ಕಲಬುರಗಿ: ರೈತರು ಕಟ್ಟಿದ ಬೆಳೆವಿಮೆ ಹಣ ಬಿಡುಗಡೆ ಮಾಡಬೇಕು, ಅತಿವೃಷ್ಟಿ ಪರಿಹಾರ ನೀಡಬೇಕು, ಕಲಬುರಗಿ ತಾಲ್ಲೂಕಿನ ಕೆಸರಟಗಿ ಗ್ರಾಮದ ಹತ್ತಿರವಿರುವ ಆಶ್ರಯ ಕಾಲೋನಿ ನಿವಾಸಿಗಳಿಗೆ ಪಕ್ಕು ಪತ್ರ ನೀಡಬೇಕು, ನಾಗರಿಕ ಸೌಲಭ್ಯ ಒದಗಿಸಬೇಕು ಮತ್ತು ಸಂಪರ್ಕ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಸಿಟಿಜನ್ ಫೋರಂ ಫಾರ್ ಪೀಸ್ ಆ್ಯಂಡ್ ಜಸ್ಟೀಸ್ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಎಂ.ಬಿ.ಸಜ್ಜನ್, ಶರಣಬಸಪ್ಪ ಮಮಶೆಟ್ಟಿ, ಜಾವೀದ್ ಹುಸೇನ್, ದೇವು ಬಿರಾದಾರ, ಸೈಯ್ಯದ್ ಹುಸೇನ್, ಜಾಫರ್ ಖಾನ್, ದಿಲೀಪ ನಾಗೂರೆ, ದೇವಿಂದ್ರಪ್ಪ ಪಾಟೀಲ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.