ರಾಜಸ್ಥಾನ ಪಾಲಾದ ಜಡೇಜಾ, ಸಿಎಸ್‌ಕೆಗೆ ಸಂಜು

ಆಟಗಾರರ ಅದಲು-ಬದಲು

ನವದೆಹಲಿ.ನ.೧೫- ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಆಟಗಾರರ ಹರಾಜಿಗೆ ಮುನ್ನ ತಂಡಗಳ ನಡುವೆ ಆಟಗಾರರ ವಿನಿಮಯಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ರವೀಂದ್ರ ಜಡೇಜ ಮತ್ತು ಸಂಜು ಸ್ಯಾಮ್ ಸನ್ ಸೇರಿ ಹಲವು ಆಟಗಾರರು ಅದಲು ಬದಲಾಗಿದ್ದಾರೆ.

೨೦೨೬ರ ಐಪಿಎಲ್ ಟೂರ್ನಿಗೆ ಆಟಗಾರರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ನೀಡಿದ್ದ ಗಡುವಿಗೂ ಮುನ್ನ ಫ್ರಾಂಚೈಸಿಗಳು ತಮ್ಮ ನಿರ್ಧಾರ ಪ್ರಕಟಿಸಿದ್ದು ರವೀಂದ್ರ ಜಡೇಜಾ ರಾಜಸ್ತಾನದ ಪಾಲಾಗಿದ್ದು ಸಂಜು ಸಾಮ್‌ಸನ್ ಚೆನ್ನೈ ತಂಡ ಸೇರಿದ್ದಾರೆ.

ಹಲವು ಆಟಗಾರರ ವಿನಿಮಯ ಮಾಡಿಕೊಂಡ ಬಗ್ಗೆ ಐಪಿಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ..೧೨ ವರ್ಷಗಳಿಂದ ಸಿಎಸ್‌ಕೆ ತಂಡದ ಭಾಗವಾಗಿದ್ದ ರವೀಂದ್ರ ಜಡೇಜ ಮುಂಬರುವ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ. ೧೪ ಕೋಟಿಗೆ ಅವರನ್ನು ರಾಜಸ್ಥಾನ ಖರೀದಿ ಮಾಡಿದೆ.

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರು ಮುಂದಿನ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ೧೮ ಕೋಟಿಗೆ ಅವರು ಸಿಎಸ್‌ಕೆ ಮಾರಾಟವಾಗಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುತ್ತಿದ್ದ ಇಂಗ್ಲೆಂಡ್ ತಂಡ ಆಲ್‌ರೌಂಡರ್ ಸ್ಯಾಮ್ ಕರನ್ ಅವರು ೨.೪ ಕೋಟಿಗೆ ರಾಜಸ್ಥಾನ ಪಾಲಾಗಿದ್ದಾರೆ

ಸಂಜು ಸ್ಯಾಮ್ಪನ್‌ಗಾಗಿ ಜಡೇಜಾ ಹಾಗೂ ಕರನ್ ಅವರನ್ನು ಚೆನ್ನೈ ಬಿಟ್ಟುಕೊಟ್ಟಿದೆ. ಲಖನೌ ಪರವಾಗಿ ಆಡುತ್ತಿದ್ದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರನ್ನು ಸನ್ ಸೈಸರ್ಸ್ ಹೈದರಾಬಾದ್‌ನೊಂದಿಗೆ ೧೦ ಕೋಟಿಗೆ ವಿನಿಮಯ ಮಾಡಿಕೊಳ್ಳಲಾಗಿದೆ.

ಮಯಂಕ್ ಮಾರ್ಕಂಡೆಯನ್ನು ೩೦ ಲಕ್ಷಕ್ಕೆ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಮುಂಬೈ ಇಂಡಿಯನ್ಸ್‌ಗೆ ಬಿಟ್ಟು ಕೊಟ್ಟಿದೆ. ಬೌಲಿಂಗ್ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಅವರು ಮುಂದಿನ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಪರ ಆಡಲಿದ್ದಾರೆ. ಅವರನ್ನು ೩೦ ಲಕ್ಷಕ್ಕೆ ಮುಂಬೈ ಇಂಡಿಯನ್ಸ್‌ನಿಂದ ವಿನಿಮಯ ಮಾಡಿಕೊಳ್ಳಲಾಗಿದೆ.

ಎಡಗೈ ಬ್ಯಾಟರ್ ನಿತಿಶ್ ರಾಣ ಅವರನ್ನು ೪.೨ ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ ರಾಯಲ್ಸ್ ಗೆ ಬಿಟ್ಟುಕೊಟ್ಟಿದೆ. ಆಲ್‌ರೌಂಡರ್ ದನೋವನ್ ಫೆರಾರ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡವು ೧ ಕೋಟಿಗೆ ದೆಹಲಿ ಕ್ಯಾಪಿಟಲ್ಸ್ ಜೊತೆ ವಿನಿಮಯ ಮಾಡಿಕೊಂಡಿದೆ.೨೦೨೬ರ ಐಪಿಎಲ್‌ನ ಮಿನಿ ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದೆ.

