ಶ್ರೀ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನದ ಟ್ರಸ್ಟ್ವತಿಯಿಂದ ಗರಡಿ ಕೇರಿ ಲಸ್ಕರ್ ಮೊಲದಲ್ಲಿ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಧರ್ಮಪತ್ನಿ ಪಾರ್ವತಿ ಸಿದ್ದರಾಮಯ್ಯರವರ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮತ್ತು ಹೋಮ ಪೂರ್ಣಾವತಿ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಅವರ ಗುಣಮುಖವಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ವೇದ ಬ್ರಹ್ಮರ್ಷಿ ವೇದ ಬ್ರಹ್ಮ ಶ್ರೀ ರೇಣುಕಾ ಸ್ವಾಮಿರವರ ನೇತೃತ್ವದಲ್ಲಿ ಈ ದಿನದ ಅಮಾವಾಸ್ಯೆ ಪೂಜೆ ಕೈಕರೆಗಳು ನೆರವೇರಿತು. ಚಿತ್ರದಲ್ಲಿ ದೇವಸ್ಥಾನದ ಗುಡ್ಡಪ್ಪನವರಾದ ಶ್ವೇತಾ ರವಿಕುಮಾರ್, ದೇವಸ್ಥಾನ ಗೌರವಾಧ್ಯಕ್ಷರಾದ ಶ್ರೀಯುತ ಎಂ ಶಿವಣ್ಣರವರ, ಮಹಾಪೆÇೀಷಕರಾದ ರಾಚಯ್ಯ ರಾಜೇಂದ್ರ ವೆಂಕಟದಾಸಾಚಾರ್ ಜಗನ್ನಾಥ್ ಸುರೇಶ್ ಬಾಬು ನಾಗೇಂದ್ರ ರವಿ ಮಹದೇವ ಹಾಗೂ ಪದಾಧಿಕಾರಿಗಳು ಭಕ್ತಾದಿಗಳು ಹಾಜರಿದ್ದರು.