರಣ್ಣಾ ಹುಕ್ಕೇರಿ ವಂದಿಸಿದರು. ಬಸವರಾಜ ಹುರಕಡ್ಲಿ ನಿರೂಪಿಸಿದರು. ವಿಜಯ ಸಾಣಿಕೊಪ್ಪ, ಇತರರಿದ್ದರು.



























