ಎಐ ತಂತ್ರಜ್ಞಾನ ಇಂದಿನ ಅವಶ್ಯಕತೆ :ಡಾ. ಜಗದೀಶ

ಬೀದರ:ಅ.27: ಇವತ್ತಿನಎಲ್ಲ ಸಂಶೋಧನೆಗಳೆಲ್ಲವೂ ಸಂಖ್ಯಾಶಾಸ್ತ್ರಗಳ ಮೇಲೆ ಅವಲಂಬಿತವಾಗಿದೆ. ಯಾವುದೇ ಸಂಶೋಧಿತ ತಂತ್ರಜ್ಞಾನ ಅಳವಡಿಸಬೇಕಾದರೆ ಡಾಟಾ ಬಹಳ ಮುಖ್ಯವಾಗಿದೆ ಎಂದು ಐ ಎಸ್ ಐ ಬೆಂಗಳೂರಿನ ಡಾ.ಜಗದೀಶ ನುಡಿದರು
ಅವರು ಬೀದರನ ಕ.ರಾ. ಶಿ ಸಂಸ್ಥೆಯ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಆಂತರಿಕ ಭವಿಷ್ಯಕ್ಕಾಗಿ ಎಐ ತಂತ್ರಜ್ಞಾನ ವಿಷಯದ ಮೇಲೆ ನಡೆದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪ್ರಿಡಿಕಶ್ಶನ್ ಮತು ??ಫೆÇೀರಕಾಸ್ಟಿಂಗ್ ವಿಷಯದ ಮೇಲೆ ನಡೆಯುತ್ತಿರುವ ಸಂಶೋಧನೆಗಳನ್ನು ಹಂಚಿಕೊಂಡ ಅವರು ಎ ಐ ಇಂದಿನ ಅವಶ್ಯಕತೆ ಎಂದರು.

ಈ ಸಮ್ಮೇಳನದಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ವಿವಿಧ ವಿವಿಗಳ ಪ್ರಾಧ್ಯಾಪಕರು ಸೇರಿದಂತೆ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಪೆÇ್ರೀ. ಮಲ್ಲಿಕಾರ್ಜುನ ಹಂಗರಗೆ ಸಮ್ಮೇಳನದಲ್ಲಿ ನಡೆದ ಚರ್ಚೆ ಹಾಗೂ ಫಲಿತಾಂಶಗಳನ್ನು ಕುರಿತು ವಿವರಿಸಿ ಮುಂದೆ ನಡೆಯಬಹುದಾದ ಸಂಶೋಧನೆಗಳ ಮಾಹಿತಿ ನೀಡಿದರು.
ಕರ್ನಾಟಕ ರಾಷ್ಟ್ರಿಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ ಪಾಟೀಲ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದರು.
ಸಮಾರಂಭದಲ್ಲಿ ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಕಾಂತ ದೊಡ್ಡಮನಿ ಸೇರಿದಂತೆ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಗಣಕಯಂತ್ರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಿ. ವಿ. ರವಿಚಂದ್ರ ನಿರೂಪಿಸಿದರು, ಗಣಕಯಂತ್ರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅನಿತಾ ಸ್ವಾಗತಿಸಿದರೆ ಶಿವಲೀಲಾ ಪಾಟೀಲ ವಂದಿಸಿದರು.