
ಗುರುಮಠಕಲ್.ಮಾ.೧೫: ನಮ್ಮ ಬದುಕಿಗೆ ಆಧಾರ ಪರಿಸರ. ಗಾಳಿ, ನೀರು, ಫಲವತ್ತಾದ ಮಣ್ಣು ಮತ್ತು ಗಿಡಮರಗಳು ಜೀವಿಗಳಿಗೆ ಬಹಾಳ ಅಗತ್ಯವಾಗಿ ಬೇಕೆ ಬೇಕು ಎಂದು ಚಂಡರಕಿ ಹೊಸ ಬಡಾವಣೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಕುಮಧ್ವತಿ ಅವರು ಹೇಳಿದರು.
ಇಕೋಕ್ಲಬ್ ವತಿಯಿಂದ ಕ್ಷೇತ್ರ ಭೇಟಿ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಶಾಲಾ ಮಕ್ಕಳಿಗೆ ಇದರ ಸಂಪೂರ್ಣ ಅರಿವು ಮೂಡಿಸಲು ಗುರುಮಠಕಲ್ ತಾಲೂಕಿನ ನಜರಪೂರ ಗ್ರಾಮಕ್ಕೆ ಶಾಲಾ ಮಕ್ಕಳು, ಸಿಬ್ಬಂದಿಯವರ ಜೊತೆಗೂಡಿ ಮೊಟ್ಟಮೊದಲು ಕ್ಷೇತ್ರ ಪಾಲಕರಾದ ಚನ್ನಕೇಶವ ದೇವಸ್ಥಾನ ಹಾಗೂ ವೆಂಕಟೇಶ್ವರ ದೇವಸ್ಥಾನ ಉಭಯ ದೇವರುಗಳ ದರ್ಶನ ಪಡೆದು ಕೊಂಡು, ಸಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಿ ಮುಂದೆ ಆಂಜನೇಯ ದೇವರ ದರ್ಶನ ಪಡೆದು ಕೊಂಡು ಮಾವಿನ ತೋಟಕ್ಕೆ ಬಂದು, ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು, ಶಾಲಾ ಮಕ್ಕಳು ಪರಿಸರಕ್ಕೆ ಸಂಬAಧ ಪಟ್ಟ ಕತೆ, ಕವನ,ಹಾಡು, ವಚನಗಳು ಹಾಗೂ ಪರಿಸರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳುವುದರ ಜೊತೆಗೆ ಮುಖ್ಯ ಗುರುಗಳು ಮಾತನಾಡುತ್ತ ಮಕ್ಕಳೆಲ್ಲರೂ ಹಾಗೂ ಪಾಲಕ ಪೋಷಕರು ಗಿಡಗಳನ್ನು ಬೆಳಸಬೇಕು, ಇದರಿಂದ ನಮಗೆ ಸಕಾಲಕ್ಕೆ ಮಳೆಬರುತ್ತದೆ, ಉತ್ತಮವಾದ ಬೆಳೆಗಳು ಬರುವದರ ಜೊತೆಗೆ ಸದಾಕಾಲ ನಮಗೆ ನೀರು ಸಿಗುತ್ತದೆ. ನಮ್ಮ ಸುತ್ತಮುತ್ತಲಿನ ಬೆಟ್ಟ, ಗುಡ್ಡ, ಕಲ್ಲು, ಮಣ್ಣು, ಮರ, ಗಿಡಗಳು, ಪ್ರಾಣಿ, ಪಕ್ಷಿ ಗಳು ಇನ್ನೂ ಚರಾಚರ ವಸ್ತುಗಳನ್ನು ನಾವು ಮುಖ್ಯವಾಗಿ ಪರಿಸರವೆಂದು ಕರೆಯಬಹುದು. ಇವುಗಳನ್ನು ಯಥಾರೀತಿಯಾಗಿ ಬಳಸಿಕೊಳ್ಳುವದರ ಜೊತೆಗೆ ಮುಂದಿನ ಪೀಳಿಗೆಗೆ ಉಳಿಸಿ, ಬೆಳಸಿಕೊಂಡು ಹೋಗುವುದೆ ಪರಿಸರ ಸಂರಕ್ಷಣೆಯಾಗಿದೆ ಎಂದು ವಿಸ್ತಾರವಾಗಿ ತಿಳಿಸಿ ಹೇಳಿದರು.



