೨೦೧೩ ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ನಂತರ ೧೭೭ ಐಪಿಎಲ್ ಪಂದ್ಯಗಳನ್ನು ಆಡಿರುವ ಸಿಎಸ್‌ಕೆ, ೨೦೧೬ ಮತ್ತು ೨೦೧೭ ರಲ್ಲಿ ಆರ್‌ಆರ್ ಮತ್ತು ದೆಹಲಿ ಕ್ಯಾಪಿಟಲ್ಸ್ ಜೊತೆಗಿನ ಅವರ ಅನುಭವದ ನಂತರ ಸ್ಯಾಮ್ಸನ್ ಅವರ ಮೂರನೇ ಫ್ರಾಂಚೈಸಿಯಾಗಲಿದೆ.

ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ರಾಜಸ್ಥಾನ ರಾಯಲ್ಸ್‌ಗೆ ವರ್ಗಾವಣೆಯಾಗುತ್ತಿದ್ದಾರೆ, ಶುಲ್ಕ ೨.೪ ಕೋಟಿ ರೂ.ಗಳನ್ನು ಉಳಿಸಿಕೊಂಡಿದ್ದಾರೆ. ೨೭ ವರ್ಷದ ಸ್ಯಾಮ್ ಕರನ್ ೬೪ ಐಪಿಎಲ್ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ, ಪಂಜಾಬ್ ಕಿಂಗ್ಸ್ ಮತ್ತು ಸಿಎಸ್‌ಕೆಯನ್ನು ಪ್ರತಿನಿಧಿಸಿದ ನಂತರ ಆರ್‌ಆರ್ ಅವರ ಮೂರನೇ ಫ್ರಾಂಚೈಸಿಯಾಗಿದೆ.

ಲೆಗ್-ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಅವರು ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ೩೦ ಲಕ್ಷ ರೂ. ಶುಲ್ಕಕ್ಕೆ ಮಾರಾಟವಾದ ನಂತರ ಮುಂಬೈ ಇಂಡಿಯನ್ಸ್‌ಗೆ ಮರಳುತ್ತಿದ್ದಾರೆ.ಮಾರ್ಕಂಡೆ ೨೦೧೮ ರಲ್ಲಿ ಮುಂಬೈ ತಂಡದೊಂದಿಗೆ ತಮ್ಮ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದರು, ನಂತರ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದರು, ೩೭ ಪಂದ್ಯಗಳಲ್ಲಿ ೩೭ ವಿಕೆಟ್‌ಗಳನ್ನು ಕಬಳಿಸಿದ್ದಾರೆ

ಬೌಲಿಂಗ್ ಆಲ್‌ರೌಂಡರ್ ಆಗಿರುವ ಅರ್ಜುನ್ ತೆಂಡೂಲ್ಕರ್, ಮುಂಬೈ ಇಂಡಿಯನ್ಸ್‌ನಿಂದ ವರ್ಗಾವಣೆಯಾದ ನಂತರ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಪ್ರತಿನಿಧಿಸಲಿದ್ದಾರೆ, ಪ್ರಸ್ತುತ ಶುಲ್ಕ ೩೦ ಲಕ್ಷ ರೂಗೆ ಮಾರಾಟವಾಗಿದ್ದಾರೆ

ಆಟಗಾರರ ಅದಲು ಬದಲು

  • ರವೀಂದ್ರ ಜಡೇಜಾ- ರಾಜಸ್ತಾನ ರಾಯಲ್ಸ್
  • ಸಂಜು ಸ್ಯಾಮ್ ಸನ್ – ಚೆನ್ನೈ ಸೂಪರ್ ಕಿಂಗ್
  • ಆಲ್‌ರೌಂಡರ್ ಸ್ಯಾಮ್ ಕರನ್ – ರಾಜಸ್ತಾನ ರಾಯಲ್ಸ್
  • ಮೊಹಮ್ಮದ್ ಶಮಿ – ಸನ್ ಸೈಸರ್ಸ್ ಹೈದರಾಬಾದ್
  • ಮಯಂಕ್ ಮಾರ್ಕಂಡೆ- ಕೋಲ್ಕತ್ತ ನೈಟ್ ರೈಡರ್ಸ್
  • ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್- ಎಲ್ ಎಸ್ ಜಿ
  • ನಿತಿಶ್ ರಾಣ – ರಾಜಸ್ತಾನ ರಾಯಲ್ಸ್
  • ದನೋವನ್ ಫೆರಾರ – ದೆಹಲಿ ಕ್ಯಾಪಿಟಲ್