
ಯಾದಗಿರಿ,ನ.20-ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ಉನ್ನತಮಟ್ಟದ ಜೀವನ ರೂಪಿಸಿಕೋಬೇಕು. ಅದರ ಜೊತೆಗೆ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಸಂಸ್ಕೃತಿ ಚರಿತ್ರೆ ನಾಡು ನುಡಿಯ ಕಾಳಜಿ ಕೂಡಾ ಇರಬೇಕು. ಅದು ಬಹುಮುಖ್ಯ ಎಂದು ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಹೇಳಿದರು.
ಯಾದಗಿರಿಯ ಸರ್ಕಾರಿ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನಾಡಿನ ಸಾಕ್ಷಿಪ್ರಜ್ಞೆಯ ಲೇಖಕ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಕಥೆ, ಚಿತ್ರಕಥೆ ನಿರ್ದೇಶನದ “ಸ್ವಪ್ನಮಂಟಪ” ಸಿನೆಮಾ ಪ್ರದರ್ಶನದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಈ ನಾಡಿನ ಅಸ್ಮಿತೆಯಾದ ಡಾ.ಬರಗೂರರ ವಿವಿಧ ಪ್ರಕಾರದ ಸಾಹಿತ್ಯ ಹಾಗೂ ಚಲನಚಿತ್ರಗಳಲ್ಲಿಯ ಸಾಧನೆ ಹಾಗೂ ಪ್ರಸ್ತುತ ಸ್ವಪ್ನಮಂಟಪ ದ ಚಾರಿತ್ರಿಕ ಹಾಗೂ ವಾಸ್ತವಿಕ ಘಟನೆಗಳ ಹಿನ್ನೆಲೆಯ ಮನೋಜ್ಞ ಪ್ರೀತಿ ಪ್ರೇಮ ನಾಡು ನುಡಿಯ ಕಾಳಜಿಯ ಹಿನ್ನೆಲೆಯಲ್ಲಿ ಪರಿಚಯಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿನ್ಸಿಪಾಲರಾದ ಡಾ.ಸುಭಾಸಚಂದ್ರ ಕೌಲಗಿಯವರು ವಹಿಸಿದ್ದರು.ಅವರು ಮಾತನಾಡಿ ತಮ್ಮ ವಿದ್ಯಾರ್ಥಿಗಳಿಗೆ ಪೆÇ್ರ.ಬರಗೂರರಂತಹ ನಾಡಿನ ಬಹುದೊಡ್ಡ ಲೇಖಕರನ್ನು ಪರಿಚಯಿಸುವ ಮೂಲಕ ಅವರ ನಿರ್ದೇಶನದ ಈ ಚಾರಿತ್ರಿಕ ಮಹತ್ವದ ಚಲನಚಿತ್ರ ತೋರಿಸುವ ಮೂಲಕ ವಿದ್ಯಾರ್ಥಿಗಳಿಗೆ ಮನೋರಂಜನೆಯ ಜೊತೆಗೆ ಸಾಂಸ್ಕೃತಿಕ ಪರಂಪರೆ,ನಾಡುನುಡಿಯ ಅಭಿಮಾನ ಬೆಳೆಸುವ ಈ ಚಿತ್ರದ ಪ್ರದರ್ಶನ ನಮ್ಮ ಕಾಲೇಜಿನಲ್ಲಿ ಏರ್ಪಡಿಸಿದ್ದು ಸಂತೋಷ.ಆ ಕಾರಣದಿಂದ ಪೆÇ್ರ.ಬರಗೂರರಿಗೂ ನಮ್ಮ ಜಿಲ್ಲೆಯ ಹೆಮ್ಮೆಯ ಲೇಖಕ ಡಾ.ಹೊನ್ಕಲ್ ರವರಿಗೆ ಅಭಿನಂದನೆಗಳು ಎಂದರು.
ಕಾರ್ಯಕ್ರಮವನ್ನು ಹಾಗೂ ಚಲನಚಿತ್ರ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಏರ್ಪಡಿಸಿ ಕಾರ್ಯಕ್ರಮವನ್ನು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರ ಕೊಂಕಲ್ ಅವರು ನಿರ್ವಹಿಸಿ ವಂದಿಸಿದರು. ಲೇಖಕಿ ಜಯದೇವಿ ಗಾಯಕವಾಡ, ಡಾ.ಲಿಂಗೇರಿ ಮುಂತಾದ ಅನೇಕ ಉಪನ್ಯಾಸಕರು, ಅಪಾರ ಸಂಖ್ಯೆಯ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.































