
ಬೀದರ್: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಮಾಜದ ಪ್ರಗತಿಗೂ ಕೊಡುಗೆ ನೀಡಬೇಕು ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾAಬಿಕೆ ಅಕ್ಕ ಹೇಳಿದರು.
ಬಸವ ವಾಣಿಜ್ಯ ಪದವಿ ಕಾಲೇಜು ವತಿಯಿಂದ ನಗರದ ಬಸವಗಿರಿಯಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನೈತಿಕ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಬೇಕು ಎಂದರು.
ಕಾಲೇಜು ಪ್ರಾಚಾರ್ಯೆ ಸವಿತಾ ಬೋರಾಳೆ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ರಾಮಲಿಂಗ, ಉಪನ್ಯಾಸಕರಾದ ಶಿವರಾಜ, ಪ್ರವೀಣ್, ಪರಶುರಾಮ, ಮೌನೇಶ್ವರಿ, ಉಮಾದೇವಿ, ಅನಿಲ್ ಇದ್ದರು.
ಅಕ್ಷತಾ ನಿರೂಪಿಸಿದರು. ಶಿವಾನಿ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಿಬಿರದ ಅಂಗವಾಗಿ ವಿದ್ಯಾರ್ಥಿಗಳು ಬಸವಗಿರಿ ಪರಿಸರದಲ್ಲಿ ಶ್ರಮದಾನ ಮಾಡಿದರು. ಪೊರಕೆ ಹಿಡಿದು ಕಸಗುಡಿಸಿದರು.



























