
ಬೆಂಗಳೂರು, ಮಾ. 13:- ಕನ್ನಡಮೊದಲು ಬಳಗವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿ ಬೆಳವಡಿ ಮಲ್ಲಮ್ಮ ಯೋಜನೆಗಳ ಕುರಿತು ಮನವಿಯನ್ನು ಸಲ್ಲಿಸಿತ್ತು.
ಈ ಮನವಿಗೆ ಸ್ಪಂದಿಸಿ, ಸಚಿವ ಶಿವರಾಜ್ ತಂಗಡಗಿಯವರು ಮಾತನಾಡಿ ಬೆಳವಡಿ ಮಲ್ಲಮ್ಮ ಪ್ರತಿಷ್ಟಾನ''ವನ್ನು ಅನುಷ್ಠಾನ ಮಾಡಲು ನಿರ್ಧರಿಸಿದ್ದು ಕನ್ನಡಿಗರೆಲ್ಲರು ಸಂಭ್ರಮಿಸುವಂತಾಗಿದೆ. ಈ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತವಾಗಿಬೆಳವಡಿ ಮಲ್ಲಮ್ಮ ಪ್ರತಿಷ್ಠಾನ” ಸ್ಥಾಪನೆ ಬಗ್ಗೆ ಮಂಡನೆ ಮಾಡಿದ್ದಾರೆ ಎಂದರು.
ಇದಕ್ಕೆ ಕನ್ನಡ ಮೊದಲು ಬಳಗ ಹಲವಾರು ವರ್ಷಗಳಿಂದ ಬೆಳವಡಿ ಮಲ್ಲಮ್ಮ'' ಕುರಿತಾಗಿ ಮಾಡಿದ ಅಧ್ಯಯನ, ಕಾರ್ಯಕ್ರಮಗಳು, ಪ್ರಚಾರಗಳು ಮತ್ತು ಯೋಜನೆಗಳು ಬಹು ಮುಖ್ಯಪಾತ್ರ ವಹಿಸುತ್ತವೆ ಎಂದು ತಿಳಿಸಿದರು. ಸಚಿವರಿಗೆ ಬಳಗವುಕನ್ನಡಕುಲ ಧರ್ಮ”ದ ಸಂಸ್ಕೃತಿಯಂತೆ ಶ್ರೀಗಂಧವನ್ನು ಹಣೆಗೆ ಹಚ್ಚಿ, ಯಲ್ಲಪ್ಪ ಅವರು ಬಿಡಿಸಿದ ಬೆಳವಡಿ ಮಲ್ಲಮ್ಮ'' ಚಿತ್ರ ಪಠವನ್ನು ಕೊಟ್ಟು 6 ಕೋಟಿ ಕನ್ನಡಿಗರ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಯಿತು. ಬೆಳವಡಿ ಮಲ್ಲಮ್ಮ ಕುರಿತಾಗಿ ಕನ್ನಡ ಮೊದಲು ಬಳಗದ ಕೆಲಸಗಳು 2022, ಫೆಬ್ರವರಿ 19ರಂದು 3ನೇ ವರ್ಷದ ಪ್ರಾದೇಶಿಕತೆ ದಿನಾಚರಣೆಯೆಂದುಗೋ ವಿಜಯೋತ್ಸವ” ವಿಷಯದ ಕಾರ್ಯಕ್ರಮ.
ಬೆಳವಡಿ ಮಲ್ಲಮ್ಮ ಕುರಿತಾಗಿ ಅವರ ವಿಚಾರಗಳನ್ನ ಪ್ರಚಲಿತ ಮಾಡಲು ಅವರ ಸಾಧನೆಯನ್ನು ವಿಶ್ವಕ್ಕೆ ತಲುಪಿಸಲು ಸ್ನೇಹಿತರುಗಳೊಂದಿಗೆ ವಿಡಿಯೋಗಳು ಮಾಡುವ ಮುಖಾಂತರ ಪೆÇೀಸ್ಟ್ಗಳು ಹಾಕುವ ಮುಖಾಂತರ ಪ್ರಚಲಿತ ಮಾಡಿದ್ದು ವಿಶ್ವದಲ್ಲೇ ಪ್ರಥಮ ಮಹಿಳಾ ಸೈನ್ಯವನ್ನ ಕಟ್ಟಿದ ವೀರ ವನಿತೆ ವಿಚಾರವನ್ನು ಕಾರ್ಯಕ್ರಮದ ಮುಖಾಂತರ ನಮ್ಮ ಕನ್ನಡಪರ ಹೋರಾಟಗಾರರು, ಸ್ನೇಹಿತರು, ಹಿತೈಷಿಗಳು ಮಲ್ಲಮ್ಮನ ಕುರಿತಾದ ವಿಚಾರಗಳನ್ನು ಎಲ್ಲೆಡೆ ಹಂಚುವಲ್ಲಿ ಯಶಸ್ವಿಯಾಯಿತು ಎಂದು ಸಂಸ್ಥಾಪಕ ಅಧ್ಯಕ್ಷ ಜ್ಞಾನೇಶ್ವರ್.ಎಂ. ಹಾಗೂ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಸಾರಿಕಾ.ಎಸ್.ವಿ. ತಿಳಿಸಿದರು.
ಮತ್ತಷ್ಟು ಬೆಳವಡಿ ಮಲ್ಲಮ್ಮ ವಿಚಾರಗಳು ಪ್ರಚಲಿತವಾಗಲು ಕಾರಣವಾಗಿದ್ದು ಬಳಗದ ಅಭಿಯಾನಗಳ ರೂವಾರಿಗಳಾದ ಜ್ಞಾನೇಶ್ವರ್ ಅವರು ಬರೆದ “ಬೆಳವಡಿ ಮಲ್ಲಮ್ಮ” ಪುಸ್ತಕವನ್ನು ಹಂಚಿಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಗೌರವ ಆಧ್ಯಕ್ಷರು ಶ್ರೀರಾಜ್, ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾದ ವಾಣಿ, ಜ್ಯೋತಿ, ಜಯರಾಮ್, ವಸಂತ್, ಮೋಹನ್, ದೇವರಾಜ್, ಅಜಯ್ ಉಪಸ್ಥಿತರಿದ್ದರು.


























