ಹಳ್ಳಿಖೇಡ(ಬಿ) ಸೀಮಿನಾಗನಾಥ ಜಾತ್ರಾ ಮಹೋತ್ಸವ, ಪೂರ್ವ ಭಾವಿ ಸಭೆ

ಹುಮನಾಬಾದ್ :ಅ.16: ತಾಲ್ಲೂಕಿನ ಹಳ್ಳಿಖೇಡ(ಬಿ)ನ್ ಸೀಮಿನಾಗನಾಥ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ ಅವರ ಅಧ್ಯಕ್ಷಯಲ್ಲಿ ಪುರ್ವ ಭಾವಿ ಸಭೆ ಜರುಗಿತು.

ಶಾಸಕ ಡಾ. ಸಿದ್ದು ಪಾಟೀಲ ಅವರು ಮಾತನಾಡಿ, ಹಳ್ಳಿಖೇಡ(ಬಿ)ನ್ ಸೀಮಿನಾಗನಾಥ ಜಾತ್ರಾ ಮಹೋತ್ಸವಕ್ಕೆ ಬೀದರ್ ಜಿಲ್ಲೆ ಸೇರಿದಂತೆ ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಿಂದ ಅಪಾರ ಭಕ್ತಾದಿಗಳು ಆಗಮಿಸುತ್ತಾರೆ, ಸೀಮಿನಾಗನಾಥ ದೇವರ ದರ್ಶನ ಪಡೆಯಲು ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತರಹದ ಮೂಲ ಸೌಕರ್ಯಗಳ ಕೋರತೆ ಉಂಟಾಗದಂತೆ ಸಂಬಂಧ ಪಟ್ಟವರು ಮುಂಜಾಗ್ರತೆವಹಿಸಬೇಕು, ಜಾತ್ರಾ ಮಹೋತ್ಸವದಲ್ಲಿ ನೀರು, ವಸತಿ ಗೃಹ, ಸ್ನಾನಕುಂಡ, ವಿದ್ಯುತ್ ಸೇರಿದಂತೆ ಇನ್ನಿತರ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ದೇವಾಲಯದ ಸುತ್ತಲೂ, ಸಿ.ಸಿ.ಕ್ಯಾಮರಗಳನ್ನು ಅಳವಡಿಸಬೇಕು ಎಂದು ತಿಳಿಸಿದ ಅವರು ಸೀಮಿನಾಗನಾಥ ದೇವರ ಜಾತ್ರಾ ಮಹೋತ್ಸವದ ಯಶಸ್ವಿಗಾಗಿ ದೇವಾಲಯದ ಆಡಳಿತ ಅಧಿಕಾರಿ, ಸಿಂಬಂದಿ ವರ್ಗ, ಹಳ್ಳಿಖೇಡ(ಬಿ) ಪಟ್ಟಣದ ಸಾರ್ವಜನಿಕರು ಹಾಗೂ ಸಮಸ್ತ ಭಕ್ತಾದಿಗಳಿಗೂ ತಮ್ಮ ಸಹಾಯ, ಸಹಕಾರ ನೀಡುವುದಾಗಿ ಶಾಸಕ ಡಾ. ಸಿದ್ದು ಪಾಟೀಲ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಂಜುಮ್ ತಬ್ಬಸಮ್, ಯುವ ಉದ್ಯಮಿ ಸಂತೋಷ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಶಂಕರ ಪಾಟೀಲ, ದೇವಾಲಯದ ಕಾರ್ಯದರ್ಶಿ ಅನಿಲ ಸ್ವಾಮಿ, ಕಂದಾಯ ನಿರೀಕ್ಷಕ ರಾಹುಲ, ಇದ್ದರು.