ಬಿಎಂಟಿಸಿ ಬಸ್ ಹರಿದು ತರಕಾರಿ ವ್ಯಾಪಾರಿ ಸಾವು

ಬೆಂಗಳೂರು, ನ.೨೦-ವೇಗವಾಗಿ ಬಂದ ಬಿಎಂಟಿಸಿ ಬಸ್ ಹರಿದು ತರಕಾರಿ ವ್ಯಾಪಾರಿ ಮೃತಪಟ್ಟಿರುವ ದುರ್ಘಟನೆ ಮಡಿವಾಳದ ಬಸ್ ನಿಲ್ದಾಣದ ಬಳಿ ನಡೆದಿದೆ.


ಮಡಿವಾಳದ ವೆಂಕಟರಾಮಪ್ಪ(೬೫) ಮೃತಪಟ್ಟರು,ತರಕಾರಿ ವ್ಯಾಪಾರಿಯಾಗಿದ್ದ ವೆಂಕಟರಾಮಪ್ಪ ಮಡಿವಾಳ ಮಾರ್ಕೆಟ್‌ಗೆ ತರಕಾರಿ ತರಲು ಹೋಗುವಾಗ
ಮಾರ್ಗ ಮಧ್ಯದ ಬಸ್ ನಿಲ್ದಾಣದ ಬಳಿ ಬಿಎಂಟಿಸಿ ಬಸ್ ಹರಿದು ವೆಂಕಟರಾಮಪ್ಪ ಮೃತಪಟ್ಟದ್ದಾರೆ.


ಸೇಂಟ್‌ಜಾನ್ಸ್ ಆಸ್ಪತ್ರೆ ಶವಾಗಾರದಲ್ಲಿರುವ ಮೃತದೇಹ ಇರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತಕ್ಕೆ ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯ ಕಾರಣ ಎನ್ನಲಾಗಿದ್ದು, ಆತನನ್ನು ಬಂಧಿಸಲಾಗಿದೆ.


ವೆಂಕಟರಾಮಪ್ಪ ಅವರಿಗೆ ಬಸ್ ಡಿಕ್ಕಿಯಾಗುವ ಮುನ್ನ ಎರಡು ವಾಹಗಳಿಗೂ ಗುದ್ದಿದೆ ಎಂದು ದಕ್ಷಿಣ ವಿಭಾಗದ ಸಂಚಾರ ಡಿಸಿಪಿ ಗೋಪಾಲ್ ಬ್ಯಾಕೋಡ್ ಹೇಳಿದ್ದಾರೆ.