Home ಜಿಲ್ಲೆ ಕಲಬುರಗಿ ಬಡವರ ಕಲ್ಯಾಣ, ಎಲ್ಲಾ ವರ್ಗಗಳ ಏಳಿಗೆಗೆ ಪೂರಕವಾಗಿರುವ ಐತಿಹಾಸಿಕ ಬಜೇಟ್: ಶಶೀಲ್ ಜಿ ನಮೋಶಿ

ಬಡವರ ಕಲ್ಯಾಣ, ಎಲ್ಲಾ ವರ್ಗಗಳ ಏಳಿಗೆಗೆ ಪೂರಕವಾಗಿರುವ ಐತಿಹಾಸಿಕ ಬಜೇಟ್: ಶಶೀಲ್ ಜಿ ನಮೋಶಿ

ಕಲಬುರ್ಗಿ:ಫೆ.2:ದೇಶದ ಎಲ್ಲಾ ವರ್ಗದ ಅಭಿವೃದ್ಧಿಯ ಬಜೆಟ್‍ನ್ನು ಮಂಡಿಸಿರುವ ಕೇಂದ್ರದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು, ಆರ್ಥಿಕ ಪ್ರಗತಿ, ಜನರ ನಿರೀಕ್ಷೆ ಈಡೇರಿಕೆ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಈ ಮೂರು ಕರ್ತವ್ಯ ಮಂತ್ರಗಳನ್ನು ಪಠಿಸುವದರ ಮೂಲಕ ಐತಿಹಾಸಿಕ ಬಜೇಟ್ ಮಂಡಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜೀ ನಮೋಶಿ ಹರ್ಷ ವ್ಯಕ್ತಪಡಿಸಿದ್ದಾರೆ
ದೇಶದ ಪ್ರತಿಯೊಬ್ಬ ನಾಗರಿಕರು, ರೈತರು, ಪರಿಶಿಷ್ಟ ಜಾತಿ, ಪಂಗಡ ಹಾಗೊಯುವಜನರ ಅಭಿವೃದ್ಧಿಯನ್ನು ಈ ಬಜೆಟ್‍ನಲ್ಲಿ ಖಾತ್ರಿಪಡಿಸಿದ್ದಾರೆ ಬಡವರ ಅಭಿವೃದ್ಧಿ ದೀನ ದಲಿತರ ಪಾಲಿಗೆ ಆಶಾಕಿರಣವಾಗಿರುವ ಬಜೇಟ್ ಇದಾಗಿದೆ.
ಶಿಕ್ಷಣದಲ್ಲಿ ಹೂಡಿಕೆ – ವಿಕಸಿತ ಭಾರತದ ಅಡಿಪಾಯ

2026-27ರ ಕೇಂದ್ರ ಬಜೆಟ್ ಜನಸಾಮಾನ್ಯರ ಬದುಕಿಗೆ ನೇರವಾಗಿ ಸ್ಪರ್ಶಿಸುವ, ಭವಿಷ್ಯಮುಖಿ ಮತ್ತು ಜನಸ್ನೇಹಿ ಬಜೆಟ್ ಆಗಿದೆ. ಕ್ಯಾನ್ಸರ್ ಸೇರಿದಂತೆ ಜೀವ ರಕ್ಷಕ ಔಷಧಗಳು, ಮೊಬೈಲ್ ಫೆÇೀನ್ ಹಾಗೂ ಅದರ ಬಿಡಿಭಾಗಗಳು, ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ, ಜವಳಿ ಮತ್ತು ಚರ್ಮದ ಉತ್ಪನ್ನಗಳ ಮೇಲಿನ ಬೆಲೆ ಇಳಿಕೆ ಮಧ್ಯಮ ವರ್ಗದವರ ಜೇಬಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡಿದೆ. ಇದರಿಂದ ದೇಶೀಯ ಉತ್ಪಾದನೆಗೆ ಉತ್ತೇಜನ ಸಿಕ್ಕು ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಗಲಿದೆ.

ಶಿಕ್ಷಣ ಕ್ಷೇತ್ರದಲ್ಲಿ ಈ ಬಜೆಟ್ ಮಹತ್ವದ ಹೆಜ್ಜೆ ಇಟ್ಟಿದ್ದು, ಪೂರ್ವ ಭಾರತದಲ್ಲಿ ರಾಷ್ಟ್ರೀಯ ವಿನ್ಯಾಸ ಸಂಸ್ಥೆ ಸ್ಥಾಪನೆ ಮೂಲಕ ವಿನ್ಯಾಸ ಶಿಕ್ಷಣಕ್ಕೆ ಬಲ ನೀಡಲಾಗಿದೆ. ಪ್ರಮುಖ ಕೈಗಾರಿಕಾ ಹಾಗೂ ಲಾಜಿಸ್ಟಿಕ್ ಕಾರಿಡಾರ್‍ಗಳ ಸಮೀಪ ಐದು ಯೂನಿವರ್ಸಿಟಿ ಟೌನ್‍ಶಿಪ್‍ಗಳ ನಿರ್ಮಾಣವು ಯುವಜನತೆಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಲಿದೆ. ಅಲ್ಲದೆ, ಪ್ರತಿ ಜಿಲ್ಲೆಯಲ್ಲಿ Sಖಿಇಒ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಾಲಕಿಯರಿಗೆ ಹಾಸ್ಟೆಲ್ ಸ್ಥಾಪನೆಯ ಮೂಲಕ ಮಹಿಳಾ ಶಿಕ್ಷಣಕ್ಕೆ ಮತ್ತಷ್ಟು ಬಲ ನೀಡಲಾಗಿದೆ.

ಒಟ್ಟಾರೆಯಾಗಿ, ಈ ಬಜೆಟ್ ಸಾಮಾಜಿಕ ನ್ಯಾಯ, ಆರ್ಥಿಕ ಬೆಳವಣಿಗೆ ಮತ್ತು ಸಮಾವೇಶಿತ ಅಭಿವೃದ್ಧಿಗೆ ಸ್ಪಷ್ಟ ದಿಕ್ಕು ನೀಡುವ ಮೂಲಕ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಮಹತ್ವದ ಮುನ್ನುಡಿಯಾಗಿದೆ.