ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆಗೆ ಜೀವಬೆದರಿಕೆ ಹಾಕಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಸುರೇಶ ಹಾದಿಮನಿ,ಬಿ.ಸಿ. ವಾಲಿ, ಹೆಚ್.ಶಂಕರ, ಎಸ್.ಪಿ.ಸುಳ್ಳದ್, ಅಂಬಣ್ಣಾ ಜೀವಣಗಿ, ಉಮೇಶ ನರೋಣಾ, ಕೃಷ್ಣಪ್ಪ ಕರಣಿಕ, ಮಹಾದೇವ ತರನಳ್ಳಿ, ರೇವಣಸಿದ್ಧ ಜಾಲಿ, ಮಲ್ಲಣ್ಣ ಕೊಡಚಿ, ಶಿವಶರಣ ಮಾರಡಗಿ, ಸುಭಾಷ ಡಾಂಗೆ, ಮಹಾಲಿಂಗ ಅಂಗಡಿ, ಆಡಿಗೇಶ, ಶಿವಪುತ್ರ ರಾಗಿ, ತಿಪ್ಪಣ್ಣ ಕನ್ನಿಕಲ್, ಜೈಭೀಮ ಕೊರಳ್ಳಿ, ರತ್ನಾಕರ ಪಟ್ಟಣಕರ್, ಮೈಲಾರಿ ದೊಡ್ಡಮನಿ. ದೇವಿಂದ್ರ ದೊಡ್ಡಮನಿ ಮುಂತಾದವರು ಭಾಗವಹಿಸಿದರು .