
ಕಲಬುರಗಿ,ನ.20-2025-26ನೇ ಸಾಲಿನ ವಲಯ ಮಟ್ಟದ ಪ್ರತಿಭಾಕಾರಂಜಿಯನ್ನು ಅವರಾದ (ಬಿ) ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಎಸ್ನ ಪ್ರಭಾರಿ ಪ್ರಾಂಶುಪಾಲರಾದ ಸಂತೋಷ್ ಚಿಕ್ಕಬಸ್ತಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅವರಾದ (ಬಿ) ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಿನಾಥ ಕಿವುಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಹಂಚಿನಾಳ, ಪ್ರಾಂಶುಪಾಲ ಗೋಪಾಲ್ ಚವಾಣ್, ಎಸ್ಡಿಎಂಸಿಯ ಸದಸ್ಯರಾದ ಮೀನಾಕ್ಷಿ ಪಾಟೀಲ್ ಹಾಗೂ ಆರತಿ ಚೌಡ ಶೆಟ್ಟಿ ಆಗಮಿಸಿದ್ದರು. ಅತಿಥಿಗಳಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಲಬುರಗಿ ಉತ್ತರ ವಲಯದ ಅಧ್ಯಕ್ಷ ಶೇಕ್ ಮುಜೀಬ್, ಶಿಕ್ಷಣ ಸಂಯೋಜಕ ಮಸ್ತಾನ್ ಪಟೇಲ್ , ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಭೋಜನಗೌಡ ಪಾಟೀಲ್, ಕಾರ್ಯದರ್ಶಿ ಚಿದಾನಂದ, ಶಾಲೆಯ ಮುಖ್ಯಗುರು ಹೆಚ್.ಎಸ್.ಹಿರೇಮಠ, ವಲಯದ ಸಿಆರ್ಪಿ ಶರಣ ಕುಮಾರ್, ನಾಗೂರ್ ವಲಯದ ಸಿ ಆರ್ ಪಿ ಹನುಮಂತ ರಾವ್ ಆಗಮಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿದರು. ವಿದ್ಯಾರ್ಥಿಗಳ ಪ್ರತಿಭೆಗೆ ರಾಜ್ಯಮಟ್ಟಕ್ಕೆ ಹೋಗಲು ಇದೊಂದು ವಲಯ ಮಟ್ಟದ ಪ್ರತಿಭಾ ಕಾರಂಜಿ ಒಳ್ಳೆಯ ವೇದಿಕೆ ಎಂದು ಬಣ್ಣಿಸಿದರು 21 ಶಾಲೆಗಳ ಮುಖ್ಯ ಗುರುಗಳು ಹಾಗೂ ಕನಿಷ್ಠ 250 ವಿದ್ಯಾರ್ಥಿಗಳು ಬೇರೆ ಶಾಲೆಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ವಲಯದ ಸಿ ಆರ್ ಪಿ ಶರಣ ಕುಮಾರ್ ಎಲ್ಲರನ್ನ ಸ್ವಾಗತಿ ಸ್ವಾಗತಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಪ್ರಹಲಾದ್ ಕುಲಕರ್ಣಿ ಮಾಡಿದರು, ವಂದನಾರ್ಪಣೆಯನ್ನು ದಯಾನಂದ್ ದೈಹಿಕ ಶಿಕ್ಷಕರು ನೆರವೇರಿಸಿದರು.































