
ಕಲಬುರಗಿ: ಧರ್ಮಸ್ಥಳದಲ್ಲಿ ಸೌಜನ್ಯ ಕೊಲೆಯಾಗಿ ಹದಿಮೂರು ವರ್ಷವಾದರೂ ಇನ್ನೂ ನೈಜ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ನ್ಯಾಯಕ್ಕಾಗಿ ಜನಾಗ್ರಹ ದಿನ ಆಚರಿಸಿ ಹಕ್ಕೋತ್ತಾಯಗಳ ಆಗ್ರಹ ಪತ್ರ ಸಲ್ಲಿಸಲಾಯಿತು. ಕೆ.ನೀಲಾ, ಡಾ.ಪ್ರಬು ಖಾನಾಪುರೆ, ಪವಿತ್ರ ವಸ್ತ್ರದ, ಪದ್ಮಾ ಪಾಟೀಲ, ವಿದ್ಯಾ, ಸರ್ವೇಶ, ಕೋದಂಡರಾಮ, ಪುಟ್ಟಮ್ಮ, ಪದ್ಮಿನಿ ಕಿರಣಗಿ ಸೇರಿದಂತೆ ಮತ್ತಿತರರು ಇದ್ದರು.