
ಕಲಬುರಗಿ:ಫೆ.೧೮:ಇದೇ ಫೆಬ್ರವರಿ ತಿಂಗಳ ೨೧ ೨೨ ನೇ ತಾರೀಕು ೨೦೨೬ ರಂದು ಕಲಬುರ್ಗಿಯ ಪ್ರತಿಷ್ಠಿತ ಪಿಡಿಎ ಇಂಜಿನಿಯರಿAಗ್ ಕಾಲೇಜಿನ ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ೨೦೨೬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಲ್ ಜಿ ನಮೋಶಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ಜಾಗತಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾವಿರಾರು ವಿದ್ಯಾರ್ಥಿಗಳು ತಮ್ಮ ತವರು ಕಾಲೇಜಿಗೆ ಮರಳುವ ಸಂತೋಷಪಡುವ ಈ ಕಾರ್ಯಕ್ರಮ ಅತ್ಯಂತ ಮಹತ್ವದ ಹಾಗಿದೆ .ಈ ಕಾರ್ಯಕ್ರಮದ ಉದ್ಘಾಟನೆ ಫೆಬ್ರುವರಿ ೨೧ ಶನಿವಾರ ನಡೆಯಲಿದೆ. ಶ್ರೀ ಪ್ರಹ್ಲಾದ್ ಜೋಶಿ ಮಾನ್ಯ ಕೇಂದ್ರ ಗ್ರಾಹಕ ವ್ಯವಹಾರಗಳು ಆಹಾರ ಸಾರ್ವಜನಿಕ ವಿತರಣೆ ಮತ್ತು ನವೀಕರಿಸಬಹುದಾದ ಇಂಧನ ಸಚಿವರು,ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ೨೦೨೬ರಂದು ಉದ್ಘಾಟಿಸಲಿದ್ದಾರೆ. ಶ್ರೀ ಶರಣಬಸಪ್ಪಗೌಡ ದರ್ಶನಾಪುರ್ ಮಾನ್ಯ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರು ಕರ್ನಾಟಕ ಸರ್ಕಾರ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಗಳು, ಶ್ರೀ ಈಶ್ವರ ಖಂಡ್ರೆ ಮಾನ್ಯ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವರು ಕರ್ನಾಟಕ ಸರಕಾರ ಹಾಗೂ ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ .ಶ್ರೀ ಸುರೇಂದ್ರ ಪಾಲ್ಸಿಂಗ್ ಸಲೂಜ ಪ್ ಪ್ರೀಮಿಯರ್ ಎನರ್ಜಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು ಹಾಗೂ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀ ರಾಘವೇಂದ್ರ ಔರದ್ ಕರ್ ಐಪಿಎಸ್ ಮಾಜಿ ಡಿಜಿಪಿ ಹಾಗು ಹಳೆಯ ವಿದ್ಯಾರ್ಥಿಗಳು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಸುನಿಲ್ ವಲ್ಲಾಪುರೆ ಮಾನ್ಯ ವಿಧಾನ ಪರಿಷತ್ ಸದಸ್ಯರು ಶ್ರೀ ಜಗದೇವ ಗುತ್ತೇದಾರ್ ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿಗಳು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ .ಶ್ರೀ ವಿಜಯಕುಮಾರ್ ದೇಶಮುಖ್ ಹೈಕಸಂಸ್ಥೆಯ ಮಾಜಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಹಳೇ ವಿದ್ಯಾರ್ಥಿಗಳು ಗೌರವ ಅತಿಥಿಗಳಾಗಿರಲಿದ್ದಾರೆ. , ಶ್ರೀ ಶಶಿಲ್ ಜಿ ನಮೋಶಿ ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ಹೈಕಾಶಿ ಸಂಸ್ಥೆಯ ಅಧ್ಯಕ್ಷರು ಕಾಲೇಜಿನ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಈ ಸಮ್ಮೇಳನಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು ಈಗಾಗಲೇ ೨೦೧೧ ಹಳೆ ವಿದ್ಯಾರ್ಥಿಗಳು ನೊಂದಣಿ ಮಾಡಿಸಿಕೊಂಡಿದ್ದಾರೆ ಮತ್ತು ಫೆಬ್ರವರಿ ೨೧ರಂದು ಸುಮಾರು ೫೦೦ಕ್ಕಿಂತ ಹೆಚ್ಚು ಜನರು ಸ್ಥಳದಲ್ಲಿಯೇ ನೋಂದಣಿ ಮಾಡುವ ನಿರೀಕ್ಷೆ ಇದ್ದು ಒಟ್ಟು ೩೦೦೦ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅಮೆರಿಕ ದುಬೈ ಯುಕೆ ಮತ್ತು ಆಸ್ಟ್ರೇಲಿಯಾದಂತ ದೇಶಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ ಈ ಸಮ್ಮಿಲನದ ಪ್ರಮುಖ ಆಕರ್ಷಣೆ ಎಂದರೆ ಉದ್ದೇಶತ ಪಿಡಿಎ ಹಳೆಯ ವಿದ್ಯಾರ್ಥಿಗಳ ಸಂಶೋಧನಾ ಮತ್ತು ತಾಂತ್ರಿಕ ಪಾರ್ಕ್ ಮತ್ತು ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ ಎಕ್ಸಲೆಂಟ್ ಸೆಂಟರ್ ಶಂಕುಸ್ಥಾಪನೆ ನೆರವೇರಿಸುವುದು. ಈ ಕಾರ್ಯಕ್ರಮದ ಉದ್ದೇಶಗಳೇನೆಂದರೆ ಉದ್ಯಮಿಗಳನ್ನು ಸಿದ್ಧಪಡಿಸಿ ಮತ್ತು ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸಜ್ಜುಗೊಳಿಸುವುದು. ಉದ್ಯೋಗಾವಕಾಶಗಳಿಗಾಗಿ ಹಳೆಯ ವಿದ್ಯಾರ್ಥಿಗಳ ಮಾರ್ಗದರ್ಶನ ನೀಡುವ ಸಮುದಾಯ ರೂಪಿಸುವುದು. ನವೋದ್ಯಮ ಸ್ಟಾರ್ಟ್ ಅಪ್ ಗಳನ್ನು ಮತ್ತು ಆರಂಭಿಕ ಹಂತದ ಉದ್ಯಮಗಳಿಗೆ ಬೆಂಬಲ ನೀಡಲು ಮೀಸಲಾದ ಇಂಕುಬೇಷನ್ ಕೇಂದ್ರ ಸ್ಥಾಪಿಸುವುದು. ತಾಂತ್ರಿಕ ಸಂಶೋಧನೆಯನ್ನು ಹೆಚ್ಚಿಸಲು ಕೈಗಾರಿಕಾ ತಜ್ಞರು ಮತ್ತು ಶಿಕ್ಷಣ ಸಂಸ್ಥೆಯ ನಡುವೆ ಸಹಯೋಗವನ್ನು ಬೆಳೆಸುವುದು. ಈ ಕಾರ್ಯಕ್ರಮಗಳ ಮೊದಲನೇ ದಿನದಲ್ಲಿ ಉದ್ಘಾಟನಾ ಸಮಾರಂಭ ,ತಿಳುವಳಿಕಾ ಪತ್ರಗಳ ಸಹಿ ,ಸಾಧಕರಿಂದ ಉಪನ್ಯಾಸಗಳು ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಔತಣಕೂಟ ನೆರವೇರಿಸಲಾಗುವುದು .ಎರಡನೇ ದಿನದ ಕಾರ್ಯಕ್ರಮದಲ್ಲಿ ಸಂಬAಧಿತ ವಿಭಾಗಗಳಲ್ಲಿ ತಾಂತ್ರಿಕ ಉಪನ್ಯಾಸಗಳು , ಫೀಡ್ಬ್ಯಾಕ್ ಪ್ರತಿಕ್ರಿಯೆ ಚರ್ಚೆಗಳು ಮತ್ತು ಸಮಾರೋಪ ಸಮಾರಂಭ ನೆರವೇರಿಸಲಾಗುವುದು ಎಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ನಮೋಶಿ ಸರ್ ಅವರು ಮಾತನಾಡಿದರು .
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಶ್ರೀ ಶಶಿಲ್ ಜಿ ನಮೋಶಿ, ಉಪಾಧ್ಯಕ್ಷರಾದ ಶ್ರೀ ರಾಜ ಭೀಮಳ್ಳಿ ,ಕಾರ್ಯದರ್ಶಿಗಳಾದ ಶ್ರೀ ಉದಯ ಚಿಂಚೋಳಿ, ಸಹ ಕಾರ್ಯ ದರ್ಶಿಗಳಾದ ಡಾ.ಕೈಲಾಸ್ ಬಿ ಪಾಟೀಲ್, ಡಾ. ಶರಣಬಸಪ್ಪ ಹರವಾಳ್ ಡಾ. ಅನಿಲ್ ಪಟ್ಟಣ್ ,ಸಂಪತ್ ಗಿಲ್ದಾ, ಪ್ರಾಚಾರ್ಯರಾದ ಡಾ. ಸಿದ್ದರಾಮ ಆರ್ ಪಾಟೀಲ್, ಉಪ ಪ್ರಾಚಾರ್ಯರಾದ ಡಾ. ಎಸ್.ಆರ್ .ಹೊಟ್ಟಿ, ಡಾ. ಭಾರತಿ ಹರಸೂರ್, ವಿಶೇಷಾಧಿಕಾರಿಯಾದ ಡಾ. ದೇವ ಸುಧಾಕರ್ ಪಾಟೀಲ್, ಸಂಚಾಲಕರಾದ ಪ್ರೊ. ಶಿವಕುಮಾರ್ ಪಾಟೀಲ್, ಸಹ ಸಂಚಾಲಕರಾದ ಡಾ. ನಾಗೇಂದ್ರ ಎಚ್ ,ಪರೀಕ್ಷಾ ನಿಯಂತ್ರಣ ಅಧಿಕಾರಿಯಾದ ಡಾ. ಶ್ರೀದೇವಿ ಸೋಮ, ಮಾಧ್ಯಮ ಸಂಚಾಲಕರಾದ ಡಾ. ಬಾಬುರಾವ್ ಸೇರಿಕಾರ್, ಡಾ. ನಾಗೇಶ್ ಸಾಲಿಮಠ ಪ್ರೊ. ಅಶೋಕ್ ಪಾಟೀಲ್ ಉಪಸ್ಥಿತರಿದ್ದರು


























