
ಔರಾದ್ :ಮಾ.೧೫: ಪ್ರವಚನಗಳು ಸೌಹಾರ್ದತೆ ಹೆಚ್ಚಿಸಬೇಕೆ ಹೊರತು ಇನ್ನೊಬ್ಬರ ಟೀಕೆ ಮಾಡುವಂತಿರಬಾರದು, ಕಾವಿಧಾರಿಯಾಗಿ ಹಿಂದೂ ದೇವತೆಗಳ ಅವಹೇಳನ ಮಾಡಿದ್ರೆ ಹೋರಾಟ ಮಾಡಿ ಬಹಿಷ್ಕಾರ ಹಾಕಲಾಗುವುದು ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಆನಂದ ಪಿ.ದ್ಯಾಡೆ ಆಗ್ರಹಿಸಿದ್ದಾರೆ.
ಬೀದರ ನಗರದಲ್ಲಿ ಆಯೋಜಿಸಿರುವ ನಿಜಗುಣನಾಂದ ಸ್ವಾಮಿಗಳ ಬಸವ ತತ್ವ ಪ್ರವಚನ ಸೌಹಾರ್ದ ಬೆಳೆಸಲಿ ಅದಕ್ಕೆ ನಾವು ಸ್ವಾಗತಿಸುತ್ತೇವೆ, ಬಸವ ತತ್ವ ನಿಂದನೆ, ದ್ವೇಷ, ಮತ್ತೊಬ್ಬರ ಅವಮಾನ, ಪ್ರಚೋದನೆ ನೀಡುವುದಿಲ್ಲ ವಿಶ್ವಕ್ಕೆ ಬೆಳಕು ನೀಡುವ ಸಂದೇಶಗಳಿಗೆ ನೀವು ಮತ್ತೊಬ್ಬರಿಗೆ ಟೀಕಿಸುವಂತೆ ಮಾಡಿಕೊಂಡು ಓಡಾಡುತ್ತಾ ಇರುವುದು ಖಂಡನೀಯ, ಇಂದು ವಿಶ್ವವೇ ಸನಾತನ ಹಿಂದೂ ಸಂಸ್ಕೃತಿಯನ್ನು ಪೂಜಿಸುತ್ತದೆ ನಮ್ಮ ಭಾರತವನ್ನು ಪೂಜ್ಯನೀಯವಾಗಿ ಕಾಣುತ್ತದೆ, ಹಿಂದೂಗಳ ಧಾರ್ಮಿಕ ಶ್ರದ್ಧೆಯ ಜೊತೆ ಅಣಕವಾಡುವ ಕೆಲಸಗಳನ್ನು ಮಾಡುವ ಈ ಘನಂದಾರಿಗಳಿಗೆ ಇದರಿಂದಾಗುವ ಲಾಭವೇನೋ? ಹಿಂದೂಗಳು, ಹಿಂದೂ ಸಂಪ್ರದಾಯವನ್ನು ಅವಹೇಳನ ಮಾಡುವುದು ಕೆಲವರಿಗೆ ಫ್ಯಾಷನ್ ಆಗಿದೆ, ಅದರಂತೆ ಎಲ್ಲೆ ಹೋದರು ನಿಜಗುಣನಾಂದ ಸ್ವಾಮಿಗಳು ಹಿಂದೂಗಳ ದೇವತೆಗಳ ಅವರ ಸಂಪ್ರದಾಯವನ್ನು ಟೀಕಿಸುವ ಕಾರ್ಯ ಮಾಡುತ್ತಿರುವುದು ಖಂಡನೀಯ ಹಿಂದೂಗಳು ಸಹಿಷ್ಣುತೆ ಹೊಂದಿದ್ದಾರೆ, ಅದನ್ನು ಕೆದಕುವ ಕಾರ್ಯ ಮಾಡದಿರಿ, ಜಗಜ್ಯೋತಿ ಬಸವೇಶ್ವರ ಹೆಸರು ಹೇಳಿಕೊಂಡು ಅವರ ಹೆಸರನ್ನು ಹಾಳು ಮಾಡುವ ಕಾರ್ಯದಲ್ಲಿ ತೊಡಗಿರುವ ಇಂತಹವರ ಸಮೂಹಕ್ಕೆ ನಮ್ಮ ತಿರಸ್ಕಾರವಿದೆ.
ನಿಜವಾದ ಬಸವ ತತ್ವ ಅರಿತು ಪ್ರವಚನ ಮಾಡಿ ಅದಕ್ಕೆ ಯಾರ ಅಡೆತಡೆಯಿಲ್ಲ, ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ ಜಗಜ್ಯೋತಿ ಬಸವಣ್ಣನವರ ಹೆಸರು ಕೇಡಿಸುವ ಕೆಲಸ ಆಗದಿರಲಿ. ಆನೆಯ ತಿನ್ನುವ ಹಲ್ಲು ಒಂದು ತೋರಿಸುವ ಹಲ್ಲು ಒಂದು ಎನ್ನುವ ಗಾದೆ ಮಾತಿನಂತೆ ನಡೆಯದಿರಿ! ಎಲ್ಲರನ್ನೂ ಅಪ್ಪಿಕೊಳ್ಳುವ ಧರ್ಮ ಅದು ಸನಾತನ ಧರ್ಮ ನಿಮ್ಮ ಆಚರಣೆ ಪದ್ಧತಿ ಏನೇ ಇರಲಿ ಅದು ನಿಮ್ಮಲ್ಲಿ ಇಟ್ಟುಕೊಳ್ಳಿ ವಿನಾಕಾರಣ ಸನಾತನ ಸಂಸ್ಕೃತಿಯ ಕಾವಿ ತೊಟ್ಟು ಅದರ ವಿರುದ್ಧ ಹೀಯಾಳಿಸುವ ಕಾರ್ಯ ಮಾಡದಿರಿ, ಪ್ರವಚನದಲ್ಲಿ ಮತ್ತೊಬ್ಬರನ್ನು ನಿಂದನೆ ಮಾಡುವ ಕಾರ್ಯ ನಡೆದಲ್ಲಿ ಜಿಲ್ಲಾ ವ್ಯಾಪ್ತಿ ಹೋರಾಟ ಮಾಡಿ ಬಹಿಷ್ಕಾರ ಹಾಕಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಆನಂದ ಪಿ.ದ್ಯಾಡೆ ತಿಳಿಸಿದ್ದಾರೆ.



























