
ಪಾಟ್ನಾ, ನ. ೨೦- ಬಿಹಾರದ ಮುಖ್ಯಮಂತ್ರಿಯಾಗಿ ೧೦ನೇ ಬಾರಿಗೆ ಜೆಡಿಯುನ ನಿತೀಶ್‌ಕುಮಾರ್ ಪದಗ್ರಹಣ ಮಾಡಿದ್ದು, ಬಿಹಾರದಲ್ಲಿ ಮತ್ತೆ ಸುಶಾಸನ್ ಬಾಬು ಆಳ್ವಿಕೆ ಮುಂದುವರೆದಿದೆ.
ಬಿಹಾರ ರಾಜಧಾನಿ ಪಾಟ್ನಾದ ಗಾಂಧಿ ಮೈದಾನದಲ್ಲಿಂದು ನಡೆದ ಸಮಾರಂಭದಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಇವರ ಜತೆಗೆ ಜೆಡಿಯು, ಬಿಜೆಪಿ, ಎಲ್‌ಜೆಪಿ, ಹೆಚ್‌ಎಎಂ, ಆರ್‌ಎಲ್‌ಎಂನ ೨೬ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಹಾರದ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ನೂತನ ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸಿದರು.
ನೂತನ ಮುಖ್ಯಮಂತ್ರಿ ಸೇರಿದಂತೆ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು
ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾದ ಸಾಮ್ರಾಟ್ ಚೌದರಿ ಮತ್ತು ಉಪನಾಯಕ ವಿಜಯಕುಮಾರ್ ಸಿನ್ಹಾ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿಯ ೧೪, ಜೆಡಿಯುನ- ೮ ಎಲ್‌ಜೆಪಿ- ೨, ಹೆಚ್‌ಎಎಂ ಮತ್ತು ಆರ್‌ಎಲ್‌ಎನ್ ತಲಾ ಒಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಜೆಡಿಯುನಿಂದ ವಿಜಯಕುಮಾರ್ ಚೌಧರಿ, ಬಿಜೇಂದ್ರಪ್ರಸಾದ್ ಯಾದವ್, ಶ್ರವಣ್‌ಕುಮಾರ್, ಅಶೋಕ್ ಚೌಧರಿ, ಲೇಸಿ ಸಿಂಗ್, ಮದನ್ ಸಹಾನಿ, ಸುನೀಲ್‌ಕುಮಾರ್, ಮೊಹಮದ್ ಜಮಾಖಾನ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿಯಿಂದ ಉಪಮುಖ್ಯಮಂತ್ರಿಗಳಾಗಿ ಸಾಮ್ರಾಟ್ ಚೌಧರಿ, ವಿಜಯುಕಮಾರ್ ಸಿನ್ಹಾ ಇವರುಗಳ ಜತೆ ಮಂಗಲ್ ಪಾಂಡೆ, ದಿಲೀಪ್ ಜೈಸ್ವಾಲ್, ರಾಮ್ ಕೃಪಾಲ್ ಯಾದವ್, ನಿತೀನ್ ನಬೀ, ಸಂಜಯ್ ಸಿಂಗ್ ಟೈಗರ್, ರಾಮ ನಿಶಾದ್, ಅರುಣ್ ಶಂಕರ್ ಪ್ರಸಾದ್, ರಾಮ್‌ಕೃಪಾಲ್ ಯಾದವ್, ಸುರೇಂದ್ರ ಪ್ರಸಾದ್ ಮೆಹ್ತಾ, ನಾರಾಯಣಪ್ರಸಾದ್, ಲಕೇಂದ್ರಕುಮಾರ್ ರೋಷನ್, ಶ್ರೇಯಾಸಿ ಸಿಂಗ್, ಪ್ರಮೋದ್‌ಕುಮಾರ್ ರವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು
ಹಾಗೆಯೇ ಕೇಂದ್ರ ಸಚಿವ ಸಿರಾಗ್ ಪಾಸ್ವಾನ್ ನಾಯಕತ್ವದ ಎಲ್‌ಜೆಪಿಯ ಸಂಜಯ್‌ಕುಮಾರ್, ಸಂಜಯ್ ಕುಮಾರ್ ಸಿಂಗ್, ಹೆಚ್‌ಎಎಂನಿಂದ ಸಂತೋಷ್‌ಕುಮಾರ್ ಸುಮನ್ ಹಾಗೂ ಆರ್‌ಎಲ್‌ಎಂನ ದೀಪಕ್ ಪ್ರಕಾಶ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಎನ್‌ಡಿಎ ಮೈತ್ರಿಕೂಟದ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಭಾಗಿಯಾಗಿ ಬಿಹಾರದಲ್ಲಿ ನಿತೀಶ್‌ಕುಮಾರ್ ನೇತೃತ್ವದ ನೂತನ ಸರ್ಕಾರ ರಚನೆಗೆ ಸಾಕ್ಷಿಯಾದರು.
ಬಿಹಾರದಲ್ಲಿ ಕಳೆದ ೨೦ ವರ್ಷಗಳಿಂದ ಸುಶಾಸನ ಬಾಬು ಎಂದೇ ಹೆಸರಾಗಿರುವ ನಿತೀಶ್‌ಕುಮಾರ್ ಆಡಳಿತ ಚುಕ್ಕಾಣಿ ಹಿಡಿದಿದ್ದು, ಅವರು ೧೦ನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದು ಬಿಹಾರದ ಮಟ್ಟಿಗೆ ಒಂದು ದಾಖಲೆ ಎನಿಸಿದೆ.
ಜೆಡಿಯುನ ನಿತೀಶ್‌ಕುಮಾರ್ ರವರು ೨೦೦೦ನೇ ಇಸ್ವಿಯಲ್ಲಿ ಮೊದಲ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೇರಿದ್ದರು. ನಂತರ ಅವರು ಕಾಂಗ್ರೆಸ್, ಆರ್‌ಜೆಡಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿ ಮುಂದುವರೆದಿದ್ದರು. ಈಗ ಮತ್ತೆ ಅವರು ಬಿಜೆಪಿ ಜತೆ ಸೇರಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಇಂದಿನಿಂದ ಮತ್ತೆ ನಿತೀಶ್‌ಕುಮಾರ್ ದರ್ಬಾರ್ ಬಿಹಾರದಲ್ಲಿ ಆರಂಭಗೊಂಡಿದೆ.
ಬಿಹಾರ ವಿಧಾನಸಭೆಗೆ ಕಳೆದ ನವೆಂಬರ್ ೬ ಮತ್ತು ೧೧ ಎರಡು ಹಂತಗಳಲ್ಲಿ ಚುನಾವಣೆ ನಡೆದಿದ್ದು ನ. ೧೪ ರಂದು ಫಲಿತಾಂಶ ಪ್ರಕಟವಾಗಿತ್ತು. ಎನ್‌ಡಿಎ ಮೈತ್ರಿಕೂಟ ಬಿಹಾರ ವಿಧಾನಸಭೆಯ ೨೪೩ ಕ್ಷೇತ್ರಗಳ ಪೈಕಿ ೨-೩ ಕ್ಷೇತ್ರಗಳಲ್ಲಿ ಗೆದ್ದಿದ್ದು, ಕಾಂಗ್ರೆಸ್ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ೩೪ ಕ್ಷೇತ್ರಗಳಿ ಅಷ್ಟೇ ಗೆದ್ದಿತ್ತು.
ನಿನ್ನೆ ನಿತೀಸ್‌ಕುಮಾರ್ ಅವರನ್ನು ಎನ್‌ಡಿಎ ಮೈತ್ರಿಕೂಟದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರಅವರು ರಾಜ್ಯಪಾಲರನ್ನು ಭೇಟಿ ಮಾಡಿ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ನಿತೀಶ್‌ಕುಮಾರ್ ಅವರಿಗೆ ಸರ್ಕಾರ ರಚನೆಗೆ ಆಹ್ವಾನನೀಡಿದ್ದರು.
ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಖಾಂಡಾ ಮುಖ್ಯಮಂತ್ರಿ ಪುಷ್ಕರ್‌ಸಿಂಗ್, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಒಡಿಸ್ಸಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಗಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಶರ್ಮಾ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ, ಗುಜರಾತ್ ಮುಖ್ಯಮಂತ್ರಿ ಭೂಪೇಲ ಪಟೇಲ್, ಬಿಜೆಪಿಯಿಂದ ಉಪಮುಖ್ಯಮಂತ್ರಿಗಳಾಗಿರುವ ಸಾಮ್ರಾಟ್ ಚೌದರಿ ಮತ್ತು ವಿಜಯಸಿನ್ಹಾ ಇಬ್ಬರು ಹಿಂದಿನ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿದ್ದರು
ಬಿಜೆಪಿ ರಾಜ್ಯಾಧ್ಯಕ್ಷದಿಲೀಪ್ ಜೈಸ್ವಾಲ್‌ಗೂ ಸಹ
ಸೇರಿದಂತೆ ಎನ್‌ಡಿಎ ಆಡಳಿತ ಇರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.


































