ರಕ್ತದಾನ ಶಿಬಿರ


ಸವಣೂರ,ಅ.೫: ತಾಲೂಕು ಮಾವೂರ ಗ್ರಾಮದಲ್ಲಿ ಶನಿವಾರ ದಿ.ಫಕ್ಕೀರಪ್ಪ ಬಸಪ್ಪ ಅಂಗಡಿ ಅವರ ಕೈಲಾಸ ಶಿವಗಣಾರಾಧನೆ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು. . ಫಕ್ಕೀರಪ್ಪ ಅಂಗಡಿ ಅವರು ಇತ್ತೀಚೆಗೆ ನಿಧನ ಹೊಂದಿದ್ದರು. ಅವರ ಕೈಲಾಸ ಶಿವಗಣಾರಾಧನೆ ಅಂಗವಾಗಿ ಮಾವೂರ ಗ್ರಾಮದ ತೋಟದ ಮನೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ೫೦ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.


ದೇವರಗುಡ್ಡ ದೇವಸ್ಥಾನ ಕಮಿಟಿ ಚೇರ್ಮನ್ ಭರಮಪ್ಪ ಉರ್ಮಿ, ಅಧ್ಯಕ್ಷ ಗವಿಸಿದ್ದಪ್ಪ ದ್ಯಾಮಣ್ಣನವರ, ಜಯತೀರ್ಥ ಕಟ್ಟಿ, ಕೆ.ಎನ್.ಪಾಟೀಲ, ನಿರಂಜನ ಪೂಜಾರ, ಮಲ್ಲಿಕಾರ್ಜುನಗೌಡ ಪಾಟೀಲ, ಈರನಗೌಡ ಪಾಟೀಲ, ಜಯಪ್ರಕಾಶ ಬದಾಮಿ, ಗಿರೀಶ ಗಾಣಿಗೇರ, ಶರಣು ಗೊಡ್ಡೆಮ್ಮಿ, ಅಂಗಡಿ ಕುಟುಂಬದವರು, ಇತರರಿದ್ದರು.
ಹಿರಿಯ ವಕೀಲ ಶರಣು ಅಂಗಡಿ ಮಾತನಾಡಿ


ನಮ್ಮ ತಂದೆಯವರು ಹಲವರಿಗೆ ಸಹಾಯ ಮಾಡುತ್ತ ತುಂಬು ಜೀವನ ನಡೆಸಿದ್ದರು. ಅವರ ಸ್ಮರಣಾರ್ಥ ಕೈಲಾಸ ಶಿವಗಣಾರಾಧನೆ ಇತರರಿಗೆ ಮಾದರಿ ಆಗಬೇಕೆಂಬ ಉದ್ದೇಶದಿಂದ ಇಂದು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ಮೂಲಕ ಹಲವರಿಗೆ ಜೀವದಾನ ಮಾಡಿದ ಸಾರ್ಥಕತೆ ಇದೆ. ನಮ್ಮ ಕುಟುಂಬಸ್ಥರು, ಬಂಧು, ಬಳಗದವರು, ಸ್ನೇಹಿತರು ಸೇರಿ ೫೦ಕ್ಕೂ ಹೆಚ್ಚು ಯೂನಿಟ್ ರಕ್ತದಾನ ಮಾಡಲಾಗಿದೆ ಎಂದರು.